ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fire Tragedy: ವಸತಿ ಶಾಲೆಯಲ್ಲಿ ಬೆಂಕಿ ಅನಾಹುತ, 2ನೇ ತರಗತಿ ವಿದ್ಯಾರ್ಥಿ ಸಜೀವ ದಹನ

Coorg News: ವಸತಿ ಶಾಲೆಯ 2ನೇ ತರಗತಿ ವಿದ್ಯಾರ್ಥಿ ಪುಷ್ಪಕ್ ಮೃತಪಟ್ಟಿದ್ದಾನೆ. ಶಾರ್ಟ್ ಸರ್ಕ್ಯೂಟ್‌ನಿಂದ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಸತಿ ಶಾಲೆಯ ಸುರಕ್ಷತಾ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ.

ವಸತಿ ಶಾಲೆಯಲ್ಲಿ ಬೆಂಕಿ ಅನಾಹುತ, 2ನೇ ತರಗತಿ ವಿದ್ಯಾರ್ಥಿ ಸಜೀವ ದಹನ

-

ಹರೀಶ್‌ ಕೇರ ಹರೀಶ್‌ ಕೇರ Oct 9, 2025 9:32 AM

ಮಡಿಕೇರಿ : ಮಡಿಕೇರಿಯ ವಸತಿ ಶಾಲೆಯೊಂದರಲ್ಲಿ ಭೀಕರ ಅಗ್ನಿ ದುರಂತ (Fire Tragedy) ಸಂಭವಿಸಿದ್ದು, 2ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ನಡೆದಿದೆ. ಕೊಡಗು (Coorg news) ಜಿಲ್ಲೆಯ ಮಡಿಕೇರಿ (madikeri) ತಾಲೂಕಿನ ಕಾಟಗೇರಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ವಸತಿ ಶಾಲೆಯ 2ನೇ ತರಗತಿ ವಿದ್ಯಾರ್ಥಿ ಪುಷ್ಪಕ್ ಮೃತಪಟ್ಟಿದ್ದಾನೆ. ಶಾರ್ಟ್ ಸರ್ಕ್ಯೂಟ್‌ನಿಂದ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ವಸತಿ ಶಾಲೆಯ ಸುರಕ್ಷತಾ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ.

ತವರು ಮನೆಯಿಂದ ಬರಲೊಪ್ಪದ ಪತ್ನಿಯ ಕೊಲೆಗೈದ ಪತಿ

ಯಾದಗಿರಿ: ತವರು ಮನೆಯಿಂದ ಬರಲು ಒಪ್ಪದ ಪತ್ನಿಯನ್ನು ಪತಿ ಮಚ್ಚಿನಿಂದ ಕೊಚ್ಚಿ ಕೊಂದಿರುವ ಘಟನೆ ಜಿಲ್ಲೆಯ ಸುರಪುರ ನಗರದ ಡೋಣಿಗೇರಾದಲ್ಲಿ ನಡೆದಿದೆ. ಪತ್ನಿಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಪತಿ, ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ. ಹತ್ಯೆಗೀಡಾದ ಮಹಿಳೆಯನ್ನು ಮರಿಯಮ್ಮ (35) ಎಂದು ಗುರುತಿಸಲಾಗಿದೆ. ಆರೋಪಿ ಪತಿ ಸಂಗಪ್ಪ (40) ಸುರಪುರ ತಾಲೂಕಿನ ಕಕ್ಕೇರಿ ಗ್ರಾಮದ ನಿವಾಸಿಯಾಗಿದ್ದಾನೆ. ಈತ ಮತ್ತು ಪತ್ನಿ ಮರಿಯಮ್ಮ ಮಧ್ಯೆ ವೈಮನಸ್ಸು ಶುರುವಾಗಿತ್ತು.ಹೀಗಾಗಿ ಮರಿಯಮ್ಮ ತನ್ನ ಗಂಡನೊಂದಿಗೆ ಹೊಂದಾಣಿಕೆ ಆಗುತ್ತಿಲ್ಲ ಎಂದು ತವರು ಮನೆ ಸೇರಿದ್ದಳು.

ಇದನ್ನೂ ಓದಿ: Murder Case: ಮದುವೆಯಾದ ನಾಲ್ಕೇ ತಿಂಗಳಲ್ಲಿ ಪತ್ನಿಯ ಕೊಂದು ಮಂಚದೊಳಗಿಟ್ಟು ಪತಿ ಪರಾರಿ

ಶನಿವಾರ ತಡರಾತ್ರಿ ಸಂಗಪ್ಪ ತನ್ನ ಪತ್ನಿಯನ್ನು ಮನೆಗೆ ಕರೆಯಲು ಡೋಣಿಗೇರಾದ ಆಕೆಯ ಮನೆಗೆ ಹೋಗಿದ್ದ. ಆದರೆ, ಮರಿಯಮ್ಮ ಗಂಡನ ಮನೆಗೆ ಬರಲು ನಿರಾಕರಿಸಿ, ವಾದ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಸಂಗಪ್ಪ, ಗಂಡನ ಮಾತಿಗೆ ಮರ್ಯಾದೆ ಕೊಡಲ್ವಾ. ಮನೆಗೆ ಬಂದಿಲ್ಲ ಎಂದರೆ ಬದುಕಿರಲೇ ಬೇಡ ಎಂದು ಮನೆಯಲ್ಲಿದ್ದ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ತಲೆಗೆ ಗಂಭೀರ ಗಾಯವಾಗಿ, ಮರಿಯಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆ ನಂತರ ಸಂಗಪ್ಪ, ಸುರಪುರ ಪೊಲೀಸ್ ಠಾಣೆಗೆ ಹೋಗಿ, ತನ್ನ ಪತ್ನಿಯನ್ನು ಕೊಂದಿದ್ದೇನೆ ಎಂದ ಹೇಳಿ ಶರಣಾಗಿದ್ದಾನೆ.