CM Siddaramaiah: 14 ಸಚಿವರೊಂದಿಗೆ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್
ಜಮೀರ್ ಅಹಮದ್ ಖಾನ್, ಬೈರತಿ ಸುರೇಶ್, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಭೋಸರಾಜು, ಎಂ. ಬಿ. ಪಾಟೀಲ್, ಮಹದೇವಪ್ಪ ಎಚ್.ಸಿ., ಮುನಿಯಪ್ಪ ಕೆ.ಎಚ್. ರಾಮಲಿಂಗ ರೆಡ್ಡಿ, ಎಸ್.ಎಸ್. ಮಲ್ಲಿಕಾರ್ಜುನ್, ಸತೀಶ್ ಜಾರಕಿಹೊಳಿ, ಚಲುವರಾಯ ಸ್ವಾಮಿ, ಈಶ್ವರ ಖಂಡ್ರೆ, ಪ್ರಿಯಾಂಕ್ ಖರ್ಗೆ ಡಿನ್ನರ್‌ನಲ್ಲಿ ಭಾಗಿಯಾಗಿದ್ದರು.
ಡಿನ್ನರ್ ಮೀಟಿಂಗ್‌ಗೆ ಸಿಎಂ ಆಗಮನ -
ಬೆಂಗಳೂರು, ಮಾ.17: ಸೋಮವಾರ ರಾತ್ರಿ ಸಿಎಂ ಸಿದ್ದರಾಮಯ್ಯ (CM Siddaramaiah) ತಮ್ಮ ಕಾವೇರಿ ನಿವಾಸದಲ್ಲಿ ಸಚಿವರಿಗೆ (ministers) ಡಿನ್ನರ್ (Dinner meeting) ನೀಡಿದ್ದು 14 ಮಂದಿ ಭಾಗಿಯಾಗಿದ್ದಾರೆ. ಈ ಡಿನ್ನರ್ ಸಭೆಯಲ್ಲಿ ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ, ಜಿಬಿಎ ಚುನಾವಣೆಗಳ ತಯಾರಿ, ಒಳಮೀಸಲಾತಿ ವಿಚಾರ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಡಿನ್ನರ್, ಸಂಪುಟ ಪುನಾರಚನೆಗೆ ಹೆಚ್ಚಾಗುತ್ತಿರುವ ಒತ್ತಾಯದ ಮಧ್ಯೆ ಅಧಿವೇಶನ ನಡೆಯುತ್ತಿರುವಾಗ ಸಿಎಂ 14 ಸಚಿವರಿಗೆ ಮಾತ್ರ ಡಿನ್ನರ್ ನೀಡಿದ್ದು ಭಾರೀ ಕುತೂಹಲ ಮೂಡಿಸಿದೆ.
ಭಾಗವಹಿಸಿದ ಸಚಿವರು ಯಾರು?
ಜಮೀರ್ ಅಹಮದ್ ಖಾನ್, ಬೈರತಿ ಸುರೇಶ್, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಭೋಸರಾಜು, ಎಂ. ಬಿ. ಪಾಟೀಲ್, ಮಹದೇವಪ್ಪ ಎಚ್.ಸಿ., ಮುನಿಯಪ್ಪ ಕೆ.ಎಚ್., ರಾಮಲಿಂಗ ರೆಡ್ಡಿ, ಎಸ್.ಎಸ್. ಮಲ್ಲಿಕಾರ್ಜುನ್, ಸತೀಶ್ ಜಾರಕಿಹೊಳಿ, ಚಲುವರಾಯ ಸ್ವಾಮಿ, ಈಶ್ವರ ಖಂಡ್ರೆ, ಪ್ರಿಯಾಂಕ್ ಖರ್ಗೆ ಭಾಗಿಯಾಗಿದ್ದರು.
