ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gudibande News: ಯುವಜನತೆ ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು : ಉನ್ನತಿ ವಿಶ್ವನಾಥ್

ಇಂದು ರಕ್ತದ ಅವಶ್ಯಕತೆ ತುಂಬಾನೆ ಅಗತ್ಯವಾಗಿದೆ. ಪ್ರಪಂಚದಲ್ಲಿ ಉತ್ಪಾದಿಸಲು ಆಗದೇ ಇರುವಂತ ಹುದು ರಕ್ತ ಮಾತ್ರ. ಅನೇಕರಿಗೆ ರಕ್ತದಾನ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂದು ಹೇಳಲಾಗುತ್ತದೆ. ಆದರೆ ಇದು ತಪ್ಪು ಕಲ್ಪನೆ, ರಕ್ತದಾನ ಮಾಡುವುದರಿಂದ ತಮ್ಮ ಆರೋಗ್ಯವೂ ಸಹ ಚುರುಕುಗೊಳ್ಳುತ್ತದೆ. ಇನ್ನೂ ಆರೋಗ್ಯವಂತ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು.

ಯುವಜನತೆ ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಗಣ್ಯರು ಚಾಲನೆ ಕೊಟ್ಟರು. -

Ashok Nayak Ashok Nayak Oct 13, 2025 12:24 AM

ಗುಡಿಬಂಡೆ: ಎಲ್ಲಾ ದಾನಗಳಿಗಿಂತ ರಕ್ತದಾನ ಶ್ರೇಷ್ಟವಾದುದು, ತಾವು ನೀಡುವ ಒಂದು ಯೂನಿಟ್ ರಕ್ತ ಹಲವರ ಜೀವನದಲ್ಲಿ ಬೆಳಕು ಮೂಡುವಂತೆ ಮಾಡುತ್ತದೆ. ಈ ನಿಟ್ಟಿನಲ್ಲಿ ಯುವಜನತೆ ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಿ ಬೇರೊಬ್ಬರ ಜೀವನ ಉಳಿಸುವಂತಹ ಕೆಲಸ ಮಾಡಬೇಕೆಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ತಾಲೂಕು ಕಾರ್ಯದರ್ಶಿ ವಕೀಲ ಜಿ.ವಿ.ವಿಶ್ವನಾಥ್ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾರತೀಯ ರೆಡ್ ಕ್ರಾಸ್, ತಾಲೂಕು ಆರೋಗ್ಯ ಇಲಾಖೆ, ಉರ್ದು ಸಾಹಿತ್ಯ ಪರಿಷತ್, ಪತ್ರಕರ್ತರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗ ದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ರಕ್ತದ ಅವಶ್ಯಕತೆ ತುಂಬಾನೆ ಅಗತ್ಯವಾಗಿದೆ. ಪ್ರಪಂಚದಲ್ಲಿ ಉತ್ಪಾದಿಸಲು ಆಗದೇ ಇರುವಂತಹುದು ರಕ್ತ ಮಾತ್ರ. ಅನೇಕರಿಗೆ ರಕ್ತದಾನ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂದು ಹೇಳಲಾಗುತ್ತದೆ. ಆದರೆ ಇದು ತಪ್ಪು ಕಲ್ಪನೆ, ರಕ್ತದಾನ ಮಾಡುವುದರಿಂದ ತಮ್ಮ ಆರೋಗ್ಯವೂ ಸಹ ಚುರುಕುಗೊಳ್ಳುತ್ತದೆ. ಇನ್ನೂ ಆರೋಗ್ಯವಂತ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು. ರಕ್ತದಾನ ಮಾಡುವ ಮೂಲಕ ಅಪಾಯದಲ್ಲಿರು ವಂತಹರ ಪ್ರಾಣ ಕಾಪಾಡಲು ಮುಂದಾಗಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ: Gudibande News: ಯುವಜನತೆ ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು: ವಕೀಲ ಉನ್ನತಿ ವಿಶ್ವನಾಥ್

ಬಳಿಕ ಉರ್ದು ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ಮೊಹಮದ್ ನಾಸೀರ್ ಮಾತನಾಡಿ, ರಕ್ತದಾನವು ಮಹಾದಾನವಾಗಿದ್ದು ಅರ್ಹರು ರಕ್ತವನ್ನು ದಾನ ಮಾಡುವುದರ ಮೂಲಕ ಇನ್ನೊಂದು ಜೀವವನ್ನು ಉಳಿಸಲು ಮುಂದಾಗಬೇಕಾಗಿದೆ. ರಕ್ತವನ್ನು ರೋಗಿಗಳಿಗೆ ಮತ್ತು ಅಪಘಾತಕ್ಕೆ ಈಡಾದವರಿಗೆ ದಾನ ಮಾಡಲು ಮುಂದೆ ಬಂದಲ್ಲಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದಂತಾಗುತ್ತದೆ  ರಕ್ತದಾನದಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗುವುದರಿಂದ ಉತ್ತಮ ಆರೋಗ್ಯವು ಸಹ ದೊರೆಯುತ್ತದೆ. ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡಲು ಇದು ಸಹಕಾರಿ ಯಾಗಿದ್ದು ಹೃದಯಾಘಾತವನ್ನು ತಡೆಯಲು ಸಾಧ್ಯವಾಗುತ್ತದೆ. ರಕ್ತವನ್ನು ದಾನ ಮಾಡಿದರೆ ಪರೋಕ್ಷವಾಗಿ ಹಲವಾರು ಜೀವಗಳನ್ನು ಉಳಿಸಿದಂತಾಗುತ್ತದೆ. ಯಾವುದೇ ವ್ಯಕ್ತಿಯು ಪ್ರತಿಫಲಾ ಪೇಕ್ಷೆಯಿಲ್ಲದೇ ಸ್ವಯಂ ಪ್ರೇರಿತನಾಗಿ ರಕ್ತದಾನ ಮಾಡುವುದು ಉಪಕಾರದ ಕಾರ್ಯವಾಗಿದೆ ಎಂದರು.

ಈ ಸಮಯದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪ್ರದೀಪ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶ್ರೀರಾಮಪ್ಪ, ಚಿಕ್ಕಬಳ್ಳಾಪುರ ರಕ್ತ ನಿಧಿ ಘಟಕದ ಡಾ.ರಿಜ್ವಾನ್, ಅನ್ಸರ್ ಉಲ್ಲಾ, ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಕೇಂದ್ರದ ಸುದರ್ಮನ್, ಬಿಪಿಎಂ ಮುಭಾರಕ್, ಲಲಿತಾ, ಪರಿಸರ ವೇದಿಕೆಯ ನವೀನ್, ಯುವ ಮುಖಂಡ ಆಫ್ರೀದ್ ಖಾನ್, ಪಪಂ ಸದಸ್ಯ ರಾಜೇಶ್ ಸೇರಿದಂತೆ ಹಲವರು ಇದ್ದರು.