Dharmasthala Case: 5ನೇ ಜಾಗದಲ್ಲೂ ಸಿಗದ ಕಳೇಬರ; ಪ್ಯಾನ್- ಡೆಬಿಟ್ ಕಾರ್ಡ್ ಸಿಕ್ಕಿದೆ ಎಂಬುದು ಸುಳ್ಳು
Mass burial: ಒಂದನೇ ಸ್ಪಾಟ್‌ನಲ್ಲಿ ಎರಡು ID ಕಾರ್ಡ್‌ಗಳು ಲಭ್ಯವಾಗಿದ್ದವು ಎಂದು ಧರ್ಮಸ್ಥಳದಿಂದ ಕಾಣೆಯಾಗಿದ್ದಾರೆ ಎನ್ನಲಾದ ಅನನ್ಯ ಭಟ್ ಅವರ ತಾಯಿ ಸುಜಾತಾ ಭಟ್ ಅವರ ಪರ ವಕೀಲ ಮಂಜುನಾಥ್ ಹೇಳಿಕೆ ಬಿಡುಗಡೆ ಮಾಡಿದ್ದರು. ಈ ಹೇಳಿಕೆಯನ್ನು ಎಸ್‌ಐಟಿ ಟೀಂ ಸಂಪೂರ್ಣವಾಗಿ ತಳ್ಳಿಹಾಕಿದೆ.


ಮಂಗಳೂರು: ಧರ್ಮಸ್ಥಳ (Dharmasthala Case, mass burial case) ಶವಗಳ ರಹಸ್ಯ ಹುಗಿತ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಬುಧವಾರ ನಾಲ್ಕು ಸ್ಥಳಗಳಲ್ಲಿ ಆಗೆಯಲಾಗಿದೆ. ಯಾವುದೇ ಶವ (dead body) ಪತ್ತೆಯಾಗಿಲ್ಲ. ಮೊದಲ ದಿನ ಅಗೆದ ಜಾಗದಲ್ಲಿ ಪ್ಯಾನ್ ಕಾರ್ಡ್, ಡೆಬಿಟ್ ಕಾರ್ಡ್ ಸಿಕ್ಕಿದೆ ಎಂದು ವಕೀಲರೊಬ್ಬರು ನೀಡಿದ್ದ ಪತ್ರಿಕಾ ಹೇಳಿಕೆಯೂ ನಿಜವಲ್ಲ ಎಂದು ತಿಳಿದುಬಂದಿದೆ. ದೂರುದಾರ ಗುರುತಿಸಿದ 13 ಸ್ಥಳಗಳಲ್ಲಿ ಒಂದೊಂದೇ ಜಾಗಗಳನ್ನು ಅಗೆದು (exhumation) ಶೋಧಿಸಲಾಗುತ್ತಿದ್ದು, ಇಂದು ಕೂಡ ಅದು ಮುಂದುವರಿಯಲಿದೆ.
ಮೊದಲ ದಿನದ ಕಾರ್ಯಾಚರಣೆಯಲ್ಲಿ 1ನೇ ಪಾಯಿಂಟ್‌ನಲ್ಲಿ ಯಾವುದೇ ಕಳೇಬರ ಪತ್ತೆಯಾಗಿರಲಿಲ್ಲ. ಆದರೆ ಈ ಒಂದನೇ ಸ್ಪಾಟ್‌ನಲ್ಲಿ ಎರಡು ID ಕಾರ್ಡ್‌ಗಳು ಲಭ್ಯವಾಗಿದ್ದವು ಎಂದು ಧರ್ಮಸ್ಥಳದಿಂದ ಕಾಣೆಯಾಗಿದ್ದಾರೆ ಎನ್ನಲಾದ ಅನನ್ಯ ಭಟ್ ಅವರ ತಾಯಿ ಸುಜಾತಾ ಭಟ್ ಅವರ ಪರ ವಕೀಲ ಮಂಜುನಾಥ್ ಹೇಳಿಕೆ ಬಿಡುಗಡೆ ಮಾಡಿದ್ದರು. ಈ ಹೇಳಿಕೆಯನ್ನು ಎಸ್‌ಐಟಿ ಟೀಂ ಸಂಪೂರ್ಣವಾಗಿ ತಳ್ಳಿಹಾಕಿದೆ.
ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಅವರು ಪತ್ರಿಕಾ ಪ್ರಕಟಣೆ ಮೂಲಕ ಮೊದಲನೇ ಸ್ಪಾಟ್‌ನಲ್ಲಿ ಒಂದು ಪ್ಯಾನ್ ಕಾರ್ಡ್ ಹಾಗೂ ಒಂದು ಡೆಬಿಟ್ ಕಾರ್ಡ್ ಲಭ್ಯವಾಗಿತ್ತು ಎಂದು ಪ್ರಕಟಣೆ ಹೊರಡಿಸಿದ್ದರು. ಮಂಜುನಾಥ್ ಅವರ ಪತ್ರಿಕಾ ಪ್ರಕಟಣೆಯಲ್ಲಿನ ಮಾಹಿತಿಯನ್ನು ತಳ್ಳಿಹಾಕಿದ್ದು, ಅವರು ಹೇಳಿರುವ ವಿಷಯ ವಿಶ್ವಾಸಾರ್ಹವಲ್ಲ ಎಂದು ಮಾಹಿತಿ ನೀಡಿದೆ.
ಮೊದಲ 5 ಜಾಗಗಳಲ್ಲಿ ಯಾವುದೇ ಕಳೇಬರದ ಕುರುಹುಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಎಸ್‌ಐಟಿ ತಂಡ ಒಂದೊಂದು ಸ್ಪಾಟ್‌ನಲ್ಲೂ ಸುಮಾರು 6 ಅಡಿಗಳಷ್ಟು ಅಗೆದು ಕಳೇಬರದ ಕುರುಹುಗಳಿಗಾಗಿ ಹುಡುಕಾಟ ನಡೆಸಿದೆ. ಆರಂಭದಲ್ಲಿ ಮನುಷ್ಯರಿಂದ ಹುಡುಕಾಟ ನಡೆಸಿ ಬಳಿಕ ಹಿಟಾಚಿ ಮೂಲಕ ಅಕ್ಕಪಕ್ಕದ ಸ್ಥಳದಲ್ಲಿ ಹುಡುಕಾಟ ಮಾಡಲಾಯಿತು. ಆದರೂ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ.
ಈ ನಡುವೆ, ಎಸ್‌ಐಟಿ ಮುಖ್ಯಸ್ಥರಾಗಿರುವ ಡಿಐಜಿ ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ಆಯ್ಕೆ ಆಗಿದ್ದಾರೆ. ನಿನ್ನೆ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: Dharmasthala burials case: ಧರ್ಮಸ್ಥಳ ಕೇಸ್ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ಆಯ್ಕೆ