ಸ್ಪೀಕರ್ ಸಭಾತ್ಯಾಗ ಪ್ರಕರಣದಲ್ಲಿ ಸಚಿವರಿಗೆ ಸಿಎಂ ಪತ್ರ
ನಿನ್ನೆ ವಿಧಾನಸಭೆಯಿಂದ ಸ್ಪೀಕರ್ ಸಭಾತ್ಯಾಗ ಪ್ರಕರಣದಲ್ಲಿ ಗರಂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸದನದಲ್ಲಿ ಲಿಖಿತ ಪ್ರಶ್ನೆಗಳಿಗೆ ಉತ್ತರಿಸದಿರುವ ಸಚಿವರುಗಳಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಹೀಗಿದೆ:
ಕರ್ನಾಟಕ ವಿಧಾನಸಭೆಯ 16ನೇ ವಿಧಾನಸಭೆ (2023-2026) 1ನೇ ಅಧಿವೇಶನದಿಂದ 9ನೇ ಅಧಿವೇಶನದವರೆಗೆ ಉತ್ತರ ಬಾರದಿರುವ ಇಲಾಖಾವಾರು ಪ್ರಶ್ನೆಗಳ ಪಟ್ಟಿಯನ್ನು ಮತ್ತು ದಿನಾಂಕ:16.03.2026ರಂದು ನಡೆದ ಸದನ ಸಭೆಯಲ್ಲಿ 245 ಪ್ರಶ್ನೆಗಳಲ್ಲಿ ಇದುವರೆಗೂ 90 ಪ್ರಶ್ನೆಗಳಿಗೆ ಮಾತ್ರ ಉತ್ತರವನ್ನು ಒದಗಿಸಿರುವುದು ಕಂಡುಬಂದಿರುತ್ತದೆ (ಪಟ್ಟಿ ಲಗತ್ತಿಸಿದೆ). ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಸದನದಲ್ಲಿ ಉತ್ತರಿಸಲು ಬಾಕಿ ಇರುವ ಪ್ರಶ್ನೆಗಳಿಗೆ ಉತ್ತರಗಳನ್ನು ಇದುವರೆಗೂ ಕಳುಹಿಸದೇ ಇರುವುದು ವಿಧಾನಸಭಾ ಸದಸ್ಯರುಗಳು ಸದನದಲ್ಲಿ ಚರ್ಚಿಸಲು ಅನಾನುಕೂಲತೆಯನ್ನು ಉಂಟು ಮಾಡಿರುತ್ತದೆ. ಇದು ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡುವುದರೊಂದಿಗೆ ಶಾಸಕರುಗಳ ಹಕ್ಕಿಗೆ ಮತ್ತು ಸದನದ ಘನತೆಗೆ ಚ್ಯುತಿಯನ್ನುಂಟು ಮಾಡಿರುತ್ತದೆ.
UT Khader: ಸ್ಪೀಕರ್ ಸಭಾತ್ಯಾಗ ಪ್ರಕರಣ: 8 ಹಿರಿಯ ಐಎಎಸ್ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್, ಸಚಿವರಿಗೂ ಪತ್ರ
ಈ ಸಂಬಂಧ ಇಂದು ನಡೆದ ಸಭೆಯಲ್ಲಿ ಮಾನ್ಯ ಸಭಾಧ್ಯಕ್ಷರು ತೀವು ಅಸಮಾಧಾನ ವ್ಯಕ್ತಪಡಿಸಿರುತ್ತಾರೆ. ಆದುದರಿಂದ ತಮ್ಮ ಇಲಾಖೆಯ ವತಿಯಿಂದ ಉತ್ತರಿಸಬೇಕಾದ ಪ್ರಶ್ನೆಗಳಿಗೆ ಉತ್ತರವನ್ನು ಸಕಾಲದಲ್ಲಿ ವಿಧಾನಮಂಡಲಕ್ಕೆ ಕಳುಹಿಸದೇ ಇರುವ ಬಗ್ಗೆ ಇಲಾಖಾ ಕಾರ್ಯದರ್ಶಿಗಳ ವಿವರಣೆಯನ್ನು ತಕ್ಷಣ ನೀಡಲು ಸೂಚಿಸಲಾಗಿದೆ. ಅಲ್ಲದೆ, ಉತ್ತರ ಕಳುಹಿಸದ ಸಂದರ್ಭದಲ್ಲಿ ಸಂಬಂಧಪಟ್ಟ ಶಾಸಕರಿಗೆ ಪ್ರತ್ಯೇಕ ಪತ್ರವನ್ನು ಕಳುಹಿಸಿ ಹಾಗೂ ಮಾಹಿತಿ ಒದಗಿಸುವ ನಿರ್ಧಿಷ್ಟ ಸಮಯವನ್ನು ತಿಳಿಸಲು ಸಹ ಸೂಚಿಸಿದೆ.