ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

KOMUL Milk Price: ಕೋಲಾರ ಹಾಲು ಒಕ್ಕೂಟದಿಂದ ರೈತರಿಗೆ ಯುಗಾದಿ ಗಿಫ್ಟ್‌; ಹಾಲಿನ ಬೆಲೆ 2 ರೂ. ಏರಿಕೆ

Kolar Milk Producers Union Ltd: ಕೋಲಾರ ಹಾಲು ಒಕ್ಕೂಟದಿಂದ ರೈತರಿಗೆ ಪ್ರಸ್ತುತ ಲೀಟರ್ ಹಾಲಿಗೆ 35.40 ರೂ. ನೀಡಲಾಗುತ್ತಿದ್ದು, ಬುಧವಾರದಿಂದ ಲೀಟರ್‌ಗೆ 37.40 ರೂ.ಗಳನ್ನು ಹೈನುಗಾರರಿಗೆ ಪಾವತಿ ಮಾಡಲಾಗುವುದು ಎಂದು ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದ್ದಾರೆ.

ಕೋಮುಲ್‌ ರೈತರಿಗೆ ಯುಗಾದಿ ಗಿಫ್ಟ್‌; ಹಾಲಿನ ಬೆಲೆ 2 ರೂ. ಏರಿಕೆ

ಕೋಮುಲ್‌ ಅಧ್ಯಕ್ಷ, ಶಾಸಕ ಕೆ.ವೈ.ನಂಜೇಗೌಡ -

Prabhakara R
Prabhakara R Mar 17, 2026 6:12 PM

ಕೋಲಾರ: ಕೋಲಾರ ಹಾಲು ಒಕ್ಕೂಟದಿಂದ (Kolar District Milk Producers Union Ltd) ಹಾಲಿನ ಖರೀದಿ ಬೆಲೆಯನ್ನು 2 ರೂ. ಏರಿಕೆ ಮಾಡುವ ಮೂಲಕ ಯುಗಾದಿ ಹಬ್ಬಕ್ಕೆ ರೈತರಿಗೆ ಕೊಡುಗೆ ನೀಡಿದ್ದು, ಹೈನುಗಾರರ ಮುಖದಲ್ಲಿ ಮಂದಹಾಸ ಮಿನುಗಿದೆ. ಕೋಮುಲ್ (Komul) ಕಚೇರಿಯಲ್ಲಿ ಈ ಸಂಬಂಧ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಲೀಟರ್ ಹಾಲಿಗೆ 35.40 ರೂ. ನೀಡಲಾಗುತ್ತಿದ್ದು, ಬುಧವಾರದಿಂದ ಲೀಟರ್‌ಗೆ 37.40 ರೂ.ಗಳನ್ನು ಹೈನುಗಾರರಿಗೆ ಪಾವತಿ ಮಾಡಲಾಗುವುದು. ಹಸು ವಿಮಾ ಮೊತ್ತವನ್ನು 70 ಸಾವಿರದಿಂದ 80 ಸಾವಿರಕ್ಕೆ ಏರಿಸಲಾಗಿದ್ದು, ಹಸಿರು ಮೇವು ಬೆಳೆಯಲು ಪ್ರತಿ ಎಕರೆಗೆ 3 ಸಾವಿರ ರೂ ಪ್ರೋತ್ಸಾಹಧನ ರೈತರಿಗೆ ವಿತರಿಸಲಾಗುತ್ತದೆ.

