ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಾನವೀಯತೆ ಮರೆಯಾಗಿಲ್ಲ: ಗಂಗಾ ನದಿಯಲ್ಲಿ ಸಿಲುಕಿಕೊಂಡ ಕೋತಿಯನ್ನು ರಕ್ಷಿಸಿದ ರಾಫ್ಟಿಂಗ್ ತಂಡ

Viral Video: ಇತ್ತೀಚೆಗೆ ರಾಫ್ಟಿಂಗ್ ತಂಡವೊಂದು ಗಂಗಾ ನದಿಯ ಪ್ರಬಲ ಪ್ರವಾಹಗಳ ನಡುವೆ ಹೋರಾಡಿ ಕೋತಿಯನ್ನು ರಕ್ಷಿಸಿದೆ. ತಮ್ಮ ಜೀವವನ್ನು ಪಣಕ್ಕಿಟ್ಟು ರಾಫ್ಟಿಂಗ್ ತಂಡವು ಕೋತಿಯ ಪ್ರಾಣವನ್ನು ಉಳಿಸಿದೆ. ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನದಿಯ ಪ್ರವಾಹದಲ್ಲಿ ಮುಳುಗುತ್ತಿದ್ದ ಕೋತಿಯನ್ನು ರಕ್ಷಿಸಿದ ರಾಫ್ಟಿಂಗ್ ತಂಡ

ಮಂಗವನ್ನು ರಕ್ಷಿಸಿದ ರಾಫ್ಟಿಂಗ್ ತಂಡ -

Profile
Pushpa Kumari Mar 19, 2026 10:28 PM

ಡೆಹ್ರಾಡೂನ್‌, ಮಾ.19: ಇತ್ತೀಚೆಗೆ ಮಾನವೀಯತೆ ಮರೆಯಾಗಿದೆ ಎನ್ನುವ ಮಾತು ಕೇಳಿ ಬರುತ್ತಿರುವ ಮಧ್ಯೆ ಅದಕ್ಕೆ ಅದನ್ನು ಸುಳ್ಳೆಂದು ಸಾಬೀತುಪಡಿಸುವಂತಹ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ. ಇತ್ತೀಚೆಗೆ ರಾಫ್ಟಿಂಗ್ ತಂಡವೊಂದು ಗಂಗಾ ನದಿಯ ಪ್ರಬಲ ಪ್ರವಾಹಗಳ ನಡುವೆ ಹೋರಾಡಿ ಮಂಗವನ್ನು ರಕ್ಷಿಸಿದೆ. ತಮ್ಮ ಜೀವವನ್ನು ಪಣಕ್ಕಿಟ್ಟು ರಾಫ್ಟಿಂಗ್ ತಂಡವು ಕೋತಿಯ ಪ್ರಾಣವನ್ನು ಉಳಿಸಿದೆ. ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ವೈರಲ್ ಆಗಿರುವ ವಿಡಿಯೊದಲ್ಲಿ ಮಂಗವೊಂದು ಗಂಗಾ ನದಿಯಲ್ಲಿ ವೇಗವಾಗಿ ಚಲಿಸುವ ನೀರಿನಲ್ಲಿ ತೇಲುತ್ತಾ ಪ್ರಾಣವನ್ನು ರಕ್ಷಿಸಲು ಹೋರಾಡುತ್ತಿರುವುದನ್ನು ಕಾಣಬಹುದು.

ವಿಡಿಯೊ ನೋಡಿ:

ಗಂಗಾ ನದಿಯಲ್ಲಿ ತುಂಬಿ ಹರಿಯುತ್ತಿರುವ ನೀರಿನಲ್ಲಿ ಮಂಗವೊಂದು ಸಾವು- ಬದುಕಿನ ಹೋರಾಟ ನಡೆಸುತ್ತಿತ್ತು. ಇದನ್ನು ಗಮನಿಸಿದ ರಾಫ್ಟಿಂಗ್ ತಂಡವು ತಕ್ಷಣ ಕಾರ್ಯ ಪ್ರವೃತ್ತರಾಗಿ ಸಮಯ ಪ್ರಜ್ಞೆಯಿಂದ ಮಂಗವನ್ನು ರಕ್ಷಿಸಿದೆ. ಈ ಕಾರ್ಯಾಚರಣೆಯ ವಿಡಿಯೊ ಗಮನ ಸೆಳೆದಿದ್ದು, ನೆಚ್ಚಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆ ಬೀದಿ ನಾಯಿಗಳಿಗೆ ರಾಯಲ್‌ ಟ್ರೀಟ್‌ಮೆಂಟ್‌

ಅಪಾಯದಲ್ಲಿರುವ ಮಂಗವನ್ನು ಗುರುತಿಸಿದ ರಾಫ್ಟಿಂಗ್ ತಂಡವು ತ್ವರಿತವಾಗಿ ಮಧ್ಯಪ್ರವೇಶಿಸಿ, ಪ್ರವಾಹಗಳ ಮಧ್ಯೆ ದೋಣಿ ಮೂಲಕ ಸಾಗುತ್ತದೆ‌. ಸಂಘಟಿತ ಪ್ರಯತ್ನದಿಂದ ಅವರು ದಣಿದ ಮಂಗವನ್ನು ಸುರಕ್ಷಿತವಾಗಿ ದಡ ತಲುಪಿಸುತ್ತಾರೆ.

ತನ್ನ ಜೀವ ಉಳಿದದ್ದನ್ನು ಅರಿತ ಕೋತಿಯ ವರ್ತನೆ ನೋಡುಗರಲ್ಲಿ ಕಣ್ಣೀರು ತರಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ತ್ವರಿತವಾಗಿ ಪ್ರತಿಕ್ರಿಯೆ ನೀಡಿದ್ದು, ಕಮೆಂಟ್ ವಿಭಾಗದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ರೀತಿಯ ರಕ್ಷಣಾ ಕಾರ್ಯಗಳು ಹೃದಯಸ್ಪರ್ಶಿ ಮಾತ್ರವಲ್ಲ, ವನ್ಯಜೀವಿಗಳೊಂದಿಗೆ ಸಹಬಾಳ್ವೆಯ ಮಹತ್ವವನ್ನು ಸಹ ಎತ್ತಿ ತೋರಿಸುತ್ತವೆ ಎಂದಿದ್ದಾರೆ. ನೆಟ್ಟಿಗರೊಬ್ಬರು ಇಂತಹ ಜೀವ ಉಳಿಸುವ ಮನೋಭಾವ ಎಲ್ಲರಲ್ಲೂ ಇರುವುದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕೇವಲ ಮನುಷ್ಯರ ನಡುವೆ ಸಹಬಾಳ್ವೆ ಮಾತ್ರವಲ್ಲ. ಪ್ರಾಣಿಗಳ ಮೇಲೆಯೂ ಕರುಣೆ ತೋರಿಸುವುದು ಇಂದಿನ ಕಾಲದಲ್ಲಿ ಅತೀ ಮುಖ್ಯ ಎಂದಿದ್ದಾರೆ.