2nd PUC District Wise Result 2026: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಫಸ್ಟ್, ಯಾದಗಿರಿ ಲಾಸ್ಟ್; ಜಿಲ್ಲಾವಾರು ಪಟ್ಟಿ ಇಲ್ಲಿದೆ
ಕರ್ನಾಟಕ ದ್ವಿತೀಯ ಪಿಯುಸಿ ಜಿಲ್ಲಾವಾರು ಫಲಿತಾಂಶ 2026: ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಶೇ.72.86, ವಾಣಿಜ್ಯ ವಿಭಾಗದಲ್ಲಿ 88.04 ಹಾಗೂ ವಿಜ್ಞಾನ 91.69 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಜಿಲ್ಲಾವಾರು ಫಲಿತಾಂಶದಲ್ಲಿ ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ ಎಂಬ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಶೇ. 86.48 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಶೇ. 13.03 ಫಲಿತಾಂಶ ಹೆಚ್ಚಳವಾಗಿದೆ. ಉಡುಪಿ ಜಿಲ್ಲೆ ಶೇ.96.39 ಫಲಿತಾಂಶದೊಂದಿಗೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಶೇ. 96.35 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಪಡೆದಿದೆ. ಇನ್ನು ಶೇ. 71.21 ರಿಸಲ್ಟ್‌ನೊಂದಿಗೆ ಯಾದಗಿರಿ ಕೊನೆಯ ಸ್ಥಾನ ಪಡೆದಿದೆ.
ಫಲಿತಾಂಶದಲ್ಲಿ ಬಾಲಕಿಯರೇ ಮೈಲುಗೈ
ಈ ಬಾರಿ ಒಟ್ಟು 6,48,853 ಮಂದಿ ಪರೀಕ್ಷೆಗೆ ನೋಂದಾವಣೆ ಮಾಡಿಕೊಂಡಿದ್ದರು. 16,653 ಮಂದಿ ಪರೀಕ್ಷೆಗೆ ಹಾಜರಾಗಿಲ್ಲ. ಎಂದಿನಂತೆ ಹುಡುಗಿಯರೇ ಮೇಲುಗೈ ಸಾಧಿಸಿದ್ದು, ಶೇ. 88.70 ಬಾಲಕಿಯರು ಉತ್ತೀರ್ಣರಾಗಿದ್ದು, ಶೇ 83.65 ಬಾಲಕರು ಉತ್ತೀರ್ಣರಾಗಿದ್ದಾರೆ. ನಗರ ಭಾಗದಲ್ಲಿ ಶೇ. 85 ವಿದ್ಯಾರ್ಥಿಗಳು ಉತ್ತೀರ್ಣರಾದರೆ, ಗ್ರಾಮೀಣ ಪ್ರದೇಶದಲ್ಲಿ ಶೇ 87.62 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಫಲಿತಾಂಶವನ್ನು karresults.nic.in ಅಥವಾ Karnataka one ಮೊಬೈಲ್ ಆ್ಯಪ್ ಮೂಲಕ ಪಡೆಯಬಹುದು.
ಜಿಲ್ಲಾವಾರು ಫಲಿತಾಂಶ ಪಟ್ಟಿ
- ಉಡುಪಿ- ಶೇ.96.39
- ಉತ್ತರ ಕನ್ನಡ-ಶೇ.91.78
- ಕಲಬುರಗಿ- ಶೇ.76.97
- ಕೊಡಗು- ಶೇ.92.34
- ಕೊಪ್ಪಳ-ಶೇ. 86.80
- ಕೋಲಾರ-ಶೇ. 87.38
- ಗದಗ-ಶೇ. 76.65
- ಚಾಮರಾಜನಗರ-ಶೇ. 84.68
- ಚಿಕ್ಕಬಳ್ಳಾಪುರ-ಶೇ. 90.24
- ಚಿಕ್ಕಮಗಳೂರು-ಶೇ. 90.80
- ಚಿಕ್ಕೋಡಿ-ಶೇ. 83.10
- ಚಿತ್ರದುರ್ಗ-ಶೇ. 79.12
- ತುಮಕೂರು-ಶೇ. 86.89
- ದಕ್ಷಿಣ ಕನ್ನಡ-ಶೇ. 96.35
- ದಾವಣಗೆರೆ-ಶೇ. 81.99
- ಧಾರವಾಡ-ಶೇ. 83.31
- ಬಳ್ಳಾರಿ-ಶೇ. 78.69
- ಬಾಗಲಕೋಟೆ-ಶೇ. 84.12
- ಬೀದರ್-ಶೇ. 84.61
- ಬೆಂಗಳೂರು ಉತ್ತರ-ಶೇ. 90.05
- ಬೆಂಗಳೂರು ಗ್ರಾಮಾಂತರ-ಶೇ. 91.00
- ಬೆಂಗಳೂರು ದಕ್ಷಿಣ-ಶೇ. 90.55
- ಬೆಳಗಾವಿ-ಶೇ. 80.32
- ಮಂಡ್ಯ-ಶೇ. 88.85
- ಮೈಸೂರು-ಶೇ. 84.80
- ಯಾದಗಿರಿ-ಶೇ. 71.21
- ರಾಮನಗರ-ಶೇ. 87.90
- ರಾಯಚೂರು-ಶೇ. 74.09
- ವಿಜಯಪುರ-ಶೇ. 92.00
- ಶಿವಮೊಗ್ಗ-ಶೇ. 87.62
- ಹಾವೇರಿ-ಶೇ. 84.11
- ಹಾಸನ-ಶೇ. 89.71
ಒಟ್ಟು-86.48