ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ನಡೆ ಅನುಮಾನಕ್ಕೆ ಎಡೆ: 'ಕುಡಾ' ಕಚೇರಿಯಲ್ಲಿ ರಾತ್ರಿ ಇಡೀ ಕೆಲಸವೇ?

ಕಂಪ್ಯೂಟರ್‌ ಆಪರೇಟರ್‌ ಜೊತೆಗೂಡಿ ತಮ್ಮ ಚೇಂಬರ್ ನಲ್ಲಿ ಇದ್ದಿದ್ದು ಕಂಡು ಬಂದಿದೆ. ಪ್ರಾಧಿಕಾರದ ಕಚೇರಿಯಲ್ಲಿ ಇಡೀ ದಿನ ಮಾಡಿದರೂ ಮುಗಿಯದ ಕೆಲಸವಾದರೂ ಏನಿದೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ. ಪ್ರತ್ಯೇಕ ಬ್ಯಾಂಕ್ ಖಾತೆ ಸೃಷ್ಟಿಸಿ ಬರೋಬ್ಬರಿ 8 ಕೋಟಿ ರು. ಭ್ರಷ್ಟಾಚಾರ ಮಾಡಿರುವ ಪ್ರಕರಣ ತನಿಖೆ ನಡೆದಿರುವಾಗಲೇ ಅಧಿಕಾರಿಗಳು ರಾತ್ರಿ ಡ್ಯೂಟಿ ಮಾಡು ತ್ತಿರುವುದು ಸಾಕಷ್ಟು ಅನುಮಾನ ಹುಟ್ಟು ಹಾಕಿದೆ.

'ಕುಡಾ' ಕಚೇರಿಯಲ್ಲಿ ರಾತ್ರಿ ಇಡೀ ಕೆಲಸವೇ?

-

Profile
Ashok Nayak Sep 2, 2026 12:00 PM

ಶರಣಬಸವ ಹುಲಿಹೈದರ

ಕೊಪ್ಪಳ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ(KUDA) ದಲ್ಲಿ ನಡೆ ಭ್ರಷ್ಟಾಚಾರದ ತನಿಖೆ ಒಂದೆಡೆ ಚುರುಕುಗೊಂಡಿದೆ. ಈ ನಡುವೆ ಕಳೆದ ಮೂರ್ನಾಲ್ಕು ದಿನದಿಂದ ಹಾಲಿ ಆಯುಕ್ತರು ರಾತ್ರಿ ಇಡೀ ಕಚೇರಿಯಲ್ಲಿ ಕೆಲಸ ಮಾಡುತ್ತಿರುವುದು ಅನುಮಾನಕ್ಕೆ ಎಡೆ ಮಾಡಿದೆ.

ನೈಟ್ ಡ್ಯೂಟಿ ಹಿಂದೆ ಹತ್ತಾರು ಊಹಾಪೋಹ ಹರಿದಾಡುತ್ತಿದ್ದು, ಆಗಿರುವ ಭ್ರಷ್ಟಾಚಾರದ ಸಾಕ್ಷ ನಾಶಕ್ಕೋ ಅಥವಾ ಬೇರೆ ಯಾವ ಕಾರಣಕ್ಕೆ ರಾತ್ರಿ 10 ಗಂಟೆ ವರೆಗೆ ಕಚೇರಿ ತೆರೆದುಕೊಂಡಿರುತ್ತದೆ ಎಂಬುದು ಅಧಿಕಾರಿಗಳು ತಿಳಿಸಬೇಕಿದೆ ಸಾರ್ವಜನಿಕರ ಪ್ರಶ್ನೆ. ಪ್ರಾಧಿಕಾರದ ಆಯುಕ್ತ ಶರಣಪ್ಪ ಚೌವ್ಹಾಣ ಸೋಮ ವಾರ ರಾತ್ರಿ 9.40ರ ವರೆಗೆ ಕುಡಾ ಕಚೇರಿಯಲ್ಲಿದ್ದರು.

