ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Judges Transfer: ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಾಧೀಶರ ವರ್ಗಾವಣೆ

ನ್ಯಾಯಾಂಗ ಆಡಳಿತದ ಗುಣಮಟ್ಟ ಸುಧಾರಣೆ ಹಾಗೂ ಹೈಕೋರ್ಟ್‌ ಮಟ್ಟದಲ್ಲಿ ಸಮಗ್ರತೆ ಹಾಗೂ ವೈವಿಧ್ಯತೆಯ ಹೆಚ್ಚಳಕ್ಕಾಗಿ ಈ ವರ್ಗಾವಣೆಗಳನ್ನು ಮಾಡಲಾಗಿದೆ ಎಂದು ಕೊಲಿಜಿಯಂ ತಿಳಿಸಿದೆ. ಏಪ್ರಿಲ್‌ 15 ಹಾಗೂ 19ರಂದು ನಡೆಸಲಾದ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಮೀಟಿಂಗ್‌ನಲ್ಲಿ ನೀಡಲಾದ ಸೂಚನೆಯಂತೆ ಈ ವರ್ಗಾವಣೆ ನಡೆದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಾಧೀಶರ ವರ್ಗಾವಣೆ

ಹರೀಶ್‌ ಕೇರ ಹರೀಶ್‌ ಕೇರ Apr 21, 2025 12:33 PM

ಬೆಂಗಳೂರು: ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ನಿರ್ದೇಶನದಂತೆ ರಾಜ್ಯ ಹೈಕೋರ್ಟ್‌ಗಳ ಹಲವು ನ್ಯಾಯಾಧೀಶರನ್ನು ವರ್ಗ ಮಾಡಲಾಗಿದೆ. ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಾಧೀಶರನ್ನು ಬೇರೆ ರಾಜ್ಯಗಳಿಗೆ ವರ್ಗ ಮಾಡಲಾಗಿದೆ. ಹಾಗೆಯೇ ಇತರ ರಾಜ್ಯಗಳಿಂದ ಇಬ್ಬರು ನ್ಯಾಯಾಧೀಶರನ್ನು ಕರ್ನಾಟಕಕ್ಕೆ ವರ್ಗಾಯಿಸಲಾಗಿದೆ. ಏಪ್ರಿಲ್‌ 15 ಹಾಗೂ 19ರಂದು ನಡೆಸಲಾದ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಮೀಟಿಂಗ್‌ನಲ್ಲಿ ನೀಡಲಾದ ಸೂಚನೆಯಂತೆ ಈ ವರ್ಗಾವಣೆ ನಡೆದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ನ್ಯಾಯಾಂಗ ಆಡಳಿತದ ಗುಣಮಟ್ಟ ಸುಧಾರಣೆ ಹಾಗೂ ಹೈಕೋರ್ಟ್‌ ಮಟ್ಟದಲ್ಲಿ ಸಮಗ್ರತೆ ಹಾಗೂ ವೈವಿಧ್ಯತೆಯ ಹೆಚ್ಚಳಕ್ಕಾಗಿ ಈ ವರ್ಗಾವಣೆಗಳನ್ನು ಮಾಡಲಾಗಿದೆ ಎಂದು ಕೊಲಿಜಿಯಂ ತಿಳಿಸಿದೆ.

ಕರ್ನಾಟಕ ಹೈಕೋರ್ಟ್‌ನಿಂದ ನ್ಯಾ. ಹೇಮಂತ್‌ ಚಂದ್ರಶೇಖರ್‌ ಅವರನ್ನು ಮದ್ರಾಸ್‌, ನ್ಯಾ. ಕೃಷ್ಣನ್‌ ನಟರಾಜನ್‌ ಅವರನ್ನು ಕೇರಳ, ನ್ಯಾ. ನೇರನಹಳ್ಳಿ ಶ್ರೀನಿವಾಸನ್‌ ಸಂಜಯ್‌ ಗೌಡ ಅವರನ್ನು ಗುಜರಾತ್‌, ನ್ಯಾ. ಶ್ರೀಪಾದ ಕೃಷ್ಣ ದೀಕ್ಷಿತ್‌ ಅವರನ್ನು ಒಡಿಶಾ ಹೈಕೋರ್ಟ್‌ಗಳಿಗೆ ಕಳಿಸಲಾಗಿದೆ. ತೆಲಂಗಾಣದಿಂದ ನ್ಯಾ. ಪೆರುಗು ಶ್ರೀಸುಧಾ ಹಾಗೂ ಆಂಧ್ರಪ್ರದೇಶದಿಂದ ನ್ಯಾ. ಡಾ.ಕುಂಭಜಾಡಾಲ ಮನ್ಮಥ ರಾವ್‌ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಲಾಗಿದೆ. ನ್ಯಾ. ಕಾಸೋಜು ಸುರೇಂದ್ರ ಅವರನ್ನು ತೆಲಂಗಾಣದಿಂದ ಮದ್ರಾಸ್‌ ಹೈಕೋರ್ಟ್‌ಗೆ ಕಳಿಸಲಾಗಿದೆ.

ಇದನ್ನೂ ಓದಿ: Nishikant Dubey Controversy: ಸುಪ್ರೀಂ ಕೋರ್ಟ್‌ ಬಳಿಕ ಮಾಜಿ ಮುಖ್ಯ ಚುನಾವಣಾ ಆಯುಕ್ತರನ್ನು ಟೀಕಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