ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ತಾಯಿಯನ್ನು ಬೈದಿದ್ದಕ್ಕೆ ಸೋದರ ಮಾವನನ್ನೇ ಮುಗಿಸಿದ ಮಗ!

Murder Case: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ ಕೊಲೆ ಪ್ರಕರಣ ನಡೆದಿದೆ. ಆಸ್ತಿಗಾಗಿ ಅಕ್ಕ ಮತ್ತು ತಮ್ಮನ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಕೆಟ್ಟ ಪದಗಳಿಂದ ಬೈದ ಹಿನ್ನೆಲೆಯಲ್ಲಿ ಸೋದರ ಮಾವನನ್ನೇ ಮಗ ಹತ್ಯೆ ಮಾಡಿದ್ದಾನೆ.

ತಾಯಿಯನ್ನು ಬೈದಿದ್ದಕ್ಕೆ ಸೋದರ ಮಾವನನ್ನೇ ಮುಗಿಸಿದ ಮಗ!

Profile Prabhakara R Mar 19, 2025 9:44 PM

ಚಿಕ್ಕಮಗಳೂರು: ತಾಯಿಯನ್ನು ಬೈದಿದ್ದಕ್ಕೆ ಯುವಕನೊಬ್ಬ ಸೋದರ ಮಾವನ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ (Murder Case) ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಿದ್ದರಾಮೇಗೌಡ ಹತ್ಯೆಯಾದವರು. ಇವರ ಅಕ್ಕನ ಮಗ ಸಂಜಯ್ ಕೊಲೆ ಆರೋಪಿ ಎಂದು ತಿಳಿದುಬಂದಿದೆ. ತಂದೆಯ ಆಸ್ತಿಗಾಗಿ ಅಕ್ಕ ಮತ್ತು ತಮ್ಮನ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಅಕ್ಕನಿಗೆ ಸಹೋದರ ಕೆಲವು ಕೆಟ್ಟ ಪದಗಳಿಂದ ಬೈದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಅಕ್ಕನ ಮಗ ಸ್ವಂತ ಸೋದರಮಾವನ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.

ಮೃತ ಸಿದ್ದರಾಮೇಗೌಡ ಮತ್ತು ಆತನ ಅಕ್ಕ ನಿರ್ಮಲ ನಡುವೆ 26 ಎಕರೆ ತೆಂಗಿನ ತೋಟ, 24 ವಾಣಿಜ್ಯ ಮಳಿಗೆ, ಸೈಟ್ ವಿಚಾರವಾಗಿ ವಿವಾದವಿತ್ತು. ತಂದೆಯ ಆಸ್ತಿಗಾಗಿ ನಿರ್ಮಲ ನ್ಯಾಯಾಲಯದಲ್ಲಿ ಕೇಸ್ ಹಾಕಿದ್ದರು. ಇದೇ ವಿಚಾರವಾಗಿ ಗಲಾಟೆ ನಡೆದಿತ್ತು.

ಗಲಾಟೆ ವೇಳೆ ಸಿದ್ದರಾಮೇಗೌಡ ಅಕ್ಕನನ್ನು ಕೆಟ್ಟ ಪದಗಳಿಂದ ಬೈದಿದ್ದ. ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡ ಅಕ್ಕನ ಮಗ ಸಂಜಯ್ ಮರ್ಡರ್ ಪ್ಲಾನ್ ಮಾಡಿದ್ದ. ಅದರಂತೆ ಮಾರ್ಚ್ 14 ರ ಸಂಜೆ ಪಂಚನಹಳ್ಳಿ ಗ್ರಾಮಕ್ಕೆ ಬಂದಿದ್ದ. ಮಾವ ಸಿದ್ದರಾಮೇಗೌಡನ ಜತೆ ಕೂತು ಎಣ್ಣೆ ಹೊಡೆದಿದ್ದಾನೆ. ಈ ವೇಳೆ ತನ್ನ ತಾಯಿಗೆ ಬೈದಿದ್ದರ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಆಗಿದೆ. ಈ ವೇಳೆ ಡ್ರಿಪ್ ವೈರ್ ನಿಂದ ಕುತ್ತಿಗೆ ಬಿಗಿದು ಮಾವನನ್ನೇ ಸಂಜಯ್ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಈ ಸುದ್ದಿಯನ್ನೂ ಓದಿ | Swathi murder Case: ಸ್ವಾತಿ‌ ಬ್ಯಾಡಗಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ

ಆಟವಾಡುವಾಗ ಸಂಪ್‌ಗೆ ಬಿದ್ದು ಇಬ್ಬರು ಮಕ್ಕಳ ದುರ್ಮರಣ

ಕಲಬುರಗಿ: ಕಲಬುರಗಿಯಲ್ಲಿ (Kalaburagi news) ಒಂದು ಘೋರ ದುರಂತ ಸಂಭವಿಸಿದೆ. ಆಟವಾಡುತ್ತಿದ್ದ ಇಬ್ಬರು ಮಕ್ಕಳು ನೀರಿನ ಸಂಪ್‌ಗೆ (water Sump) ಬಿದ್ದು ದುರ್ಮರಣ (children death) ಹೊಂದಿದ ಘಟನೆ (Crime News) ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕೋಳಕೂರ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮೃತ ಮಕ್ಕಳನ್ನು ಗಿರೀಶ್ ತಿಪ್ಪಣ್ಣ (3) ಹಾಗೂ ತಿಪ್ಪಣ್ಣ ಅವರ ಸಹೋದರಿಯ ಮಗಳು ಶ್ರೇಷ್ಠಾ ಮಹೇಶ್ (2) ಎಂದು ಗುರುತಿಸಲಾಗಿದೆ.

ಆಟವಾಡುತ್ತಿದ್ದಾಗ ಇಬ್ಬರು ಮಕ್ಕಳು ಕಣ್ಮರೆ ಆಗಿದ್ದರು. ಪೋಷಕರು ಎಷ್ಟೇ ಹುಡುಕಾಡಿದರೂ ಮಕ್ಕಳು ಸಿಕ್ಕಿರಲಿಲ್ಲ. ಮಕ್ಕಳು ಕಾಣದೆ ಇದ್ದಾಗ ಗಾಬರಿಯಾದ ಪೋಷಕರು ಗ್ರಾಮದ ಸಿದ್ದಬಸವೇಶ್ವರ ದೇವಸ್ಥಾನದ ಮೈಕ್ ಮೂಲಕ ಮಕ್ಕಳು ಕಾಣೆಯಾಗಿರುವ ಬಗ್ಗೆ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದರು. ಕೊನೆಗೆ ಪೊಲೀಸರು ಸಂಪ್ ತೆರೆದು ನೋಡಿದಾಗ ಮಕ್ಕಳು ಒಳಗೆ ಬಿದ್ದಿರುವುದು ಗೊತ್ತಾಗಿದೆ. ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ |Physical Abuse: ಮಗಳನ್ನೇ ಹುರಿದು ಮುಕ್ಕಿದ ಕಾಮಪಿಶಾಚಿ ತಂದೆ ಬಂಧನ

ಆಟವಾಡುತ್ತ ಸಂಪ್‌ ಬಳಿಗೆ ಹೋದ ಮಕ್ಕಳು ಕುತೂಹಲದಿಂದ ಸಂಪ್‌ಗೆ ಬಾಗಿ ನೋಡಿದಾಗ ಬಿದ್ದಿರಬಹುದು ಎಂದು ಅನುಮಾನಿಸಲಾಗಿದೆ. ಆದರೆ ದುಷ್ಕೃತ್ಯದ ಸಾಧ್ಯತೆಯನ್ನು ಪೊಲೀಸರು ಪೂರ್ತಿ ನಿರಾಕರಿಸಿಲ್ಲ. ಹೆಚ್ಚಿನ ತನಿಖೆ ಪೊಲೀಸರಿಂದ ನಡೆಯುತ್ತಿದೆ.