Hassan News: ಸಾವಿನಲ್ಲೂ ಸಾರ್ಥಕತೆ ಮೆರೆದ ಮೋನಿಕಾ; ಅಂಗಾಂಗ ದಾನದ ಮೂಲಕ ಐವರ ಬಾಳಿಗೆ ಬೆಳಕಾದ ಹಾಸನ ಯುವತಿ
ಅರಸೀಕೆರೆ ತಾಲೂಕು ಕಾರೇಹಳ್ಳಿ ಗ್ರಾಮದ ನಿವಾಸಿ ಮೋನಿಕಾ ಎಂಬಾಕೆಗೆ ಅಪಘಾತದಲ್ಲಿ ತಲೆಗೆ ಪೆಟ್ಟಾಗಿದ್ದರಿಂದ ಮೆದುಳು ನಿಷ್ಕ್ರಿಯವಾಗಿತ್ತು. ಆಕೆಯ ಅಂಗಾಂಗ ದಾನ ಮಾಡಲು ಪೋಷಕರು ಒಪ್ಪಿದ್ದು, ತನ್ನ ಜೀವನದ ಕೊನೆಯ ಕ್ಷಣದಲ್ಲಿ ಅಂಗಾಂಗ ದಾನದ ಮೂಲಕ ಮಾನವೀಯತೆಯ ಮಹತ್ತರ ಸಂದೇಶ ಸಾರಿದ್ದಾಳೆ.
ಮೃತ ಯುವತಿ ಮೋನಿಕಾ. -
ಹಾಸನ: ಅಪಘಾತದಿಂದ ಮೆದುಳು ನಿಷ್ಕ್ರಿಯವಾಗಿದ್ದ (Brain Dead) ಜಿಲ್ಲೆಯ ಮೋನಿಕಾಳ (Monika) ಅಂಗಾಂಗಗಳನ್ನು (Organ Donation) ಕುಟುಂಬಸ್ಥರು ದಾನ ಮಾಡಿದ್ದು, ಈ ಮೂಲಕ ಯುವತಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ. ಅರಸೀಕೆರೆ ತಾಲೂಕು ಕಾರೇಹಳ್ಳಿ ಗ್ರಾಮದ ನಿವಾಸಿ ಮೋನಿಕಾ (18) ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದಳು. ಏಪ್ರಿಲ್ 5 ರಂದು ಬಿ.ಎಚ್ ರಸ್ತೆಯ ಎಪಿಎಂಸಿ ಮಾರುಕಟ್ಟೆ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿ, ಮೆದುಳು ನಿಷ್ಕ್ರಿಯವಾಗಿತ್ತು.
ಮೋನಿಕಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವೈದ್ಯರು 'ಮಿದುಳು ಸಾವು' ಸಂಭವಿಸಿದೆ ಎಂದು ಘೋಷಿಸಿದ್ದರು. ಮಗಳು ಕಳೆದುಕೊಂಡ ನೋವಿನ ನಡುವೆಯೂ ಒಂದು ಉದಾತ್ತ ನಿರ್ಧಾರ ಕೈಗೊಂಡಿದ್ದಾರೆ. ನಮ್ಮ ಮಗಳು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವಳ ಅಂಗಾಂಗಗಳ ಮೂಲಕ ಬೇರೆಯವರಲ್ಲಿ ಬದುಕಿರುತ್ತಾಳೆ ಎಂಬ ಆಶಯದೊಂದಿಗೆ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದಾರೆ.
Actor Harish Death: ಕೊಡಗಿನಲ್ಲಿ ಭೀಕರ ಅಪಘಾತ; ಟ್ಯಾಂಕರ್‌ಗೆ ಕಾರು ಡಿಕ್ಕಿಯಾಗಿ ಚಿತ್ರನಟ ಹರೀಶ್ ಸಾವು
ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಮೋನಿಕಾಳ ಅಂಗಾಂಗ ದಾನಕ್ಕೆ ಸಿದ್ಧತೆ ನಡೆದಿದ್ದು, ಇದರಿಂದ ಐದಕ್ಕೂ ಹೆಚ್ಚು ರೋಗಿಗಳ ಬಾಳಿಗೆ ಹೊಸ ಬೆಳಕು ಸಿಗಲಿದೆ.