ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಎಟಿಎಂಗಳಿಗೆ ತುಂಬಬೇಕಿದ್ದ 3.40 ಕೋಟಿ ರೂ. ವಂಚನೆ; ಸಿಎಂಎಸ್ ಕಂಪನಿಯ ಇಬ್ಬರ ವಿರುದ್ಧ ಎಫ್‌ಐಆರ್‌

Hassan News: ಹಾಸನದಲ್ಲಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಎಟಿಎಂಗಳಿಗೆ ಹಣ ಹಾಕದೇ 3,40,28,200 ರೂ. ದುರುಪಯೋಗ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಿಎಂಎಸ್ ಕಂಪನಿಯ ಇಬ್ಬರು ಸಿಬ್ಬಂದಿ ವಿರುದ್ಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಟಿಎಂಗೆ ತುಂಬಬೇಕಿದ್ದ 3.40 ಕೋಟಿ ರೂ. ವಂಚನೆ; ಇಬ್ಬರ ವಿರುದ್ಧ ಕೇಸ್‌

ಸಾಂದರ್ಭಿಕ ಚಿತ್ರ -

Prabhakara R
Prabhakara R Feb 21, 2026 3:52 PM

ಹಾಸನ: ನಗರದ ಎಟಿಎಂಗಳಿಗೆ ನಗದು ಹಾಕದೇ 3,40,28,200 ರೂ. ದುರುಪಯೋಗ ಮಾಡಿರುವ ಆರೋಪದಲ್ಲಿ ಸಿಎಂಎಸ್ ಕಂಪನಿಯ ಇಬ್ಬರು ಸಿಬ್ಬಂದಿ ವಿರುದ್ಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಬೂವನಹಳ್ಳಿ ಗ್ರಾಮದ ನಂದೀಶ್ ಬಿ.ಎಲ್. ಹಾಗೂ ದಾಸರಕೊಪ್ಪಲಿನ ಮಧುಕುಮಾ‌ರ್ ಎಂ.ಪಿ. ಎಂಬುವವರ ವಿರುದ್ಧ ಕೇಸ್‌ ದಾಖಲಾಗಿದೆ.

ಆರೋಪಿಗಳು ಎಟಿಎಂ ಹಣ ನಿರ್ವಹಣೆಯ ಜವಾಬ್ದಾರಿಯಲ್ಲಿದ್ದ ವೇಳೆ, 15 ಎಟಿಎಂಗಳಿಗೆ ಹಣ ಹಾಕದೇ ಹಣ ದುರುಪಯೋಗ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಬಗ್ಗೆ ಸಿಎಂಎಸ್‌ ಕಂಪನಿಯ ಬ್ರಾಂಚ್ ಮ್ಯಾನೇಜರ್ ರಾಜು ನೀಡಿದ ದೂರಿನ ಆಧಾರದಲ್ಲಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ನಗರದ ಗೌರಿಕೊಪ್ಪಲಿನಲ್ಲಿ ಕ್ಯಾಷ್ ಮ್ಯಾನೇಜ್‌ಮೆಂಟ್ ಸರ್ವಿಸಸ್ (ಸಿಎಂಎಸ್) ಕಚೇರಿಯಿದ್ದು, ನಿತ್ಯ ನಗರದ ಕೆನರಾ ಬ್ಯಾಂಕ್, ಎಸ್‌ಬಿಐ, ಬ್ಯಾಂಕ್ ಆಫ್ ಬರೋಡ, ಐಡಿಬಿಐ, ಕರ್ಣಾಟಕ ಬ್ಯಾಂಕ್, ಐಸಿಐಸಿಐ, ಆಕ್ಸಿಸ್ ಬ್ಯಾಂಕ್ ಸೇರಿ ಒಟ್ಟು 15 ಬ್ಯಾಂಕ್‌ಗಳ 28 ಎಟಿಎಂಗಳಿಗೆ ಹಣ ಹಾಕಲಾಗುತ್ತಿತ್ತು. ಸರಿಯಾಗಿ ಹಣ ಹಾಕಿದ್ದಾರೋ ಇಲ್ಲವೋ ಎಂಬ ಬಗ್ಗೆ ತಿಂಗಳಿಗೆ ಎರಡು ಬಾರಿ ಆಡಿಟ್ ಮಾಡಲಾಗುತ್ತದೆ. ಫೆ.6 ರಂದು ಆಡಿಟ್ ಮಾಡಿದಾಗ ಎಲ್ಲ ಎಟಿಎಂಗಳಿಗೆ ಸರಿಯಾಗಿ ಹಣವನ್ನು ಹಾಕಲಾಗಿತ್ತು.

ಬ್ಲಿಂಕ್‌ಇಟ್‌ನಿಂದ ಖರೀದಿಸಿದ ಚಾಕುವಿನಿಂದ 2 ಕೊಲೆ; ಇ-ಕಾಮರ್ಸ್ ಕಂಪನಿ ವಿರುದ್ಧ ಪ್ರಕರಣ ದಾಖಲು

ಫೆ.18 ರಂದು ಮತ್ತೆ ಆಡಿಟ್ ಮಾಡಿದಾಗ ಕೋಟ್ಯಂತರ ರೂಪಾಯಿ ವ್ಯತ್ಯಾಸ ಬಂದಿದೆ. ಬೆಂಗಳೂರಿನಿಂದ ಸಿಎಂಎಸ್ ಕಂಪನಿಯ ಮೇಲಧಿಕಾರಿಗಳು ನಗರಕ್ಕೆ ಬಂದಿದ್ದು, ಫೆ.19ರಂದು ರಾತ್ರಿವರೆಗೆ ಆಡಿಟ್ ಮಾಡಿದ್ದಾರೆ. ಒಟ್ಟು 3,40,28,200 ದುರುಪಯೋಗ ಆಗಿದೆ ಎಂಬುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.