ಕೋಮುಲ್‌ನ 202 ಸಿಬ್ಬಂದಿಗೆ ತಲಾ 75 ಸಾವಿರ ರೂ. ಬೋನಸ್ ನೀಡಲಾಗುತ್ತಿದ್ದು, ಗುತ್ತಿಗೆ ಕಾರ್ಮಿಕರಿಗೆ ಶೇ.8.33 ಬೋನಸ್ ನೀಡಲಾಗುತ್ತಿದದು, ಇದಕ್ಕಾಗಿ 3.5 ಕೋಟಿ ರೂ. ಆಗುತ್ತದೆ. ಸೋಲಾರ್ ಘಟಕದಿಂದ ತಿಂಗಳಿಗೆ 80 ಲಕ್ಷ ರೂ. ಉಳಿತಾಯವಾಗುತ್ತಿದ್ದು, ಬಿಎಂಸಿಗಳಿಗೆ ಬಳಕೆ ಮಾಡಿಕೊಂಡ ನಂತರ ಯೂನಿಟ್‌ಗೆ 3.52 ರೂ. ನಂತೆ ಖಾಸಗಿಯವರಿಗೆ ವಿದ್ಯುತ್ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಸೋಲಾರ್ ಘಟಕದಿಂದ ಒಕ್ಕೂಟಕ್ಕೆ 1.20 ಕೋಟಿ ರೂ. ಉಳಿತಾಯ ಆಗುತ್ತಿದೆ.



ಡೇರಿ ಕಾರ್ಯದರ್ಶಿಗೆ 5 ಲಕ್ಷ ರೂ, ಟೆಸ್ಟರ್‌ಗೆ 3 ಲಕ್ಷ ರೂ ಮತ್ತು ಸಹಾಯಕನಿಗೆ 2 ಲಕ್ಷ ರೂ. ನಿವೃತ್ತಿ ಇಡುಗಂಟನ್ನು ನೀಡುವ ಜತೆಗೆ 10 ಪೈಸೆ ಪ್ರೋತ್ಸಾಹಧನ ನೀಡಲು ತುರ್ತು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದರು.

ಈ ವೇಳೆ ಕೋಮುಲ್ ನಿರ್ದೇಶಕರಾದ ಚಂಜಿಮಲೆ ರಮೇಶ್, ನಾಗರಾಜ್ ಮುಂತಾದವರು ಇದ್ದರು.

ಮಂಗಳೂರು ಬಳಿಕ ಜಿಲ್ಲೆಯಲ್ಲಿ ಹಾಲಿಗೆ ಹೆಚ್ಚಿನ ಖರೀದಿ ಬೆಲೆ

ಮಂಗಳೂರು ಹೊರತುಪಡಿಸಿ ಇಡೀ ರಾಜ್ಯದಲ್ಲೇ ಹೆಚ್ಚಿನ ಖರೀದಿ ಬೆಲೆಯನ್ನು ಕೋಮುಲ್ ನೀಡುತ್ತಿದ್ದು, ರಾಜ್ಯ ಮಟ್ಟದಲ್ಲಿ ಹಾಲಿನ ಮಾರಾಟ ಶೇ.16 ಏರಿಕೆ ಆಗಿದೆ. ಮೊಸರು ಮಾರಾಟದಲ್ಲಿ ಶೇ.25 ಪ್ರಗತಿ ಆಗಿದ್ದು ಪನ್ನೀರ್, ಚೀಸ್, ಪೌಡರ್ ಪ್ಲಾಂಟ್, ಐಸ್‌ಕ್ರೀಂ, ಕ್ಯಾಟಲ್ ಫೀಡ್ ಘಟಕ ಸ್ಥಾಪನೆಗೆ 250 ಕೋಟಿ ರೂ. ವೆಚ್ಚದ ಡಿಪಿಆರ್ ಮಾಡಲಾಗಿದ್ದು, ಕೆಎಂಎಫ್ ಅನುಮೋದನೆ ಪಡೆದುಕೊಂಡು ಸ್ಥಾಪನೆ ಮಾಡಲಾಗುವುದು. ಪ್ರತಿ ಹಳ್ಳಿಯಲ್ಲಿ ಡೇರಿ ಆರಂಭಿಸುವ ಮೂಲಕ ದಿನಕ್ಕೆ 10 ಲಕ್ಷ ಲೀಟರ್ ಹಾಲು ಸಂಗ್ರಹಣೆ ಗುರಿ ಹೊಂದಲಾಗಿದೆ. ಮೇ ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸೋಲಾರ್ ಘಟಕ ಮತ್ತು ಗೋಲ್ಡನ್ ಡೇರಿ ಉದ್ಘಾಟಿಸುವರು ಎಂದು ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದರು.