Winter Fashion 2025: ಯುವಕ-ಯುವತಿಯರನ್ನು ಆವರಿಸಿಕೊಂಡ ಯೂನಿಸೆಕ್ಸ್ ಪಫರ್ ಜಾಕೆಟ್ಸ್
Puffer Jackets: ಚಳಿಗಾಲ ಎಂಟ್ರಿ ನೀಡುತ್ತಿದ್ದಂತೆಯೇ ಪಫರ್ ಜಾಕೆಟ್ಗಳು ಯುವಕ-ಯುವತಿಯರನ್ನು ಆವರಿಸಿಕೊಂಡಿವೆ. ಟ್ರಾವೆಲ್, ವೀಕೆಂಡ್ ಸಮಯದಲ್ಲಿ ಮಾತ್ರವಲ್ಲ, ಇತರೇ ಸಮಯದಲ್ಲೂ ಸವಾರಿ ಮಾಡುತ್ತಿವೆ. ಯಾವ್ಯಾವ ಬಗೆಯವು ಈ ಸೀಸನ್ಗೆ ಎಂಟ್ರಿ ನೀಡಿವೆ? ಇಲ್ಲಿದೆ ಮಾಹಿತಿ.
ಚಿತ್ರಕೃಪೆ: ಪಿಕ್ಸೆಲ್ -
ಈ ಬಾರಿಯ ಚಳಿಗಾಲದಲ್ಲಿ ಯೂನಿಸೆಕ್ಸ್ ಪಫರ್ ಜಾಕೆಟ್ಗಳು ಯುವಕ-ಯುವತಿಯರನ್ನು ಆವರಿಸಿಕೊಂಡಿವೆ. ಹೌದು, ಮೊದಲೆಲ್ಲಾ ಕೇವಲ ಹುಡುಗರು ಧರಿಸುತ್ತಿದ್ದ ಈ ಶೈಲಿಯ ಜಾಕೆಟ್ಗಳು ಇದೀಗ ಹುಡುಗಿಯರನ್ನು ಸೆಳೆದಿವೆ. ಅದರಲ್ಲೂ ಬ್ಲ್ಯಾಕ್, ಬ್ರೌನ್ ಹಾಗೂ ಡಾರ್ಕ್ ಶೇಡ್ಗಳ ಯೂನಿಸೆಕ್ಸ್ ಪಫರ್ ಜಾಕೆಟ್ಗಳು ಹೆಚ್ಚು ಟ್ರೆಂಡಿಯಾಗಿವೆ.
ವೈವಿಧ್ಯಮಯ ಪಫರ್ ಜಾಕೆಟ್ಸ್
ಮಲ್ಟಿ ಪಾಕೆಟ್ ಪಫರ್ ಜಾಕೆಟ್, ವೀನೆಕ್ ಫರ್ ಮಿಕ್ಸ್ ಪಫ್ ಕೋಟ್, ಡೌನ್ ಕ್ವಿಲ್ಟಿಂಗ್ ಪಫರ್ ಕೋಟ್, ಡಿಟ್ಯಾಚಬಲ್ ಪಫರ್ ಜಾಕೆಟ್ ಸೇರಿದಂತೆ ನಾನಾ ಬಗೆಯ ಯೂನಿಸೆಕ್ಸ್ ಪಫರ್ ಜಾಕೆಟ್ಗಳು ಚಾಲ್ತಿಯಲ್ಲಿವೆ. ಈ ಪಫರ್ ಜಾಕೆಟ್ಗಳು ಎಕ್ಸ್ಟ್ರೀಮ್ ಚಳಿಯನ್ನು ತಡೆಯುತ್ತವೆ. ದೇಹದ ತಾಪಮಾನವನ್ನು ಕಾಪಾಡುತ್ತವೆ. ಹೊರಗಿನ ವಾತಾವರಣದಲ್ಲಿನ ಚಳಿಯಿಂದ ದೇಹವನ್ನು ಸಂರಕ್ಷಿಸುತ್ತವೆ. ದೇಹವನ್ನು ಬೆಚ್ಚಗಿಡುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಗ.
ಯೂನಿಸೆಕ್ಸ್ ಪಫರ್ ಜಾಕೆಟ್ ಆಯ್ಕೆ ಹೀಗಿರಲಿ
ಸ್ಲಿಮ್ ಹುಡುಗಿಯರಿಗೆ ಯಾವುದಾದರೂ ಓಕೆ. ಪ್ಲಂಪಿಯಾಗಿರುವವರು ಆದಷ್ಟೂ ಇದನ್ನು ಅವಾಯ್ಡ್ ಮಾಡಬೇಕು. ಧರಿಸಲೇ ಬೇಕೆಂಬ ಆಸೆ ಇರುವವರು ಆದಷ್ಟೂ ನೀ ಲೆಂತ್ ಇರುವ ಲಾಂಗ್ ಪಫರ್ ಜಾಕೆಟ್ಗಳನ್ನು ಸೆಲೆಕ್ಟ್ ಮಾಡಿದರೇ ಉತ್ತಮ. ವೈನ್, ಮೆಜಂತಾ, ರಸ್ಟ್ ರೆಡ್, ಆರೆಂಜ್, ರೆಡ್, ಬ್ರೌನ್ಸ್, ಟ್ಯಾನ್ಸ್ ಹಾಗೂ ಕ್ರೀಮ್ ವರ್ಣದ ಪಫರ್ ಜಾಕೆಟ್ಗಳು ಈ ಸಾಲಿನಲ್ಲಿ ಹುಡುಗರರ ಚಾಯ್ಸ್ನಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಜಾಕಿ.
ಎವರ್ಗ್ರೀನ್ ಟ್ರೆಂಡ್ನಲ್ಲಿ ಬ್ಲಾಕ್ ಪಫರ್ ಜಾಕೆಟ್
ಇನ್ನು, ಬ್ಲಾಕ್ ಕಲರ್ನ ಪಫರ್ ಜಾಕೆಟ್ಗಳು ಎವರ್ಗ್ರೀನ್ ಚಾಯ್ಸ್ ಎನ್ನಬಹುದು. ಎಲ್ಲಾಉಡುಪುಗಳ ಮೇಲೂ ಸೂಟ್ ಆಗುವ ಬ್ಲಾಕ್ ಶೇಡ್ನ ಜಾಕೆಟ್ಗಳಿಗೆ ಇಂದಿಗೂ ಬೇಡಿಕೆ ಕುಂದಿಲ್ಲ! ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಪಫರ್ ಜಾಕೆಟ್ ಪ್ರಿಯರಿಗೆ ಟಿಪ್ಸ್
- ಪರ್ಸನಾಲಿಟಿಗೆ ತಕ್ಕಂತೆ ಪಫರ್ ಜಾಕೆಟ್ಸ್ ಧರಿಸಿ.
- ವಿಂಟರ್ನಲ್ಲಿಆದಷ್ಟೂ ಬ್ರೈಟ್ ಶೇಡ್ ಆಯ್ಕೆ ಮಾಡಿ.
- ಬೈಕ್ ರೈಡರ್ಗಳಿಗೆ ಸಖತ್ತಾಗಿ ಕಾಣುತ್ತದೆ.
- ಟೂ ಇನ್ ಒನ್ ಕೂಡ ಕೊಳ್ಳಬಹುದು.