ಸಮವಸ್ತ್ರದಲ್ಲೇ ರಾಮಚಂದ್ರ ರಾವ್ ಮಹಿಳೆಯರೊಂದಿಗೆ ನಡೆಸಿದ ಸರಸದ ವಿಡಿಯೊ ಅಸಲಿ; ತನಿಖಾ ತಂಡದಿಂದ ಬಯಲಾಯ್ತು ಸತ್ಯ
DGP Ramachandra Rao Case: ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ತಮ್ಮ ಕಚೇರಿಯಲ್ಲೇ ಸಮವಸ್ತ್ರ ಧರಿಸಿ ಮಹಿಳೆಯರೊಂದಿಗೆ ಸರಸವಾಡಿರುವ ವಿಡಿಯೊಗಳು ಅಸಲಿ ಎನ್ನುವುದು ಇದೀಗ ಸಾಬೀತಾಗಿದೆ. ನಡೆಸಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್. ಹಿತೇಂದ್ರ ನೇತೃತ್ವದ ಐಪಿಎಸ್ ಅಧಿಕಾರಿಗಳ ತಂಡದ 100 ಪುಟಗಳ ವರದಿಯಲ್ಲಿ ವಿಡಿಯೊದ ಸತ್ಯಾಸತ್ಯತೆ ಹೊರ ಬಿದ್ದಿದೆ.
ಕೆ. ರಾಮಚಂದ್ರ ರಾವ್ (ಸಂಗ್ರಹ ಚಿತ್ರ) -
ಬೆಂಗಳೂರು, ಮಾ. 19: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ ಮಾಜಿ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಪ್ರಕರಣಕ್ಕೆ (DGP Ramachandra Rao Case) ಸಂಬಂಧಿಸಿ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಸಮವಸ್ತ್ರದಲ್ಲಿಯೇ ಕಚೇರಿಯಲ್ಲಿ ಮಹಿಳೆಯ ಜತೆ ಅನುಚಿತವಾಗಿ ಕೆ. ರಾಮಚಂದ್ರ ರಾವ್ ವರ್ತಿಸಿರುವ ವಿಡಿಯೊ ನೈಜವೆಂದು ಸಾಬೀತಾಗಿದೆ. ಈ ವರ್ಷಾರಂಭದಲ್ಲಿ ವಿಡಿಯೊ ವೈರಲ್ ಆಗುತ್ತಿದ್ದಂತೆ ರಾಮಚಂದ್ರ ರಾವ್ ಅವರನ್ನು ಅಮಾನತುಗೊಳಿಸಲಾಗಿತ್ತು. ರಾಮಚಂದ್ರ ರಾವ್ ಈ ವಿಡಿಯೊ ಡೀಪ್‌ಫೇಕ್, ಎಐ ನಿರ್ಮಿತ ಎಂದಿದ್ದರು. ಆದರೆ ಇದೀಗ ತನಿಖೆಯಲ್ಲಿ ವಿಡಿಯೊ ನೈಜವಾದುದು, ಯಾವುದೇ ರೀತಿಯ ಎಡಿಟ್ ಆಗಿರುವ ದೃಶ್ಯಗಳಲ್ಲ ಎನ್ನುವುದು ಸಾಬೀತಾಗಿದೆ.
ತನಿಖೆಯಲ್ಲಿ ವಿಡಿಯೊಗಳು ಸಂಪೂರ್ಣವಾಗಿ ನಿಜವಾಗಿದ್ದು, ಅವು ಡೀಪ್‌ಫೇಕ್, ಎಐ ನಿರ್ಮಿತ ಅಥವಾ ಯಾವುದೇ ರೀತಿಯಲ್ಲಿ ಎಡಿಟ್ ಆಗಿರುವ ದೃಶ್ಯಗಳಲ್ಲ ಎಂಬುದು ದೃಢ ಪಟ್ಟಿದೆ. ತನಿಖೆ ನಡೆಸಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್. ಹಿತೇಂದ್ರ ನೇತೃತ್ವದ 4 ಮಂದಿಯ ಐಪಿಎಸ್ ಅಧಿಕಾರಿಗಳ ತಂಡ 100 ಪುಟಗಳ ವರದಿ ನೀಡಿದೆ. ಇದರಲ್ಲಿ ವಿಡಿಯೊದ ಸತ್ಯಾಸತ್ಯತೆ ಹೊರ ಬಿದ್ದಿದೆ.
ತನಿಖಾ ವರದಿಯಲ್ಲಿ ಏನಿದೆ?
ಫಾರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (FSL) ಪ್ರಕಾರ ವಿಡಿಯೊಗಳು ನಿಜವಾಗಿವೆ, ಯಾವುದೇ ರೀತಿಯಲ್ಲಿ ಎಡಿಟ್ ಆಗಿಲ್ಲ. ಅಲ್ಲದೆ ವಿಡಿಯೊಗಳಲ್ಲಿ ಯಾವುದೇ ಮಾರ್ಪಾಡಾಗಿಲ್ಲ. ಜತೆಗೆ ರಾಮಚಂದ್ರ ರಾವ್ ಅವರ ಜತೆ ಕೆಲಸ ನಿರ್ವಹಿಸಿದ್ದ ಸಿಬ್ಬಂದಿಯೂ ಸಂತ್ರಸ್ತ ಮಹಿಳೆಯರನ್ನು ಗುರುತಿಸಿದ್ದಾರೆ. ಮಹಿಳೆಯರು ರಾವ್ ಅವರ ಖಾಸಗಿ ಕಚೇರಿಗೆ ಹಲವು ಬಾರಿ ಭೇಟಿ ನೀಡಿದ್ದನ್ನು ದೃಢಪಡಿಸಿದ್ದಾರೆ. ಮಹಿಳೆಯರಲ್ಲಿ ಒಬ್ಬರು ತಮ್ಮ ಮೊಬೈಲ್‌ನಲ್ಲಿ ಈ ವಿಡಿಯೊವನ್ನು ಉದ್ದೇಶಪೂರ್ವಕವಾಗಿ ಚಿತ್ರೀಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ವಿಡಿಯೊವನ್ನು ಎಡಿಟ್ ಮಾಡಲಾಗಿದೆ ಎನ್ನುವ ರಾಮಚಂದ್ರ ರಾವ್ ಅವರ ವಾದ ಸುಳ್ಳೆಂದು ಸಾಬೀತಾಗಿದೆ.
ಲವ್ ಯೂ ಬಂಗಾರಿ, ಸೋ ಸ್ವೀಟ್; ಡಿಜಿಪಿ ರಾಸಲೀಲೆ ವಿಡಿಯೊ ಬೆನ್ನಲ್ಲೇ ರೊಮ್ಯಾಂಟಿಕ್ ಆಡಿಯೊ ವೈರಲ್!
ಪ್ರಕರಣದ ವಿವರ
ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ತಮ್ಮ ಕಚೇರಿಯಲ್ಲೇ ಸಮವಸ್ತ್ರ ಧರಿಸಿ ಮಹಿಳೆಯರೊಂದಿಗೆ ಸರಸವಾಡಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅಲ್ಲದೆ ದೇಶಾದ್ಯಂತ ಈ ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ವೈರಲ್ ಆಗಿರುವ ವಿಡಿಯೊಗಳಲ್ಲಿ ರಾಮಚಂದ್ರ ರಾವ್ ಸಮವಸ್ತ್ರದಲ್ಲಿರುವಾಗಲೇ ಕಚೇರಿಯಲ್ಲಿ ಹಲವು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಕಂಡುಬಂದಿತ್ತು. ಮಾಡೆಲ್ ಸೇರಿ ಹಲವು ಮಹಿಳೆಯರ ಜತೆ ಸರಸವಾಡಿರುವ ವಿಡಿಯೊ ವೈರಲ್ ಆಗಿದ್ದವು. ಕಚೇರಿಗೆ ಕೆಲಸದ ನಿಮಿತ್ತ ಬರುವ ಮಹಿಳೆಯರ ಜತೆಗೆ ಈ ಅಧಿಕಾರಿ ಸರಸವಾಡುತ್ತಿದ್ದರು ಎನ್ನಲಾಗುತ್ತಿದೆ.
ಎಐ ವಿಡಿಯೊ ಎಂದಿದ್ದ ರಾಮಚಂದ್ರ ರಾವ್
ವಿಡಿಯೊ ವೈರಲ್ ಆದ ಬೆನ್ನಲ್ಲೇ ರಾಮಚಂದ್ರ ರಾವ್ ಮಾಧ್ಯಮಗಳ ಮುಂದೆ ಬಂದು, ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದರು. ಇದು ತೇಜೋವಧೆ ಮಾಡಲು ನಡೆಸಿರುವ ವ್ಯವಸ್ಥಿತ ಷಡ್ಯಂತ್ರ ಎಂದು ಅವರು ಆರೋಪಿಸಿದ್ದರು. ʼʼಅದು ಎಐ ಬಳಸಿ ಸೃಷ್ಟಿಸಿದ ಅಥವಾ ಎಡಿಟ್ ಮಾಡಿದ ವಿಡಿಯೊ. ನನ್ನ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ ತರಲು ಷಡ್ಯಂತ್ರ ನಡೆದಿದೆʼʼ ಎಂದು ಸಮರ್ಥಿಸಿಕೊಂಡಿದ್ದರು.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.