ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಡವರ ಬದುಕಿಗೆ ಹಕ್ಕಿನ ದಾಖಲೆ, ಸ್ವಾಭಿಮಾನದ ಹೊಸ ಅಧ್ಯಾಯ: ಎಚ್.ಕೆ. ಪಾಟೀಲ

HK Patil: ಗದಗ ನಗರದ ಕಾಟನ್ ಸೇಲ್ಸ್ ಸೊಸೈಟಿ ಆವರಣದಲ್ಲಿರುವ ಶಾಸಕರ ಕಚೇರಿಯಲ್ಲಿ ಗುರುವಾರ ಶಾಸಕ ಎಚ್.ಕೆ. ಪಾಟೀಲ ಅವರು ನಗರಸಭೆ ವ್ಯಾಪ್ತಿಯ ವಿವಿಧ ಆಶ್ರಯ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳಿಗೆ ನಮೂನೆ-3 ಹಾಗೂ ಪರಿಚಯ ಪತ್ರ ವಿತರಿಸಿದರು.

ಬಡವರ ಬದುಕಿಗೆ ಹಕ್ಕಿನ ದಾಖಲೆ, ಸ್ವಾಭಿಮಾನದ ಹೊಸ ಅಧ್ಯಾಯ: ಎಚ್.ಕೆ.ಪಾಟೀಲ

-

Profile
Siddalinga Swamy Nov 26, 2026 10:19 PM

ಗದಗ, ನ.26: ಬಡವರು ಹಲವು ವರ್ಷಗಳಿಂದ ವಾಸಿಸುತ್ತಿದ್ದ ಜಾಗಕ್ಕೆ ಅಧಿಕೃತ ಹಕ್ಕು ದೊರೆಯುವುದು ಅವರ ಬದುಕಿನಲ್ಲಿ ಸ್ವಾಭಿಮಾನ ಮತ್ತು ನೆಮ್ಮದಿಯ ಹೊಸ ಅಧ್ಯಾಯ ಆರಂಭವಾದಂತಾಗಿದೆ. ಮನೆ ಮತ್ತು ಜಾಗದ ಹಕ್ಕು ಕೇವಲ ದಾಖಲೆಗಳಿಗೆ ಸೀಮಿತವಾಗದೆ, ಬಡ ಕುಟುಂಬಗಳ ಭವಿಷ್ಯವನ್ನು ಭದ್ರಪಡಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಶಾಸಕ ಎಚ್.ಕೆ. ಪಾಟೀಲ (HK Patil) ಹೇಳಿದರು.

ನಗರದ ಕಾಟನ್ ಸೇಲ್ಸ್ ಸೊಸೈಟಿ ಆವರಣದಲ್ಲಿರುವ ಶಾಸಕರ ಕಚೇರಿಯಲ್ಲಿ ಗುರುವಾರ ನಗರಸಭೆ ವ್ಯಾಪ್ತಿಯ ವಿವಿಧ ಆಶ್ರಯ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳಿಗೆ ನಮೂನೆ-3 ಹಾಗೂ ಪರಿಚಯ ಪತ್ರ ವಿತರಿಸಿ ಮಾತನಾಡಿದ ಅವರು, ಜವಳಗಲ್ಲಿ ಹಾಗೂ ಸುಡುಗಾಡುಸಿದ್ಧರ ಕಾಲೋನಿ ಸೇರಿ ಸುಮಾರು 800 ಫಲಾನುಭವಿಗಳಿಗೆ ಫಾರಂ ನಂ 3 ಸೇರಿದಂತೆ ಅಧಿಕೃತ ದಾಖಲೆಗಳನ್ನು ವಿತರಿಸಲಾಯಿತು ಎಂದರು.

ಜವಳಗಲ್ಲಿಯಲ್ಲಿ ಹಲವು ಕುಟುಂಬಗಳು ವರ್ಷಗಳಿಂದ ವಾಸಿಸುತ್ತಿದ್ದರೂ, ಜಾಗಗಳು ಅವರ ಹೆಸರಿನಲ್ಲಿ ಇರಲಿಲ್ಲ. ಯಾವುದೇ ಅಧಿಕೃತ ದಾಖಲೆಗಳಿಲ್ಲದ ಕಾರಣ ಮೂಲಭೂತ ಸೌಕರ್ಯ ಕಲ್ಪಿಸುವುದಕ್ಕೂ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬಡವರ ಹಕ್ಕಿಗಾಗಿ ಹೈಕೋರ್ಟ್‌ವರೆಗೂ ಹೋರಾಟ ನಡೆಸಬೇಕಾಯಿತು ಎಂದು ತಿಳಿಸಿದರು.

ಜವಳಗಲ್ಲಿಯ 352 ಕುಟುಂಬಗಳಿಗೆ ಯಾವುದೇ ದಾಖಲೆಗಳಿಲ್ಲದಿದ್ದರೂ, ಅವರ ಹಕ್ಕುಗಳನ್ನು ದೊರಕಿಸಲು ಪ್ರಯತ್ನಿಸಲಾಯಿತು. ಇಂದು ಸರ್ಕಾರದ ವತಿಯಿಂದ ಅಧಿಕೃತವಾಗಿ ಹಕ್ಕು ನೀಡಿರುವುದರಿಂದ ಅಲ್ಲಿನ ನಿವಾಸಿಗಳು ಇನ್ನು ಮುಂದೆ ಆತಂಕಪಡುವ ಅಗತ್ಯವಿಲ್ಲ. ತಮ್ಮ ಜಾಗದಲ್ಲಿ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬಹುದು ಎಂದರು.

ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ನಮೂನೆ-3 ಮೂಲಕ ದೊರೆಯುವ ಆಸ್ತಿಯನ್ನು ಯಾವುದೇ ಕಾರಣಕ್ಕೂ ಮಾರಿಕೊಳ್ಳಬೇಡಿ. ಅದನ್ನು ಮುಂದಿನ ಪೀಳಿಗೆಗೆ ಉಳಿಸಿ, ಮಕ್ಕಳ ಭವಿಷ್ಯಕ್ಕೆ ಆಧಾರವಾಗಿಸಿಕೊಳ್ಳಿ ಎಂದು ಫಲಾನುಭವಿಗಳಿಗೆ ಸಲಹೆ ನೀಡಿದರು. ಈ ವೇಳೆ ಮುಖಂಡರಾದ ವಾಸಣ್ಣ ಕುರುಡಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಪ್ರಭು ಬುರುಬುರೆ, ನಗರಸಭೆ ಸದಸ್ಯರಾದ ನಮಾಜಿ, ವಿಭೂತಿ, ಅಶೋಕ‌ ಮಂದಾಲಿ, ನಗರಸಭೆ ಪೌರಾಯುಕ್ತ ರಾಜರಾಮ್ ಪವಾರ್ ಸೇರಿದಂತೆ ಇತರರು ಇದ್ದರು.