BESCOM Online Services: ಸಾಫ್ಟ್‌ವೇರ್ ಅಳವಡಿಕೆ: ಬೆಸ್ಕಾಂನ 20 ಪಟ್ಟಣಗಳಲ್ಲಿ ಸೆ.17ರವರೆಗೆ ಆನ್‌ಲೈನ್ ಸೇವೆ ಅಲಭ್ಯ
BESCOM: ಐಪಿಡಿಎಸ್ ಐಟಿ ಅಪ್ಲಿಕೇಶನ್ ಅನ್ನು ಬೆಸ್ಕಾಂ ವ್ಯಾಪ್ತಿಯ 20 ಐಪಿಡಿಎಸ್ ಪಟ್ಟಣ ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ವಿವಿಧ ಪಟ್ಟಣ ಪ್ರದೇಶಗಳಲ್ಲಿ ಸೆ.15ರಂದು ಮಂಗಳವಾರ ಮಧ್ಯರಾತ್ರಿಯಿಂದ ಸೆ.17ರ ಮಧ್ಯರಾತ್ರಿವರೆಗೆ ಬೆಸ್ಕಾಂನ ಆನ್‌ಲೈನ್ ಸೇವೆಗಳು ಲಭ್ಯ ವಿರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
ಸಾಂದರ್ಭಿಕ ಚಿತ್ರ. -
ಬೆಂಗಳೂರು, ಸೆ.15: ಸಮಗ್ರ ವಿದ್ಯುತ್ ಅಭಿವೃದ್ದಿ ಯೋಜನೆಯ (ಐಪಿಡಿಎಸ್) ಹಂತ-2 ರ ಅಡಿಯಲ್ಲಿ ಬೆಸ್ಕಾಂ ವ್ಯಾಪ್ತಿಯ ನಗರ ಪ್ರದೇಶದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಐಪಿಡಿಎಸ್ ಐಟಿ ಅಪ್ಲಿಕೇಶನ್ ಅನ್ನು ಬೆಸ್ಕಾಂ ವ್ಯಾಪ್ತಿಯ (BESCOM) 20 ಐಪಿಡಿಎಸ್ ಪಟ್ಟಣ ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ವಿವಿಧ ಪಟ್ಟಣ ಪ್ರದೇಶಗಳಲ್ಲಿ ಸೆ.15ರಂದು ಮಂಗಳವಾರ ಮಧ್ಯರಾತ್ರಿಯಿಂದ ಸೆ.17ರ ಮಧ್ಯರಾತ್ರಿವರೆಗೆ ಬೆಸ್ಕಾಂನ ಆನ್‌ಲೈನ್ ಸೇವೆಗಳು ಲಭ್ಯ ವಿರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
ಈ ಬಗ್ಗೆ ಬೆಸ್ಕಾಂ ಪ್ರಕಟಣೆ ಹೊರಡಿಸಿದ್ದು, ಪ್ರಸುತ ಚಾಲ್ತಿಯಲ್ಲಿರುವ ಸಾಫ್ಟ್‌ವೇರ್ ಅನ್ನು ಉನ್ನತೀಕರಿಸುವ ಸಲುವಾಗಿ 2 ದಿನಗಳ ಕಾಲ ಆನ್‌ಲೈನ್ ಸೇವೆಗಳಾದ ಹೊಸ ಸಂಪರ್ಕ, ಹೆಸರು ವರ್ಗಾವಣೆ, ಲೋಡ್ ಹೆಚ್ಚಳ, ಬಿಲ್ ಪಾವತಿ, ಸೇರಿದಂತೆ ಆನ್ ಲೈನ್ ಸೇವೆಗಳು ಸ್ಥಗಿತಗೊಳ್ಳಲಿದೆ ಎಂದು ತಿಳಿಸಿದೆ.
ಆನ್‌ಲೈನ್ ಸೇವೆ ಸ್ಥಗಿತಗೊಳ್ಳುವ ಪಟ್ಟಣಗಳು
ಬಾಗೇಪಲ್ಲಿ, ದೇವನಹಳ್ಳಿ, ಗುಡಿಬಂಡೆ, ಮಾಗಡಿ, ಮಾಲೂರು, ನೆಲಮಂಗಲ, ಶ್ರೀನಿವಾಸಪುರ, ವಿಜಯಪುರ, ಚನ್ನಗಿರಿ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಹೊಳಲ್ಕೆರೆ, ಹೊನ್ನಾಳಿ, ಹೊಸದುರ್ಗ, ಜಗಳೂರು, ಕೊರಟಗೆರೆ, ಮಧುಗಿರಿ, ಮೊಳಕಾಲ್ಮೂರು, ಪಾವಗಡ ಹಾಗೂ ತುರುವೇಕೆರೆ.
Fashion News 2026: ಯಶಸ್ವಿಯಾದ ಆಸ್ಟ್ರಲ್ ಬ್ಯೂಟಿ ಪೇಜೆಂಟ್
ಐಪಿಡಿಎಸ್ ಪಟ್ಟಣ ಪ್ರದೇಶಗಳಿಗೆ ಹೊಸ ಐಟಿ ಅಪ್ಲಿಕೇಶನ್ ಅನ್ನು ವಿಸ್ತರಿಸುವ ಸಲುವಾಗಿ ಮೆಲ್ಕಂಡ ಪಟ್ಟಣ ಪ್ರದೇಶಗಳ ಉಪ ವಿಭಾಗಗಳಲ್ಲಿ ಸದ್ಯ ಚಾಲ್ತಿಯಲ್ಲಿರುವ ಸಾಫ್ಟ್ ವೇರ್ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.