Shakti Scheme: ಹೆತ್ತವರು ಬೈದರೆಂದು ಅಕ್ಕ- ತಮ್ಮ ಮನೆಯಿಂದ ಪರಾರಿ, ಶಕ್ತಿ ಯೋಜನೆ ಬಳಸಿ ಸುತ್ತಾಟ!
ಟ್ಯೂಷನ್ ಗೆ ಹಾಜರಾಗದ ಕಾರಣ ಪೋಷಕರು ಮಕ್ಕಳನ್ನು ಬೈದಿದ್ದರು. ಬೈದಿದ್ದರಿಂದ ಅಸಮಾಧಾನಗೊಂಡ 13 ವರ್ಷದ ಬಾಲಕಿ ತನ್ನ ಒಂಬತ್ತು ವರ್ಷದ ಸಹೋದರನೊಂದಿಗೆ ಮನೆ ತೊರೆಯಲು ನಿರ್ಧರಿಸಿದ್ದಳು. ಫೆಬ್ರವರಿ 1ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಾಲಕಿ ತನ್ನ ಆಧಾರ್ ಕಾರ್ಡ್ ತೆಗೆದುಕೊಂಡು ತನ್ನ ಸಹೋದರನೊಂದಿಗೆ ಮನೆಯಿಂದ ಹೊರಬಂದಿದ್ದಳು.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಫೆ.05: ಬೆಂಗಳೂರಿನ 13 ವರ್ಷದ ಬಾಲಕಿಯೊಬ್ಬಳು ಟ್ಯೂಷನ್ ತರಗತಿಗಳನ್ನು ತಪ್ಪಿಸಿದ್ದಕ್ಕಾಗಿ ಪೋಷಕರು ಬೈದಿದ್ದರಿಂದ ತನ್ನ ಕಿರಿಯ ಸಹೋದರನೊಂದಿಗೆ ಮನೆಯಿಂದ ಹೊರಬಂದು ಆಧಾರ್ ಕಾರ್ಡ್ (Aadhar Card) ಬಳಸಿ ಕರ್ನಾಟಕ ಸರಕಾರದ ಶಕ್ತಿ ಯೋಜನೆ (Shakti Scheme) ಬಳಸಿ ಬಸ್ಸಿನಲ್ಲಿ ಸುತ್ತಾಡಿದ ಘಟನೆ ಬೆಳಕಿಗೆ ಬಂದಿದೆ.
ಇವರದು ಬೆಂಗಳೂರಿನ ಮಾರತ್‌ಹಳ್ಳಿ ಪ್ರದೇಶದ ಅಶ್ವತ್ಥನಗರದಲ್ಲಿ ವಾಸಿಸುತ್ತಿರುವ ಕುಟುಂಬ. ಟ್ಯೂಷನ್ ಗೆ ಹಾಜರಾಗದ ಕಾರಣ ಪೋಷಕರು ಮಕ್ಕಳನ್ನು ಬೈದಿದ್ದರು. ಬೈದಿದ್ದರಿಂದ ಅಸಮಾಧಾನಗೊಂಡ 13 ವರ್ಷದ ಬಾಲಕಿ ತನ್ನ ಒಂಬತ್ತು ವರ್ಷದ ಸಹೋದರನೊಂದಿಗೆ ಮನೆ ತೊರೆಯಲು ನಿರ್ಧರಿಸಿದ್ದಳು. ಫೆಬ್ರವರಿ 1ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಾಲಕಿ ತನ್ನ ಆಧಾರ್ ಕಾರ್ಡ್ ತೆಗೆದುಕೊಂಡು ತನ್ನ ಸಹೋದರನೊಂದಿಗೆ ಮನೆಯಿಂದ ಹೊರಬಂದಿದ್ದಳು.
ನಂತರ ಮಹಿಳೆಯರಿಗಾಗಿ ಮೀಸಲಾದ ಸರ್ಕಾರದ ಉಚಿತ ಬಸ್ ಪ್ರಯಾಣ ಟಿಕೆಟ್ ಸೌಲಭ್ಯವನ್ನು ಬಳಸಿಕೊಂಡು ಇಬ್ಬರೂ ಮಕ್ಕಳು ಬೆಂಗಳೂರಿನಿಂದ ಶಿವಮೊಗ್ಗ ಮತ್ತು ಚಿತ್ರದುರ್ಗ ಕಡೆಗೆ ಪ್ರಯಾಣಿಸಿದ್ದರು. ಮಕ್ಕಳು ಮನೆಗೆ ಮರಳದಿದ್ದಾಗ, ಪೋಷಕರು ಗಾಬರಿಗೊಂಡು ಕಾಣೆಯಾದ ದೂರು ದಾಖಲಿಸಲು ಎಚ್ಎಎಲ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದರು. ಕೂಡಲೇ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದರು.
ಅಧಿಕಾರಿಗಳು ಮಕ್ಕಳ ಛಾಯಾಚಿತ್ರ ಮತ್ತು ವಿವರಗಳನ್ನು ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಇರುವ ಪೊಲೀಸ್ ಠಾಣೆಗಳಿಗೆ ಕಳಿಸಿದ್ದರು. ಸಾರ್ವಜನಿಕ ಸಹಾಯವನ್ನು ಪಡೆಯಲು ಫೇಸ್ಬುಕ್ ಮತ್ತು ವಾಟ್ಸಾಪ್ ಗ್ರೂಪ್‌ಗಳಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಮಾಹಿತಿಯನ್ನು ವ್ಯಾಪಕವಾಗಿ ಹಂಚಿಕೊಂಡಿದ್ದರು.
ಚಿತ್ರದುರ್ಗದ ನಿವಾಸಿಯೊಬ್ಬರು ಹೀಗೆ ಪ್ರಸಾರವಾದ ಛಾಯಾಚಿತ್ರಗಳಿಂದ ಮಕ್ಕಳನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ತ್ವರಿತವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಅಧಿಕಾರಿಗಳು ಮಕ್ಕಳನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಮರಳಿ ಕರೆತಂದಿದ್ದರು. ನಂತರ ಮಕ್ಕಳನ್ನು ಎಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಅವರ ಪೋಷಕರಿಗೆ ಹಸ್ತಾಂತರಿಸಲಾಗಿದೆ.
Stree Shakti Scheme: ಇನ್ನು ಮುಂದೆ ಎಲೆಕ್ಟ್ರಿಕ್ ಎಸಿ ಬಸ್‌ಗಳಲ್ಲಿಯೂ ಮಹಿಳೆಯರಿಗೆ ಉಚಿತ ಪ್ರಯಾಣ!