ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chintamani News: ಇಂಜಿನಿಯರಿಂಗ್-ಮೆಡಿಕಲ್ ಕಾಲೇಜುಗಳ ಸ್ಥಾಪನೆಗಾಗಿ ಜಾಗ ಖರೀದಿ:ನಾರಮಾಕಲಹಳ್ಳಿ ಕೃಷ್ಣಪ್ಪ

ಕಿರಿಯ ಮುಖಂಡರು ಈ ಸಮುದಾಯದ ಹಿರಿಯರು, ಮಹಾಸಭಾದ ಸದಸ್ಯತ್ವವನ್ನು ಹೆಚ್ಚಿನ ಪ್ರಮಾಣ ದಲ್ಲಿ ಮಾಡುವ ಮೂಲಕ ಮಹಾಸಭಾವು ಅತ್ಯಂತ ಹೆಚ್ಚು ಸದಸ್ಯತ್ವ ಪಡೆಯುವಂತೆ ಮಾಡಬೇಕು. ಇದಕ್ಕೆ ಪೂರಕವಾಗಿ ಸಮುದಾಯದವರು ಹೆಚ್ಚಿನ ಸದಸ್ಯತ್ವವನ್ನು ಪಡೆಯುವ ಮೂಲಕ ಸಮುದಾಯ ಸಂಘವಾಗಬೇಕೆಂದರು.

ಕರ್ನಾಟಕ ಮಾದರ ಮಹಾಸಭಾ ನೋಂದಣಿಯ ಜಾಗೃತಿಸಭೆ

-

Ashok Nayak
Ashok Nayak Dec 14, 2025 1:05 AM

ಚಿಂತಾಮಣಿ : ಕರ್ನಾಟಕ ರಾಜ್ಯಾದ್ಯಂತ ಆಯಾ ಜಾತಿಗಳ ಜಾತಿವಾರು ವರ್ಗವಾರು ಜಾತಿ ಸಂಘಟನೆಗಳು ಸಂಘಟಿತರಾಗಿ ಬಲಗೊಳ್ಳುತ್ತಿದ್ದು, ಅದರ ಸಾಲಿನಲ್ಲಿಯೇ ಮಾದಿಗ ಸಮುದಾಯ(

Madiga community) ದ ಜನತೆಯು ಕೂಡ ರಾಜ್ಯಮಟ್ಟದಲ್ಲಿ ಕರ್ನಾಟಕ ಮಾದರ ಮಹಾಸಭಾ ವೇದಿಕೆ ಅಡಿಯಲ್ಲಿ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ ಮಾಡುತ್ತಿದೆ ಎಂದು ಚಾವಡಿ ಮತ್ತು ಪ್ರಗತಿಪರ ಚಿಂತಕ ನಾರಮಾಕಲಹಳ್ಳಿ ಕೃಷ್ಣಪ್ಪ ಕರೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕರ್ನಾಟಕ ಮಾದರ ಮಹಾಸಭಾದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಇತರೆ ಸಮು ದಾಯಗಳ ಜನತೆಗೆ ಇಂಜಿನಿಯರಿಂಗ್ ಕಾಲೇಜ್, ಮೆಡಿಕಲ್ ಕಾಲೇಜ್,ಮಠಗಳು ಸೇರಿದಂತೆ ಭವಿಷ್ಯದ ಮಕ್ಕಳಿಗಾಗಿ ಶಾಶ್ವತ ಚಿರಾಸ್ತಿ ಗಳನ್ನು ಮಾಡಿದ್ದಾರೆ.ಆದುದರಿಂದ ನಮ್ಮ ಸಮುದಾಯದ ಮಕ್ಕಳ ಭವಿಷ್ಯತ್ತಿಗಾಗಿ ಈಗಾಗಲೇ ದೊಡ್ಡ ಬಳ್ಳಾಪುರದ ಬಳಿಸರ್ಕಾರಿ ಜಾಗವನ್ನು ಸರ್ಕಾರದ ಬೆಲೆಕಟ್ಟಿ ಖರೀದಿ ಮಾಡಲು ನಿರ್ಧರಿಸ ಲಾಗಿದೆ ಎಂದರು.

ಇದನ್ನೂ ಓದಿ: Chintamani News: ನಂದಿಗಾನಹಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷರಾಗಿ ಕೃಷ್ಣಮೂರ್ತಿ ಉಪಾಧ್ಯಕ್ಷೆ ರತ್ನಮ್ಮ ಅವಿರೋಧ ಆಯ್ಕೆ

ಕಿರಿಯ ಮುಖಂಡರು ಈ ಸಮುದಾಯದ ಹಿರಿಯರು, ಮಹಾಸಭಾದ ಸದಸ್ಯತ್ವವನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡುವ ಮೂಲಕ ಮಹಾಸಭಾವು ಅತ್ಯಂತ ಹೆಚ್ಚು ಸದಸ್ಯತ್ವ ಪಡೆಯುವಂತೆ ಮಾಡಬೇಕು.ಇದಕ್ಕೆ ಪೂರಕವಾಗಿ ಸಮುದಾಯದವರು ಹೆಚ್ಚಿನ ಸದಸ್ಯತ್ವವನ್ನು ಪಡೆಯುವ ಮೂಲಕ ಸಮುದಾಯ ಸಂಘವಾಗಬೇಕೆಂದರು.

ಭವಿಷ್ಯದಪೀಳಿಗೆಗೆ ಅಗತ್ಯವಾದ ಶೈಕ್ಷಣಿಕ ವಿದ್ಯಾಸಂಸ್ಥೆಗಳನ್ನು ಮತ್ತು ಇತರೆ ಸಮುದಾಯದ ಅಭಿವೃದ್ಧಿಯ ಪೂರಕ ಚಟುವಟಿಕೆಗಳಿಗೆ ಬಳಕೆ ಮಾಡುತ್ತೇವೆ ಹೊರತು ಯಾವುದೊಂದು ವೆಚ್ಚ ಮಾಡುವುದಿಲ್ಲವೆಂದು ಕೃಷ್ಣಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಕವಾಲಿ ವೆಂಕಟರವಣಪ್ಪ ಮಾತನಾಡಿ, ಸಮುದಾಯದವರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಾಮಾ ಜಿಕವಾಗಿ ಮುಂದೆ ಬರುವುದರ ಮೂಲಕ ಸಮಾಜದಲ್ಲಿ ಅತ್ಯುತ್ತಮ ಸ್ಥಾನಗಳನ್ನು ಅಲಂಕರಿಸುವ ದಿಕ್ಕಿನಲ್ಲಿ ನಮ್ಮ ಚಿಂತನೆಗಳು ಸಹಕಾರಿಯಾಗ ಬೇಕೆಂದರು.ಆದಷ್ಟು ನಮ್ಮ ಸಮುದಾಯದ ಕುಟುಂಬಗಳು ದುಃಖಗಳಿಂದ ದೂರ ಉಳಿದು ಅತ್ಯುತ್ತಮ ಶೈಕ್ಷಣಿಕ ಮಾರ್ಗಗಳನ್ನು ಪಡೆಯುವ ಮೂಲಕ ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುನ್ನತ ಸ್ಥಾನಗಳನ್ನು ಆಲಂಕರಿಸಬೇಕು ಆಗ ಮಾತ್ರ ಭವಿಷ್ಯದ ಮಕ್ಕಳ ಭವಿಷ್ಯತ್ತು ಉಜ್ವಲಗೊಳ್ಳಲಿದೆ ಎಂಬ ಅಗತ್ಯ ಆಲೋಚನೆಗಳನ್ನು ನಮ್ಮ ಸಮುದಾಯದವರು ಕಡ್ಡಾಯವಾಗಿ ಮಾಡಲೇಬೇಕೆಂದರು.

ಈ ಸಂದರ್ಭದಲ್ಲಿ ಬುಲೆಟ್ ರಮೇಶ್, ಜೈಪ್ರಕಾಶ್,ಚೇಳೂರು ನರಸಿಂಹಪ್ಪ, ನಾಗಜನಪ್ಪ, ಜನಾರ್ದನ್, ಜೈ ಭೀಮ್ ಮುರಳಿ,ಮಾಳಪ್ಪಲ್ಲಿ ಸುರೇಶ್,ದುಗುನಾರಿಪಲ್ಲಿ ಮೂರ್ತಿ, ಪಿ.ವಿ.ರವಿ. ಊಲವಾಡಿ ರಾಮಪ್ಪ, ಸಂತೋಷ್, ಮುನಿರಾಜು, ಫೋಟೋಗ್ರಾಫರ್ ಶಿವ, ರಾಜೇಶ್, ಶ್ರೀನಿವಾಸ್ ಸೇರಿದಂತೆ ಸಮುದಾಯವರು ಉಪಸ್ಥಿತರಿದ್ದರು.