Hangal News: ಪದೇಪದೆ ತವರು ಮನೆಗೆ ಹೋಗುತ್ತಾಳೆ ಎಂದು ಪತ್ನಿಯನ್ನೇ ಕೊಲೆಗೈದ ಪತಿ!
Hangal Murder Case: ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮುಡೂರು ಗ್ರಾಮದಲ್ಲಿ ಗುರುವಾರ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಪತ್ತೆಗಾಗಿ ಹಾನಗಲ್ ಪೊಲೀಸ್ ಠಾಣೆಯ ವಿಶೇಷ ತಂಡ ಕಾರ್ಯಾಚರಣೆ ಮುಂದುವರಿಸಿದೆ.
ಕೊಲೆ ಆರೋಪಿ ಗೌಸ್ ಬಿ ಮಕಬುಲ್ ಅಹ್ಮದ್ ಹಿರೇಹಳ್ಳಿ -
ಹಾನಗಲ್: ಪದೇಪದೆ ತವರು ಮನೆಗೆ ಹೋಗುತ್ತಾಳೆ ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿ ಮೇಲೆ ಪತಿ ಹಲ್ಲೆ ಎಸಗಿ ಕೊಲೆ ಮಾಡಿರುವ ಘಟನೆ ಹಾನಗಲ್ ತಾಲೂಕಿನ ಮುಡೂರು ಗ್ರಾಮದಲ್ಲಿ ಗುರುವಾರ ನಡೆದಿದೆ. ಸಾಲೇಹಾ ಚಮನಸಾಬ ಗಣಜೂರ ಮೃತ ದುರ್ದೈವಿ ಎಂದು ತಿಳಿದುಬಂದಿದ್ದು, ಮುಡೂರು ಗ್ರಾಮದ ಗೌಸ್ ಬಿ ಮಕಬುಲ್ ಅಹ್ಮದ್ ಹಿರೇಹಳ್ಳಿ (44) ಕೊಲೆ ಆರೋಪಿಯಾಗಿದ್ದಾನೆ.
ಈ ಘಟನೆಗೆ ಸಂಬಂಧಿಸಿ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಪತ್ತೆಗಾಗಿ ಹಾನಗಲ್ ಪೊಲೀಸ್ ಠಾಣೆಯ ವಿಶೇಷ ತಂಡ ಕಾರ್ಯಾಚರಣೆ ಮುಂದುವರಿಸಿದೆ.
ಅನಾರೋಗ್ಯದಿಂದ ಕರ್ಜಗಿ ಓಂ-112 ಹೋರಿ ಸಾವು

ಹಾವೇರಿ: ಜಿಲ್ಲೆಯ ಕರ್ಜಗಿಯಲ್ಲಿ ಹೋರಿ ಬೆದರಿಸುವ ಹಬ್ಬದ ಪೈಲ್ವಾನ್ ಆಗಿ ಮಿಂಚಿದ್ದ ಕರ್ಜಗಿ ಓಂ-112 ಹೋರಿ ಅನಾರೋಗ್ಯದಿಂದ ಮೃತಪಟ್ಟಿದೆ. ತನ್ನ ಶರವೇಗದ ಓಟದ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಕರ್ನಾಟಕದ ಸ್ಪೆಷಲ್ ಬ್ರ್ಯಾಂಡ್ ಕರ್ಜಗಿ ಓಂ ಹೋರಿ ಹಬ್ಬದ ಕಿಂಗ್ ಆಗಿಯೇ ಇತ್ತು. ಇದೇ ಕಾರಣದಿಂದಾಗಿಯೇ ಇವನನ್ನು ಎಲ್ಲರೂ ಪ್ರೀತಿಯಿಂದ ಕರ್ನಾಟಕದ ಹೋರಿ ಹಬ್ಬದ ಬ್ರ್ಯಾಂಡ್ 1000CC ಕರ್ಜಗಿಯ ಓ೦ ನಂಬರ್ 112 ಎಂದು ಕರೆಯುತ್ತಿದ್ದರು.
ಕಳೆದ ನಾಲ್ಕು ದಿನಗಳ ಹಿಂದಷ್ಟೇ ಬಂಕಾಪುರದ ಹಬ್ಬ ಮುಗಿಸಿ ಅನಾರೋಗ್ಯಕ್ಕೆ ತುತ್ತಾಗಿದ್ದ ಓಂ ಹೋರಿಯು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದೆ. ಸಾವಿರಾರು ಜನರ ಮಧ್ಯೆ ತಾಕತ್ತು ಇದ್ದರೆ ಹಿಡೀರಿ ಎಂದು ಸಾವಿರಾರು ಪೈಲ್ವಾನರಿಗೆ ಸವಾಲು ಹಾಕುತ್ತಿದ್ದ ಈ ಹೋರಿಯ, ವೇಗ, ಆವೇಶ ಮತ್ತು ಜೋಶ್ ನೋಡಲೆಂದೇ ದೂರ ಊರುಗಳಿಂದ ಲಕ್ಷಾಂತರ ಅಭಿಮಾನಿಗಳು ಜಮಾಯಿಸುತ್ತಿದ್ದರು.
