ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KN Rajanna Resigns: ಸಚಿವ ಕೆಎನ್‌ ರಾಜಣ್ಣ ದಿಢೀರ್‌ ರಾಜೀನಾಮೆ, ಹೈಕಮಾಂಡ್‌ ರಾಂಗ್‌ ಆಗಿದ್ದೇ ಕಾರಣ!

KN Rajanna: ಬಿಜೆಪಿ ಮತಗಳವು ಹಿನ್ನೆಲೆಯಲ್ಲಿ ರಾಜಣ್ಣ ನೀಡಿದ ಹೇಳಿಕೆಗೆ ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜೀನಾಮೆ ನೀಡುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೆಲ ಹೊತ್ತಿನಲ್ಲೇ ರಾಜಣ್ಣ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಹೈಕಮಾಂಡ್‌ ರಾಂಗ್‌, ಸಚಿವ ಕೆಎನ್‌ ರಾಜಣ್ಣ ದಿಢೀರ್‌ ರಾಜೀನಾಮೆ

ಹರೀಶ್‌ ಕೇರ ಹರೀಶ್‌ ಕೇರ Aug 11, 2025 2:49 PM

ಬೆಂಗಳೂರು: ರಾಜ್ಯ ಸಹಕಾರ ಖಾತೆ ಸಚಿವ ಕೆಎನ್‌ ರಾಜಣ್ಣ (KN Rajanna Resigns) ಅವರು ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಮತಗಳ್ಳತನ ಕುರಿತಂತೆ ಅವರು ನೀಡಿದ್ದ ಹೇಳಿಕೆಗೆ ಕಾಂಗ್ರೆಸ್‌ ಹೈಕಮಾಂಡ್‌ ತೀವ್ರವಾಗಿ ಗರಂ ಆಗಿತ್ತು. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜೀನಾಮೆ ನೀಡುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೆಲ ಹೊತ್ತಿನಲ್ಲೇ ರಾಜಣ್ಣ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ರಾಜಣ್ಣ ಹೇಳಿದ್ದೇನು?

ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿರುವ 'ಮತ ಕಳ್ಳತನ' ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಹಕಾರ ಸಚಿವ ಕೆಎನ್ ರಾಜಣ್ಣ ಪ್ರತಿಕ್ರಿಯೆ ನೀಡಿದ್ದರು. ನಮ್ಮ ಸರ್ಕಾರ ಇದ್ದಾಗಲೇ ಮತದಾರರ ಪಟ್ಟಿ ಮಾಡಿದ್ದು, ಆಗೇನು ಕಣ್ಮುಚ್ಚಿ ಕುಳಿತಿದ್ರಾ ಎಂದು ಪ್ರಶ್ನಿಸಿದ್ದರು. ತುಮಕೂರಿನಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕೆಎನ್ ರಾಜಣ್ಣ, 'ಮತಗಳ್ಳತನ ಎಂದು ನಾವು ಹೇಳುತಿದ್ದೇವೆ. ಇದು ನಡೆದಿರೋದು ನಿಜ. ಆದರೆ ನಾವು ಮೊದಲು ನೋಡಿಕೊಳ್ಳದೇ ಈಗ ಹೇಳುತ್ತಿರೋದು ನಮಗೆ ನಾಚಿಕೆ ಆಗಬೇಕು. ನಮ್ಮದೇ ಸರ್ಕಾರ ಇದ್ದಾಗ ವೋಟರ್ ಲಿಸ್ಟ್ ಮಾಡಿದ್ದು, ಆಗೇನು ಕಣ್ಮುಚ್ಚಿ ಕುಳಿತಿದ್ರಾ ಎಂದು ತಮ್ಮದೇ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು.

'ಇದನ್ನೆಲ್ಲಾ ಮಾತನಾಡೋಕೆ ಹೋದ್ರೆ ಏನೇನೋ ಆಗುತ್ತೆ. ವೋಟರ್ ಲಿಸ್ಟ್ ಎಲ್ಲಾ ಯಾವ ಕಾಲದಲ್ಲಿ ಮಾಡಿದ್ದು? ನಮ್ಮದೇ ಸರ್ಕಾರ ಇರುವಾಗ ಮಾಡಿರೋದು ಅಲ್ವಾ? ಆವಾಗ ಎಲ್ಲಾ ಕಣ್ಮುಚ್ಚಿ ಕುಳಿತಿದ್ರಾ?. ಈ ಅಕ್ರಮಗಳು ನಡೆದಿರೋ ಸತ್ಯ. ಇದರಲ್ಲಿ ಯಾವುದೇ ಸುಳ್ಳು ಏನಿಲ್ಲ. ಅಕ್ರಮಗಳು ನಮ್ಮ ಕಣ್ಮುಂದೆನೆ ನಡೆದಿದ್ದವಲ್ಲಾ ನಮಗೆ ಅವಮಾನ ಆಗಬೇಕು. ನಾವು ನೋಡಿಕೊಳ್ಳಲಿಲ್ಲವಲ್ಲ ಎಂದು ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಘಟನೆಗಳಿಂದ ನಾವು ಪಾಠ ಕಲಿತು ಎಚ್ಚರಿಕೆಯಿಂದ ನಡೆಯಬೇಕು. ಅವರು ಮಾಡಬಾರದ್ದನ್ನ ಮಾಡಿ ವೋಟರ್ ಲಿಸ್ಟ್ (Voter List) ಬದಲಾವಣೆ ಮಾಡಿ ಪ್ರಧಾನ ಮಂತ್ರಿ ಆಗಿದ್ದಾರೆ. ಅದು ನೂರಕ್ಕೆ ನೂರು ಸತ್ಯ. ಆದರೆ ನಮಗೆ ಡ್ರಾಫ್ಟ್ ಎಲೆಕ್ಷನ್ ಕಮಿಷನ್ ನಿಂದ ರೋಲ್ ಮಾಡುವಾಗ ನೋಡಿಕೊಳ್ಳಬೇಕಾ? ಮಹದೇವಪುರದಲ್ಲಂತು ಮೋಸ ಮಾಡಿರೋದು ನಿಜ. ಒಬ್ಬನೇ ಮೂರು ಮೂರು ಕಡೆಗಳಲ್ಲಿ ವೋಟರ್ ಲಿಸ್ಟ್ ಸೇರಿಕೊಂಡು ವೋಟ್ ಹಾಕಿದ್ರೆ. 10, 15 ಜನ ಇರೋ ಕಡೆಗಳಲ್ಲಿ 60 ಜನ ವೋಟರ್ ಲಿಸ್ಟ್‌ಗೆ ಸೇರಿಸ್ತಾರೆ. ಅಡ್ರೆಸ್ ಗಳಿಲ್ಲ.. ತಂದೆ ಹೆಸರಿಲ್ಲ. ಈತರದ್ದನ್ನೆಲ್ಲಾ ಅಕ್ರಮವಾಗಿ ಮಾಡಿದ್ದಾರೆ. ಆದರೆ ನಾವು ಡ್ರಾಫ್ಟ್ ಎಲೆಕ್ಟ್ರಾನೊ ರೋಲ್ ಮಾಡಿದಾಗ ನಾವು ಅಬ್ಜಕ್ಷನ್ ಹಾಕಬೇಕಿತ್ತು ಎಂದು ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದರು.