ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

VISL Bhadravathi‌: ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯ ಡಿಜಿಎಂ ಆತ್ಮಹತ್ಯೆ

ತಮಿಳುನಾಡಿನ ಸೇಲಂ ಮೂಲದ ಗೋವಿಂದರಾಜ್‌ (51) ನೇಣಿಗೆ ಶರಣಾದ ವ್ಯಕ್ತಿ. ಪತ್ನಿ, ಮಕ್ಕಳನ್ನು ಸೇಲಂಗೆ ಕಳುಹಿಸಿ ಭದ್ರಾವತಿ ನಗರದ ಸೇಂಟ್‌ ಚಾರ್ಲ್ಸ್ ಶಾಲೆಯ ಎದುರಿರುವ ಕ್ವಾರ್ಟರ್ಸ್‌ನ ಮನೆಯಲ್ಲಿ ಗೋವಿಂದರಾಜ್ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯ ಡಿಜಿಎಂ ಆತ್ಮಹತ್ಯೆ

-

Prabhakara R
Prabhakara R Oct 5, 2026 8:21 PM

ಶಿವಮೊಗ್ಗ: ವಿಐಎಸ್‌ಎಲ್ ಕಾರ್ಖಾನೆಯ (VISL Bhadravathi‌) ಡಿಜಿಎಂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾವತಿ ನಗರದ ವಿಐಎಸ್ಎಲ್ ಅಧಿಕಾರಿಗಳ ಕ್ವಾರ್ಟರ್ಸ್‌ನಲ್ಲಿ ನಡೆದಿದೆ. ವಿಐಎಸ್ಎಲ್‌ನ ಎಲೆಕ್ಟ್ರಿಕ್ ಡಿಪಾರ್ಟ್ಮೆಂಟ್‌ನಲ್ಲಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ಆಗಿದ್ದ ಗೋವಿಂದರಾಜ್ (51) ನೇಣಿಗೆ ಶರಣಾದ ವ್ಯಕ್ತಿ.

ತಮಿಳುನಾಡಿನ ಸೇಲಂ ಮೂಲದ ಗೋವಿಂದರಾಜ್‌ ಕಳೆದ 13 ವರ್ಷದಿಂದ ವಿಐಎಸ್‌ಎಲ್ ಕೆಲಸ ಮಾಡುತ್ತಿದ್ದರು. ಭಾನುವಾರವಷ್ಟೇ ಪತ್ನಿ, ಮಕ್ಕಳನ್ನು ಸೇಲಂಗೆ ಕಳುಹಿಸಿ ಭದ್ರಾವತಿ ನಗರದ ಸೇಂಟ್‌ ಚಾರ್ಲ್ಸ್ ಶಾಲೆಯ ಎದುರಿರುವ ಕ್ವಾರ್ಟರ್ಸ್‌ಗೆ ಬಂದಿದ್ದ ಗೋವಿಂದರಾಜ್ ರಾತ್ರಿ ಮನೆಯಲ್ಲಿ ಒಬ್ಬರೇ ಇದ್ದ ವೇಳೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಸೋಮವಾರ ಬೆಳಗ್ಗೆ ಗೋವಿಂದರಾಜ್ ಆಪ್ತ ಸಹಾಯಕ ಕರೆ ಮಾಡಿದ್ದಾರೆ. ಅನೇಕ ಬಾರಿ ಕರೆ ಮಾಡಿದರೂ ಕರೆಯನ್ನು ಸ್ವೀಕರಿಸದ ಕಾರಣ ಆತ ಕ್ವಾರ್ಟರ್ಸ್‌ಗೆ ತೆರಳಿ ಪರಿಶೀಲಿಸಿದ್ದಾರೆ. ಈ ವೇಳೆ ಡಿಜಿಎಂ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.

ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡಿಜಿಎಂ ಗೋವಿಂದರಾಜ್ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಸೇಲಂನಲ್ಲಿದ್ದ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಸೇಲಂ ಆಗಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.