ಹೋರಿ ಓಟದ ಅಖಾಡದಲ್ಲಿ ತಾನು ಹೆದರುವ ಬದಲಾಗಿ ಸುತ್ತಲೂ ನೆರೆದಿರುವ ಪೈಲ್ವಾನರನ್ನು ಬೆದರಿಸಿ ಗುರಿ ತಲುಪುತ್ತಿದ್ದ ಈತನನ್ನು ಮುಟ್ಟಬೇಕೆಂದರೆ ಎಂಟೆದೆ ಬೇಕಿತ್ತು. ಮುಟ್ಟಿದರೂ ಹಿಡಿದು ನಿಲ್ಲಿಸಲು ತಾಕತ್ತು ಯಾರಿಗೂ ಇರುತ್ತಿರಲಿಲ್ಲ. ಅನೇಕ ಪೈಲ್ವಾನರು ಹಿಡಿದು ನಿಲ್ಲಿಸುವ ಸಾಹಸಕ್ಕೆ ಕೈ ಹಾಕುತ್ತಿದ್ದರು. ಆದರೂ ಯಾರ ಕೈಗೆ ಸಿಗದೆ ಮುನ್ನುಗ್ಗುವ ತಾಕತ್ತು ಈ ಓ೦ 112 ನಂಬರ್‌ನ ಹೋರಿಯದಾಗಿತ್ತು. ಈತ ನಾಲ್ಕು ವರ್ಷಗಳ ಕಾಲ ಹೋರಿ ಹಬ್ಬದ ಸ್ಪರ್ಧೆಯಲ್ಲಿ ಭಾಗವಹಿಸಿ ಲಕ್ಷಾಂತರ ಅಭಿಮಾನಿಗಳನ್ನುಗಳಿಸಿ ಅಭಿಮಾನಿಗಳು ಆರಾಧ್ಯ ದೈವ ಎನಿಸಿಕೊಂಡಿದ್ದ. ಆದರೆ ಈಗ ಈತ ಅನಾರೋಗ್ಯಕ್ಕೆ ತುತ್ತಾಗಿ ಬಾರದ ಲೋಕದತ್ತ ಪಯಣಿಸಿದ್ದಾನೆ.
ಕರಜಗಿ ಗ್ರಾಮದ ಕಬಡ್ಡಿ ಪೈಲ್ವಾನ್ ಎಂದೆ ಹೆಸರಾದ ಜಗದೀಶ್ ನಾಗಪ್ಪ ಮಾನೆಗಾರ ಎಂಬ ಯುವಕ ನಾಲ್ಕು ವರ್ಷಗಳ ಹಿಂದೆ ಇವರದೇ ಕರ್ಜಗಿ ಓಂ ಸವಿನೆನಪಿಗಾಗಿ ಈ ಜ್ಯೂನಿಯರ್ ಕರ್ಜಗಿ ಓಂ ಹೋರಿಯನ್ನು ಖರೀದಿ ಮಾಡಿದ್ದರು. ಅಂದಿನಿಂದ ಓ೦ ಮನೆಮಗನಾಗಿಯೇ ಇದ್ದನು. ಹೋರಿ ಹಬ್ಬಕ್ಕೆ ಓಂ ಬರುತ್ತಿದೆ ಎಂದರೆ ಲಕ್ಷಾಂತರ ಅಭಿಮಾನಿಗಳು ಜಮಾಯಿಸುತ್ತಿದ್ದರು.
Koratagere News: ಕೊರಟಗೆರೆಯಲ್ಲಿ ಬೋನಿಗೆ ಬಿದ್ದ ಚಿರತೆ; ನಿಟ್ಟುಸಿರು ಬಿಟ್ಟ ಜನ
ಓಂ ಹೋರಿ ಉಳಿಸಿಕೊಳ್ಳಲು ಮಾಲಿಕರು ಬಹಳಷ್ಟು ಹಣ ವ್ಯಯಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇೆ ಓಂ ಶುಕ್ರವಾರ ಬೆಳಗ್ಗೆ ಮೃತಪಟ್ಟಿದೆ. ಮೃತಪಟ್ಟ ಸುದ್ದಿಯನ್ನು ಕೇಳಿ ಹೋರಿಯ ಅಭಿಮಾನಿಗಳು ಆಗಮಿಸಿ, ಅಂತಿಮ ದರ್ಶನ ಪಡೆದಿದ್ದಾರೆ.