ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Honey trap case: ದಾವಣೆಗೆರೆ ಉದ್ಯಮಿಗೆ ಹನಿಟ್ರ್ಯಾಪ್‌; 25 ಲಕ್ಷ ರೂ. ಬೇಡಿಕೆ ಇಟ್ಟಿದ್ದ ನರ್ಸ್‌ ಸೇರಿ ನಾಲ್ವರು ಅರೆಸ್ಟ್‌

Davanagere News: ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದವೀರಪ್ಪ ಬಡಾವಣೆಯಲ್ಲಿ ಹನಿಟ್ರ್ಯಾಪ್ ಪ್ರಕರಣ ನಡೆದಿತ್ತು. ಹನಿಟ್ರ್ಯಾಪ್ ಮಾಡಿದ್ದ ನರ್ಸ್‌ ಸುಷ್ಮಿತಾ, ಬೆಕ್ಕಿನಕಣ್ಣು ಕೃಷ್ಣ, ರಾಹುಲ್, ಚನ್ನಬಸಪ್ಪ ಎನ್ನುವ ಆರೋಪಿಗಳನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಉದ್ಯಮಿಗೆ ಹನಿಟ್ರ್ಯಾಪ್‌ ಪ್ರಕರಣ; ನರ್ಸ್‌ ಸೇರಿ ನಾಲ್ವರು ಅರೆಸ್ಟ್‌

ದಾವಣಗೆರೆಯಲ್ಲಿ ಬಂಧನವಾಗಿರುವ ಆರೋಪಿಗಳು. -

Prabhakara R
Prabhakara R Mar 7, 2026 7:57 PM

ದಾವಣಗೆರೆ: ಉದ್ಯಮಿಗೆ ಹನಿಟ್ರ್ಯಾಪ್ ಪ್ರಕರಣದಲ್ಲಿ (Honey trap case) ನರ್ಸ್‌ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ದಾವಣಗೆರೆಯ (Davanagere) ವಿದ್ಯಾನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಕಷ್ಟದಲ್ಲಿದ್ದೇನೆ ಎಂದು ಹೇಳಿಕೊಂಡು ಹೋಗಿ ಉದ್ಯಮಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದ ಯುವತಿ, ತನ್ನ ತಂಡದೊಂದಿಗೆ ಸೇರಿ ಹನಿಟ್ರ್ಯಾಪ್ ಖೆಡ್ಡಾಗೆ ಬೀಳಿಸಿದ್ದಳು. ಇದೀಗ ನಾಲ್ವರು ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ.

ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದವೀರಪ್ಪ ಬಡಾವಣೆಯಲ್ಲಿ ಹನಿಟ್ರ್ಯಾಪ್ ಪ್ರಕರಣ ನಡೆದಿತ್ತು. ಹನಿಟ್ರ್ಯಾಪ್ ಮಾಡಿದ್ದ ಸುಷ್ಮಿತಾ, ಬೆಕ್ಕಿನಕಣ್ಣು ಕೃಷ್ಣ, ರಾಹುಲ್, ಚನ್ನಬಸಪ್ಪ ಎನ್ನುವ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಎಸ್ಪಿ ಶೇಖರ್ ಹೆಚ್. ತೆಕ್ಕಣ್ಣನವರ್ ಅವರು ಪ್ರತಿಕ್ರಿಯಿಸಿ, 'ಹನಿಟ್ರ್ಯಾಪ್ ಕುರಿತು ವಿದ್ಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾವಣಗೆರೆಯ ನಿವಾಸಿ, 66 ವರ್ಷದ ಉದ್ಯಮಿಯೊಬ್ಬರು ಹನಿಟ್ರ್ಯಾಪ್​ಗೆ ಒಳಗಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ 27 ವರ್ಷದ ಯುವತಿಯೊಬ್ಬಳು, ಉದ್ಯಮಿ ಬಳಿ ಹೋಗಿ ನನಗೆ ಕಷ್ಟ ಇದೆ ಎಂದು ಪರಿಚಯ ಆಗಿದ್ದಾರೆ. ಆ ಪರಿಚಯ ಸ್ನೇಹವಾಗಿ ಬೆಳೆದಿದೆ. ನಂತರ ಇವರು ಇತರ ಆರೋಪಿಗಳೊಂದಿಗೆ ಒಳಸಂಚು ರೂಪಿಸಿ ಸಿದ್ದವೀರಪ್ಪ ಬಡಾವಣೆಯ ಖಾಸಗಿ ಅಪಾರ್ಟ್‌ಮೆಂಟ್​ನಲ್ಲಿ ಸಂತ್ರಸ್ತ ಇರುವುದನ್ನು ತಿಳಿದುಕೊಂಡು ಅಲ್ಲಿಗೆ ಹೋಗಿ ವಿಡಿಯೋ ಮಾಡಿಕೊಂಡಿದ್ದಾರೆ. ನಂತರ ಆ ವಿಡಿಯೋವನ್ನು ಅವರಿಗೆ ತೋರಿಸಿ ದುಡ್ಡಿಗಾಗಿ ಡಿಮ್ಯಾಂಡ್ ಮಾಡಿದ್ದಾರೆ' ಎಂದಿದ್ದಾರೆ.

'ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜೀ ಪಂಚಾಯ್ತಿ ಮಾಡುವುದಾಗಿ ಬೇರೆ ಇಬ್ಬರು ಆರೋಪಿಗಳು ಅಲ್ಲಿ ಸೇರಿದ್ದಾರೆ. ಆಗ ಸಂತ್ರಸ್ತನಿಗೆ ವಿಡಿಯೊ ತೋರಿಸಿ ನಮ್ಮ ಬೇಡಿಕೆಗೆ ಒಪ್ಪದೆ ಇದ್ದರೆ ಎಲ್ಲಾ ಸೋಷಿಯಲ್ ಮೀಡಿಯಾ, ಮಾಧ್ಯಮಗಳಲ್ಲಿ ಹರಿಬಿಡುತ್ತೇವೆ ಎಂದು ಹೆದರಿಸಿದ್ದಾರೆ. 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಆಗ ಸಂತ್ರಸ್ತ ಉದ್ಯಮಿ 12 ಲಕ್ಷ ಕೊಡುವುದಾಗಿ ಹೇಳಿ ಆ ಸ್ಥಳದಿಂದ ಬಂದಿದ್ದರು. ನಂತರ ಅವರಿಗೆ ಪದೇ ಪದೆ ಪೋನ್ ಮಾಡಿ ಹೆದರಿಸಿದ್ದಾರೆ. ಒಂದು ಲಕ್ಷ ತೆಗೆದುಕೊಂಡು ಆಂಜನೇಯ ಬಡಾವಣೆ ಬಳಿ ಬರಲು ಹೇಳಿದ್ದಾರೆ. ಅಲ್ಲಿಗೆ ಹೋದಾಗ ಆ ಒಂದು ಲಕ್ಷ ರೂಗಳನ್ನು ಆರೋಪಿಗಳು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮತ್ತೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಬೆಂಗಳೂರಿನ ಐಐಎಸ್‌ಸಿ ನಿವೃತ್ತ ಪ್ರೊಫೆಸರ್ ಕುಟುಂಬದ ತ್ರಿವಳಿ ಕೊಲೆ ಕೇಸ್: ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದೇವೆ. 1 ಲಕ್ಷ ರೂಗಳನ್ನು ಸೀಜ್ ಮಾಡಿದ್ದೇವೆ. ಇದು ಮೇಲ್ನೋಟಕ್ಕೆ ಹನಿಟ್ರ್ಯಾಪ್ ರೀತಿ ಕಾಣುತ್ತಿದೆ. ಆರೋಪಿಗಳ ಮೊಬೈಲ್ ಸೀಜ್ ಮಾಡಿದ್ದು, ತನಿಖೆ ನಡೆಸುತ್ತಿದ್ದೇವೆ. ಬಂಧಿತ ಆರೋಪಿಗಳ ಪೈಕಿ ಬಿಳಿಚೋಡು ವಾಸಿಯೊಬ್ಬ ಇಂತಹದ್ದೇ ಒಂದು ಪ್ರಕರಣ ಸೇರಿದಂತೆ ಇತರ ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.