ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

HD Kumaraswamy: ಒಂದು ಬಾರಿ ಅಧಿಕಾರ ಕೊಟ್ಟು ನೋಡಿ, ರಾಜ್ಯಕ್ಕೆ ಹಿಡಿದ ಗ್ರಹಣ ಮುಕ್ತಿ: ಎಚ್‌ಡಿ ಕುಮಾರಸ್ವಾಮಿ

ಜೆಡಿಎಸ್‌ಗೆ (JDS) 25 ವರ್ಷ ತುಂಬಿದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಬೆಂಗಳೂರಿನ ಕೊಮ್ಮಘಟ್ಟದ ಬಳಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಮಾವೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾದರು. ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿ ಪಕ್ಷ ಹಾಲಿ, ಮಾಜಿ, ಶಾಸಕರು, ಸಂಸದರು ಭಾಗಿಯಾಗಿದ್ದರು.

ಒಮ್ಮೆ ಅಧಿಕಾರ ಕೊಟ್ಟು ನೋಡಿ, ರಾಜ್ಯಕ್ಕೆ ಹಿಡಿದ ಗ್ರಹಣ ಮುಕ್ತಿ: ಎಚ್‌ಡಿಕೆ

ಕೊಮ್ಮಘಟ್ಟದಲ್ಲಿ ಜೆಡಿಎಸ್‌ ಸಮಾವೇಶ -

ಹರೀಶ್‌ ಕೇರ
ಹರೀಶ್‌ ಕೇರ Apr 12, 2026 9:52 AM

ಬೆಂಗಳೂರು, ಏ.12: ರಾಜ್ಯದ ಕಾಂಗ್ರೆಸ್‌ (congress) ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಚದರ ಅಡಿಗೆ 100 ರೂ. ಫಿಕ್ಸ್ ಮಾಡಿದೆ. ಒಂದು ಬಾರಿ ಜೆಡಿಎಸ್‌ಗೆ (JDS) ಅಧಿಕಾರ ಕೊಟ್ಟರೆ ರಾಜ್ಯಕ್ಕೆ ಹಿಡಿದಿರುವ ಗ್ರಹಣವನ್ನ ಮುಕ್ತ ಮಾಡುತ್ತೇನೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ (HD kumaraswamy) ಶಪಥ ಮಾಡಿದ್ದಾರೆ.

ಜೆಡಿಎಸ್‌ಗೆ (JDS) 25 ವರ್ಷ ತುಂಬಿದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಬೆಂಗಳೂರಿನ ಕೊಮ್ಮಘಟ್ಟದ ಬಳಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. ಸಮಾವೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾದರು. ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿ ಪಕ್ಷ ಹಾಲಿ, ಮಾಜಿ, ಶಾಸಕರು, ಸಂಸದರು ಭಾಗಿಯಾಗಿದ್ದರು.

ಬೆಂಗಳೂರಿಗೆ ಮೆಟ್ರೋ ಯೋಜನೆ ಸೇರಿ ಅನೇಕ ಯೋಜನೆ ಕೊಟ್ಟವನು ನಾನು. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಚದರ ಅಡಿಗೆ 100 ರೂ. ಫಿಕ್ಸ್ ಮಾಡಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಎರಡು ಬಾರಿ ಜನರ ಆಶೀರ್ವಾದದಿಂದ ಸಿಎಂ ಆಗಿಲ್ಲ ಅಂತ ತಿಳಿಸಿದ ಕುಮಾರಸ್ವಾಮಿ, ಒಂದು ಬಾರಿ ಜೆಡಿಎಸ್‌ಗೆ ಅಧಿಕಾರ ಕೊಡಿ ಎಂದು ಮನವಿ ಮಾಡಿದರು.

ಅತಿ ಕೆಟ್ಟ ಸರಕಾರ: ದೇವೇಗೌಡ

ಈ ನಾಡು ಕಂಡ ಅತ್ಯಂತ ಕೆಟ್ಟ ಸರ್ಕಾರ ರಾಜ್ಯದಲ್ಲಿದೆ. ಸಿದ್ದರಾಮಯ್ಯ ನಿಜಕ್ಕೂ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನ ನೋಡಿ ಕಲಿಯಬೇಕು ಎಂದು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ (HD Deve Gowda) ಅವರು ತಿವಿದರು.

ನಮ್ಮಿಬ್ಬರ ಆಡಳಿತಾನುಭವದ ಬಗ್ಗೆ ನೀವು ಹೇಳೋದಲ್ಲ, ಜನರನ್ನೇ ಕೇಳಿ: ಡಿಕೆಶಿಗೆ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು

ಮುಸ್ಲಿಂ ಲೀಡರ್ (Muslim Leader) ಗೆಲ್ಲಿಸಲು ದರಿದ್ರ ನಾರಾಯಣ ರ‍್ಯಾಲಿ ಮಾಡಿದೆ. ಆ ರ‍್ಯಾಲಿಗೆ ಸಿದ್ದರಾಮಯ್ಯ ಬರಲಿಲ್ಲ. ಕುಮಾರಸ್ವಾಮಿ ಸರ್ಕಾರ ತೆಗೆದಿದ್ದೂ ಕೂಡ ಅವ್ರೇ. ಸಿದ್ದರಾಮಯ್ಯ ಮೋದಿಯನ್ನ ನೋಡಿ ಕಲಿಯಬೇಕು. ನಿತೀಶ್ ಕುಮಾರ್ 20 ವರ್ಷ ಬಿಹಾರ ಸಿಎಂ ಆಗಿದ್ರು, ನಿತೀಶ್‌ಗೆ ಶಕ್ತಿ ಕೊಟ್ಟಿದ್ದು ಮೋದಿ ಎಂದು ಹೊಗಳಿದರು.

ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಸರ್ಕಾರ ತೆಗೆಯುವಂತೆ ಮಾಡಿದ್ರು. ಆಗ ಮೋದಿಯವರು ಜೊತೆಗೆ ಬನ್ನಿ ಅಂತ ಕರೆದ್ರು. ನಾನು ಓಕೆ ಅಂದೆ. ಕಾಂಗ್ರೆಸ್ ಜೊತೆ ಇದ್ದು ಏಟಿನ ಮೇಲೆ ಏಟು ತಿಂದ್ವಿ. ಹಾಗಾಗಿ ಮೋದಿ ಜೊತೆಗೆ ಹೋಗಲು ಕುಮಾರಸ್ವಾಮಿಗೆ ಒಪ್ಪಿಗೆ ಕೊಟ್ಟೆ. ಈಗ ಕೇಂದ್ರ ಸಚಿವರಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಸರ್ಕಾರ ಕುಮಾರಸ್ವಾಮಿಗೆ ಸಹಕಾರ ಕೊಡ್ತಿಲ್ಲ. HMT ಜಾಗದ ವಿಚಾರವಾಗಿ ಕೋರ್ಟ್‌ಗೆ ಹೋಗ್ತಾರೆ. ರಾಷ್ಟ್ರೀಯ ಪಕ್ಷದ ಜೊತೆ ಕೆಲಸ ಮಾಡುವಾಗ ನಮಗೂ ಇತಿಮಿತಿ ಇದೆ. ನಾಡು ಕಂಡ ಕೆಟ್ಟ ಸರ್ಕಾರ ಇದು. 2 ವರ್ಷ ಈ ಸರ್ಕಾರ ಇರಬಹುದು ಎಂದು ಭವಿಷ್ಯ ನುಡಿದರು.

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ 2023-24 ರಲ್ಲಿ ಮಹಿಳಾ ಮೀಸಲಾತಿ ಬಗ್ಗೆ 33% ಕೊಡೋ ಬಗ್ಗೆ ತಿದ್ದುಪಡಿಯಲ್ಲಿ ತಂದು ರಾಜ್ಯಸಭೆ, ಲೋಕಸಭೆಯಲ್ಲಿ ಪಾಸ್ ಮಾಡಿಸಿದ್ರು. ಏಪ್ರಿಲ್ 16, 17, 18 ಇದರ ಬಗ್ಗೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಆಗುತ್ತದೆ. ಅಲ್ಲದೇ 545 ಲೋಕಸಭಾ ಸ್ಥಾನ 858 ಕ್ಕೆ ಹೋಗುತ್ತದೆ. ಕರ್ನಾಟಕದ ಕ್ಷೇತ್ರಗಳ ಸಂಖ್ಯೆ 28 ರಿಂದ 42ಕ್ಕೆ ಏರುತ್ತದೆ ಎಂದು ಮೋದಿ ಸರ್ಕಾರದ ಸಾಧನೆಗಳನ್ನ ಬಣ್ಣಿಸಿದರು.

ಅನಾರೋಗ್ಯಪೀಡಿತ ಮಹಿಳೆಗೆ ನೆರವಾಗಲು ನಂಜನಗೂಡಿಗೆ ಎಚ್‌ಡಿಕೆ ಭೇಟಿ; ಯುವಕನೊಬ್ಬ ಶೇರ್ ಮಾಡಿದ್ದ ವಿಡಿಯೊ ನೋಡಿ ಸ್ಪಂದನೆ

ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ಇಷ್ಟು ದೊಡ್ಡ ಸಭೆ ನಡೆಯುತ್ತಿದೆ. ನನ್ನ ದೃಷ್ಟಿಯಿಂದ ಇಂತಹ ಸಮಾವೇಶ ಬೆಂಗಳೂರಿನಲ್ಲಿ ಹಿಂದೆ ನಡೆದಿಲ್ಲ. 2 ಲಕ್ಷಕ್ಕೂ ಹೆಚ್ಚು ಜನ ಇಲ್ಲಿ ಸೇರಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಕೈ ಕೊಡುಗೆ ಏನೂ ಇಲ್ಲ: ನಿಖಿಲ್‌

ಕಾರ್ಯಕ್ರಮದಲ್ಲಿ ಮಾತನಾಡಿದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬೆಂಗಳೂರಿಗೆ ಕಾಂಗ್ರೆಸ್ ಸರ್ಕಾರದ ಕೊಡುಗೆ ಏನೂ ಇಲ್ಲ. ದೇವೇಗೌಡರು, ಕುಮಾರಸ್ವಾಮಿ ಕಾಲದಲ್ಲಿ ಬೆಂಗಳೂರಿಗೆ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನ ಕೊಟ್ಟರು ಅಂತ ತಿಳಿಸಿದರು.

ಕಾವೇರಿ ನೀರು ಕೊಟ್ಟವರು ದೇವೇಗೌಡ, IT-BT ಕ್ಷೇತ್ರ ಬೆಳೆಸಿದ್ದ ದೇವೇಗೌಡ ಅಂತ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು. ಬಿಬಿಎಂಪಿ ಮಾಡಿದ್ದು ಕುಮಾರಸ್ವಾಮಿ, ಕಾಂಗ್ರೆಸ್ ಅದನ್ನ ಜಿಬಿಎ ಅಂತ ಹೆಸರು ಬದಲಾವಣೆ ಮಾಡಿದ್ದೇ ಸಾಧನೆ. ಕಾಂಗ್ರೆಸ್ ಆಡಳಿತದಲ್ಲಿ ಬೆಂಗಳೂರು ಅಭಿವೃದ್ಧಿ ಕುಸಿದು ಹೋಗಿದೆ ಅಂತ ಕಿಡಿಕಾರಿದರು.