ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkamagaluru News: ಜಮೀನು ವಿವಾದ; ಕಾಂತಾರ ಸ್ಟೈಲ್‌ನಲ್ಲಿ ಪಂಜು ಹಿಡಿದು ಮಹಿಳೆ ಮೇಲೆ ಹಲ್ಲೆ ಮಾಡಿದ ವ್ಯಕ್ತಿ!

Assault Case: ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಚಿಕ್ಕನಗುಂಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಜಮೀನು ಸರ್ವೆ ಮಾಡುವ ವೇಳೆ ದೈವ ಮೈಮೇಲೆ ಬಂದಿದೆ ಎನ್ನುವ ರೀತಿ ವ್ಯಕ್ತಿಯೊಬ್ಬ ವರ್ತಿಸಿದ್ದು, ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ನೋಡಿ ಪೊಲೀಸರು ಹಾಗೂ ಅಧಿಕಾರಿಗಳು ಶಾಕ್‌ ಆಗಿದ್ದಾರೆ.

ಕಾಂತಾರ ಸ್ಟೈಲ್‌ನಲ್ಲಿ ಪಂಜು ಹಿಡಿದು ಮಹಿಳೆ ಮೇಲೆ ಹಲ್ಲೆ ಮಾಡಿದ ವ್ಯಕ್ತಿ!

-

Prabhakara R
Prabhakara R Nov 6, 2025 4:27 PM

ಚಿಕ್ಕಮಗಳೂರು, ನ.6: ಜಮೀನು ಸರ್ವೆ ವೇಳೆ ಕೈಯಲ್ಲಿ ಪಂಜು ಹಿಡಿದು ಕಾಂತಾರ ಸಿನಿಮಾದಲ್ಲಿ ಬರುವ ದೈವದ ರೀತಿಯಲ್ಲೇ ವರ್ತಿಸಿ ವ್ಯಕ್ತಿಯೊಬ್ಬ ಹೈಡ್ರಾಮಾ ನಡೆಸಿರುವ ಪ್ರಸಂಗ ಚಿಕ್ಕಮಗಳೂರು ಜಿಲ್ಲೆ (Chikkamagaluru News) ಕೊಪ್ಪ ತಾಲೂಕು ಚಿಕ್ಕನಗುಂಡಿ ಗ್ರಾಮದಲ್ಲಿ ನಡೆದಿದೆ. ಜಮೀನು ಸರ್ವೆ ಮಾಡುವ ಸ್ಥಳದಲ್ಲಿ ದೈವ ಮೈಮೇಲೆ ಬಂದಿದೆ ಎನ್ನುವ ರೀತಿ ಸುರೇಶ್ ಎಂಬಾತ ವರ್ತಿಸಿದ್ದು, ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ.

ಘಟನೆ ಕಂಡು ಜಮೀನು ಸರ್ವೆಗೆ ಬಂದಿದ್ದ ಅಧಿಕಾರಿಗಳು, ಪೊಲೀಸರು ಶಾಕ್ ಆಗಿದ್ದಾರೆ. ಸುರೇಶ್ ಅಣ್ಣ ತಮ್ಮರ ನಡುವೆ ಪಿತ್ರಾರ್ಜಿತ ಆಸ್ತಿಗಾಗಿ ಗಲಾಟೆ ನಡೆದಿದ್ದು, ಸರ್ವೆ ನಡೆಸುವಂತೆ ಕೊಪ್ಪ ಜೆಎಂಎಫ್‌ಸಿ ಕೋರ್ಟ್ ಆದೇಶಿಸಿತ್ತು. ಹೀಗಾಗಿ, ಜಮೀನು ಸರ್ವೆ ನಡೆಸಲಾಗುತ್ತಿದ್ದ ವೇಳೆ ಪಂಜು ಹಿಡಿದು ಬಂದ ಸುರೇಶ್, ತನ್ನ ತಮ್ಮನ ಹೆಂಡತಿ ರಮ್ಯಾ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ನಾವು ಜಮೀನು ಸರ್ವೆ ಮಾಡಿಸುತ್ತಿದ್ದೆವು. ಈ ವೇಳೆ ನಮ್ಮ ಗಂಡನ ಸಹೋದರ, ದೈವ ಬಂದ ರೀತಿಯಲ್ಲಿ ಕೈಯಲ್ಲಿ ದೊಂದಿ ಹಿಡಿದು ಹಲ್ಲೆ ಮಾಡಿದ್ದಾರೆ. ಅದೇ ರೀತಿ ತೋಟದಲ್ಲಿ ವಾಮಾಚಾರ ಮಾಡಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಹಲ್ಲೆಗೊಳಗಾದ ಮಹಿಳೆ ರಮ್ಯಾ ಆರೋಪಿಸಿದ್ದಾರೆ.

