ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Elephant Attack: ಕೊಡಗಿನ ಹೋಂ ಸ್ಟೇಗೆ ತೆರಳಿದ್ದ ಪ್ರವಾಸಿಗ ಕಾಡಾನೆ ದಾಳಿಗೆ ಬಲಿ

Kodagu News: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತೆರಾಲು ಗ್ರಾಮದಲ್ಲಿ ಘಟನೆ ನಡೆದಿದೆ. ವಾಯುವಿಹಾರಕ್ಕೆ ತೆರಳಿದ್ದ ವೇಳೆ ಕಾಡಾನೆ ದಾಳಿಯಿಂದ ದುರ್ಘಟನೆ ಸಂಭವಿಸಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಕೊಡಗಿನ ಹೋಂ ಸ್ಟೇಗೆ ತೆರಳಿದ್ದ ಪ್ರವಾಸಿಗ ಕಾಡಾನೆ ದಾಳಿಗೆ ಬಲಿ

-

Prabhakara R
Prabhakara R Aug 22, 2026 10:11 PM

ಮಡಿಕೇರಿ: ಕಾಡಾನೆ ದಾಳಿಗೆ ಬೆಂಗಳೂರು ಮೂಲದ ಪ್ರವಾಸಿಗನೊಬ್ಬ ಮೃತಪಟ್ಟಿರುವ ಘಟನೆ (Elephant Attack) ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತೆರಾಲು ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ಹೋಂ ಸ್ಟೇಗೆ ಆಗಮಿಸಿದ್ದ ಸುಮಾರು 40 ವರ್ಷದ ಮುರುಳಿಕೃಷ್ಣ ಎಂಬ ಪ್ರವಾಸಿಗ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.

ಪ್ರವಾಸಿಗರು ತೆರಾಲು ಗ್ರಾಮದ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಶನಿವಾರ ಸಂಜೆ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ನಾಯಿಯನ್ನು ಅಟ್ಟಿಸಿಕೊಂಡು ಬಂದ ಕಾಡಾನೆ ಏಕಾಏಕಿ ಪ್ರವಾಸಿಗನ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.

ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಪ್ರವಾಸಿಗನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲೇ ಆತ ಮೃತಪಟ್ಟಿದ್ದಾನೆ. ಘಟನೆಯಿಂದ ತೆರಾಲು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇನ್ನು ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Vijayapura Tragedy: ವಿಜಯಪುರದಲ್ಲಿ ಬಾವಿಗೆ ಬಿದ್ದು ಇಬ್ಬರು ಮಕ್ಕಳ ಸಾವು, ರಕ್ಷಿಸಲು ಹೋದ ತಂದೆಯೂ ನಾಪತ್ತೆ!

ತುಮಕೂರಿನಲ್ಲಿ ಚಿರತೆಯನ್ನು ಸುಟ್ಟು ಹಾಕಿದ ಮೂವರ ಅರೆಸ್ಟ್

ತುಮಕೂರು: ಅಕ್ರಮವಾಗಿ ನಿರ್ಮಿಸಿದ್ದ ತಂತಿ ಬಲೆಯಲ್ಲಿ ಸಿಲುಕಿದ್ದ ಚಿರತೆಯನ್ನು ಸುಟ್ಟು ಹಾಕಿರುವ ಘಟನೆ ತುಮಕೂರಿನ ಗೌರಗೊಂಡನಹಳ್ಳಿಯಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿ ಮೂವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ನಾರಾಯಣಪ್ಪ, ಜಿಡಿ ಶಿವಕುಮಾರ್ ಮತ್ತು ಚಂದ್ರೇಶಕರ್ ಬಂಧಿತ ಆರೋಪಿಗಳು.

ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral news) ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನು ಹೆಚ್ಚಿನ ಬಂಧನಗಳಾಗುವ ಸಾಧ್ಯತೆ ಇದೆ ಎಂದು ಅರಣ್ಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಆರೋಪಿಗಳು ರಾಗಿ ಹೊಲದ ಸುತ್ತಲೂ ತಂತಿ ಬಲೆ ಬೋನು ಹಾಕಿದ್ದರು. ಅದರಲ್ಲಿ ಚಿರತೆ ಸಿಕ್ಕಿಕೊಂಡಿದ್ದು, ಅದನ್ನು ಶುಕ್ರವಾರ ಸುಟ್ಟು ಹಾಕಿದ್ದಾರೆ. ಕೆಲವರು ಇದರ ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಬೇಟೆಯನ್ನು ಹುಡುಕುತ್ತ ಬಂದಿದ್ದ ಚಿರತೆಯೊಂದು ಎರಡು ದಿನಗಳ ಹಿಂದೆ ಇದರಲ್ಲಿ ಸಿಕ್ಕಿಹಾಕಿಕೊಂಡಿತ್ತು. ಇದನ್ನು ಶುಕ್ರವಾರ ಬೆಳಗ್ಗೆ ನಾರಾಯಣಪ್ಪ, ಜಿಡಿ ಶಿವಕುಮಾರ್, ಚಂದ್ರಶೇಖರ್ ಎಂಬವರು ಸೇರಿ ಗ್ರಾಮದ ಕೆಲವು ಯುವಕರೊಂದಿಗೆ ಸುಟ್ಟು ಹಾಕಿದ್ದಾರೆ. ಇದರ ದೃಶ್ಯಗಳು ಸ್ಥಳೀಯ ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೆಯಾಗಿತ್ತು.