ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chinthamani News: ಅ.28 ರಂದು ಶಬರಿ ಜನ ಸೇವಾ ಟ್ರಸ್ಟ್ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಅ.28 ರಂದು ಚಿಂತಾಮಣಿ ನಗರದ ಸಿವಿಲ್ ಬಸ್ಟ್ಯಾಂಡ್ ಹತ್ತಿರವಿರುವ ಶ್ರೀ ವಿದ್ಯಾಗಣಪತಿ ರಂಗ ಮಂದಿರದಲ್ಲಿ ಆಯೋಜಿಸ ಲಾಗಿದ್ದು ಪ್ರತಿಯೊಬ್ಬರೂ ಪಾಲ್ಗೊಂಡು ರಕ್ತದಾನ ಕೊಡುವುದರ ಮೂಲಕ ಯಶಸ್ವಿಗೊಳಿಸ ಬೇಕೆಂದು ಶಬರಿ ಜನ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಬಡಗವಾರಹಳ್ಳಿ ಶಬರೀಶ ರವರು ಮನವಿ ಮಾಡಿ ಕೊಂಡರು.

ರಕ್ತದಾನ ಶಿಬಿರದಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ಯಶಸ್ವಿಗೊಳಿಸಲು ಮನವಿ

-

Ashok Nayak Ashok Nayak Oct 27, 2025 12:37 AM

ಚಿಂತಾಮಣಿ:ಶಬರಿ ಜನ ಸೇವಾ ಟ್ರಸ್ಟ ವತಿಯಿಂದ ಡಾ!ಪುನೀತ್ ರಾಜ್ ಕುಮಾರ್ ರವರ ಪುಣ್ಯ ತಿಥಿ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಅ.28 ರಂದು ಚಿಂತಾಮಣಿ ನಗರದ ಸಿವಿಲ್ ಬಸ್ಟ್ಯಾಂಡ್ ಹತ್ತಿರವಿರುವ ಶ್ರೀ ವಿದ್ಯಾಗಣಪತಿ ರಂಗ ಮಂದಿರದಲ್ಲಿ ಆಯೋಜಿಸ ಲಾಗಿದ್ದು ಪ್ರತಿಯೊಬ್ಬರೂ ಪಾಲ್ಗೊಂಡು ರಕ್ತದಾನ ಕೊಡುವುದರ ಮೂಲಕ ಯಶಸ್ವಿಗೊಳಿಸ ಬೇಕೆಂದು ಶಬರಿ ಜನ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಬಡಗವಾರಹಳ್ಳಿ ಶಬರೀಶ ರವರು ಮನವಿ ಮಾಡಿ ಕೊಂಡರು.

ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ

ಇಂದು ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಬೆಳಿಗ್ಗೆ 8-00 ರಿಂದ ಸಂಜೆ 5-00 ರವರೆಗೆ ರಕ್ತದಾನ ಶಿಬಿರ ನಡೆಯಲಿದೆ. ಇದರಲ್ಲಿ ಭಾಗವಹಿಸಿ ರಕ್ತದಾನ ಮಾಡಿ ಪ್ರಾಣಧಾತರಾಗಿ ಎಂದು ಹೇಳಿದ ಅವರು ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ.

ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ.ಮಾನಸಿಕ ಸಂತೃಪ್ತಿ ಹೊಂದಬಹುದು.ಹೃದಯದ ಹಾಗೂ ಕಿಡ್ನಿಗೆ ಸಂಬಂಧಿಸಿದ ಕಾಯಿಲೆಗಳು ದೂರವಾಗುತ್ತವೆ ಎಂದು ವಿವರಿಸಿದರು.