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಣಿ ನೇಣಿಗೆ ಶರಣು

shivamogga student death

ಶಿವಮೊಗ್ಗ, ನ. 05: ಬಿಎಸ್ಸಿ ವಿದ್ಯಾರ್ಥಿನಿ ಅನುಮಾಸ್ಪದವಾಗಿ ಸಾವನ್ನಪ್ಪಿರುವ (Student Death) ಘಟನೆ ಶಿವಮೊಗ್ಗದ ಅಂಬೇಡ್ಕರ್ ವಸತಿನಿಲಯದಲ್ಲಿ ನಡೆದಿದೆ. ವನಿಷಾ (21) ಮೃತ ವಿದ್ಯಾರ್ಥಿನಿ. ಶಿವಮೊಗ್ಗದ ಕೋಟೆ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್ ಅಂಬೇಡ್ಕರ್ ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಟೆರೆಸ್ ಮೇಲೆ ವನಿಷಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮನಿಷಾ ಮೃತದೇಹ ಹಾಸ್ಟೆಲ್ ಮಹಡಿ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ವನಿಷಾ (21) ಇನ್ನೇನು ಕಾಲೇಜ್ ಹೋಗುವ ಸಮಯದಲ್ಲಿ ತಿಂಡಿ ಮಾಡಿಕೊಂಡು ಹಾಸ್ಟೆಲ್​​ ಟೆರೇಸ್ ಮೇಲೆ ಹೋಗಿದ್ದಾಳೆ. ಆದರೆ, ಸ್ವಲ್ಪ ಹೊತ್ತಿನ ಬಳಿಕ ಟ್ಯಾಂಕ್ ಪಕ್ಕದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮನಿಷಾ ಶವ ಪತ್ತೆಯಾಗಿದೆ. ಟೆರೇಸ್ ಮೇಲೆ ಬಟ್ಟೆ ಹಾಕಲು ಹೋಗಿದ್ದ ವಿದ್ಯಾರ್ಥಿನಿಯರು ನೋಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Self Harming: ಯುವತಿ ಅನುಮಾನಾಸ್ಪದ ಸಾವು; ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಮಗಳ ಸಾವಿನ ಸುದ್ದಿ ತಿಳಿದ ಹೆತ್ತವರ ಅಕ್ರಂದನ ಮುಗಿಲು ಮುಟ್ಟಿದೆ. ಮಗಳು ಚೆನ್ನಾಗಿಯೇ ಇದ್ದಳು. ಹತ್ತಿರದಲ್ಲೇ ಇರುವ ತನ್ನ ಊರಿಗೆ ಬಂದು ಹೋಗುತ್ತಿದ್ದಳು. ಆದರೆ ಏಕಾಏಕಿ ಮಗಳು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೆತ್ತವರಿಗೆ ನಂಬಲು ಆಗುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಸಮಸ್ಯೆ ಅವಳಿಗೆ ಇರಲಿಲ್ಲ ಎನ್ನುವುದು ಪೋಷಕರ ಮಾತು. ಹೀಗಾಗಿ ಹಾಸ್ಟೆಲ್‌ನಲ್ಲೇ ನೇಣು ಹಾಕಿಕೊಂಡಿರುವುದು ನೂರೆಂಟು ಅನುಮಾನಗಳನ್ನು ಹುಟ್ಟಿಹಾಕಿದೆ.

ಸಾಯುವ ಹಿಂದಿನ ರಾತ್ರಿ ವನಿಷಾ ಫೋನಿನಲ್ಲಿ ತಾಯಿ ಜೊತೆ ಮಾತನಾಡಿದ್ದು, ಬೆಳಗ್ಗೆ ಊರಿಗೆ ಬರುತ್ತೇನೆಂದು ಹೇಳಿದ್ದಳು. ಆದರೆ ಬೆಳಗ್ಗೆ ಊರಿಗೆ ಶವವಾಗಿ ಹೋಗಿದ್ದಾಳೆ. ಬಡತನ ನಡುವೆ ಮಗಳಿಗೆ ವಿದ್ಯಾಭ್ಯಾಸ ಕೊಡಿಸುವುದೇ ದೊಡ್ಡ ಸವಾಲು ಅಗಿತ್ತು. ಈಗ ಮಗಳ ಸಾವಿನಿಂದ ತಾಯಿಗೆ ದಿಕ್ಕೇ ತೋಚದಂತಾಗಿದೆ.

ವನಿಷಾ ತುಂಬಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಬಡತನದ ನಡುವೆ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಳು. ಆದರೆ ನಿನ್ನೆ ಮತ್ತು ಇಂದು ಹಾಸ್ಟೆಲ್ ವಾರ್ಡನ್ ಸ್ವಪ್ನಾ ಎಲ್ಲಾ ವಿದ್ಯಾರ್ಥಿನಿಯರ ಮುಂದೆ ನಿಷಾಗೆ ಬೈದಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಸೋದರ ಮಾವ ಮಂಜುನಾಥ್ ಆರೊಪಿಸಿದ್ದಾರೆ.

ಮನಿಷಾ ಸಾವಿನ ಬಳಿಕ ವಾರ್ಡನ್​, ಕುಟುಂಬಸ್ಥರಿಗೆ ಕರೆ ಮಾಡಿ ಮಾತ್ರೆ ತೆಗೆದುಕೊಂಡಿದ್ದಾಳೆ ಬೇಗ ಬನ್ನಿ ಎಂದು ಹೇಳಿದ್ದಾರೆ. ಆದರೆ ನೇಣು ಹಾಕಿಕೊಂಡಿರುವ ಸಂಗತಿ ಬಿಟ್ಟು ಮಾತ್ರೆ ಎಂದು ವಾರ್ಡನ್ ಹೇಳಿದ್ದು ಯಾಕೆ ಎನ್ನುವುದು ಮೃತಳ ಸಂಬಂಧಿಕರ ಪ್ರಶ್ನೆಯಾಗಿದ್ದು, ಸಾವಿನ ಬಗ್ಗೆ ಪೊಲೀಸರು ತನಿಖೆ ಮಾಡಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Train Accident: ಎರಡು ರೈಲುಗಳ ನಡುವೆ ಡಿಕ್ಕಿ; ನಾಲ್ವರ ಸಾವು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ

ಸ್ಥಳಕ್ಕೆ ಸಮಾಜ ಕಲ್ಯಾಣ ಅಧಿಕಾರಿ ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿ ವಿದ್ಯಾರ್ಥಿನಿಯ ಸಾವಿನ ಬಗ್ಗೆ ನಿಖರವಾದ ಕಾರಣ ತಿಳಿದುಬರಬೇಕಿದೆ.