ಇದನ್ನೂ ಓದಿ: Koppal News: ಕೊಪ್ಪಳದಲ್ಲಿ ಘೋರ ಘಟನೆ; ಪತ್ನಿ, ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಚಿನ್ನದ ವ್ಯಾಪಾರಿ

ಕಂಪ್ಯೂಟರ್‌ ಆಪರೇಟರ್‌ ಜೊತೆಗೂಡಿ ತಮ್ಮ ಚೇಂಬರ್ ನಲ್ಲಿ ಇದ್ದಿದ್ದು ಕಂಡು ಬಂದಿದೆ. ಪ್ರಾಧಿಕಾರದ ಕಚೇರಿ ಯಲ್ಲಿ ಇಡೀ ದಿನ ಮಾಡಿದರೂ ಮುಗಿಯದ ಕೆಲಸವಾದರೂ ಏನಿದೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ. ಪ್ರತ್ಯೇಕ ಬ್ಯಾಂಕ್ ಖಾತೆ ಸೃಷ್ಟಿಸಿ ಬರೋಬ್ಬರಿ 8 ಕೋಟಿ ರು. ಭ್ರಷ್ಟಾಚಾರ ಮಾಡಿರುವ ಪ್ರಕರಣ ತನಿಖೆ ನಡೆದಿರುವಾಗಲೇ ಅಧಿಕಾರಿಗಳು ರಾತ್ರಿ ಡ್ಯೂಟಿ ಮಾಡು ತ್ತಿರುವುದು ಸಾಕಷ್ಟು ಅನುಮಾನ ಹುಟ್ಟು ಹಾಕಿದೆ.

ಅಧಿಕಾರಿಗೆ ತರಾಟೆ: ಸೋಮವಾರ ರಾತ್ರಿ 9.40ಕ್ಕೆ ಕೊಪ್ಪಳ ನಗರಾಭಿವೃದ್ಧಿ ಪ್ರಾಽಕಾರದ ಆಸಕ್ತರು ಕಚೇರಿಯಲ್ಲೇ ಇರುವುದು ಕಂಡು ಬಂದಿದೆ.

ರಾತ್ರಿ ಇಡೀ ಉರಿವ ಲೈಟ್, ಫ್ಯಾನ್!

ಕರ್ನಾಟಕ ನವ ನಿರ್ಮಾಣ ಸೇನೆ ಮುಖಂಡರು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಸೋಮವಾರ ರಾತ್ರಿ 9.40ರ ಸುಮಾರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಇಡೀ ಕಚೇರಿ ತುಂಬ ವಿದ್ಯುತ್ ಲೈಟ್ ಸೇರಿ ಎಲ್ಲ ಚೇಂಬರ್‌ನಳಲ್ಲಿನ ಫ್ಯಾನ್ ಉರಿಯುತ್ತಿರುಹುದು ಕಂಡು ಬಂದಿದೆ. ಈಗಾಗಲೇ ಲೂಟಿ ಆಗಿರುವ ಕಚೇರಿಯಲ್ಲಿ ಅನಗತ್ಯವಾಗಿ ವಿದ್ಯುತ್ ಬಿಲ್ ವ್ಯರ್ಥ ಮಾಡುವ ಅಗತ್ಯ ಏನಿದೆ ಎಂಬ ಪ್ರಶ್ನೆ ಸಾರ್ವಜನಿಕರದ್ದು.

image

ಪ್ರಾಧಿಕಾರದ ಆಯುಕ್ತರು ಮಹಿಳಾ ಸಿಬ್ಬಂದಿ ಜೊತೆಗೆ ರಾತ್ರಿ 10 ಗಂಟೆ ವರೆಗೆ ಕೆಲಸ ಮಾಡುತ್ತಾರೆ ಎಂದರೆ ಏನರ್ಥ? ಈ ಬಗ್ಗೆ ಕೇಳಿದರೆ ಆಯುಕ್ತರು ಬಾಕಿ ಕೆಲಸ ಮುಗಿಸುತ್ತಿದ್ದೇವೆ ಎಂದು ಸಬೂಬು ನೀಡುತ್ತಾರೆ. ಖಾಸಗಿ ಆಗಿರಲಿ, ಸರಕಾರಿ ಕಚೇರಿಗಳೇ ಆಗಿರಲಿ ಮಹಿಳಾ ಸಿಬ್ಬಂದಿಯನ್ನು ಸಂಜೆ ವೇಳೆಗೆ ಮನೆಗೆ ಕಳುಹಿಸಬೇಕು ಎಂಬ ನಿಯಮ ಇದೆ. ಇದ್ಯಾವುದೂ ಇವರಿಗೆ ಅನ್ವಯ ಆಗುವುದಿಲ್ಲವೇ?

- ಹೇಮಲತಾ ನಾಯಕ, ಎಂಎಲ್ಸಿ