Chikkanayakanahalli (Tumkur) News: ದೇವಾಲಯದ ಸನ್ನಿಧಿಯಲ್ಲೇ ವಾಮಾಚಾರ, ಭ್ರಷ್ಟಾಚಾರದ ಜಾಲ !
ಶಕ್ತಿ ಸ್ವರೂಪಿಣಿ ಎಂದು ನಂಬಲಾಗಿರುವ ಅಮ್ಮನವರ ಸನ್ನಿಧಿಗೆ ಬರುವ ಭಕ್ತರು ದೇವಿಗೆ ಸೀರೆ, ಮಡಿಲಕ್ಕಿ, ಚಿನ್ನ, ಬೆಳ್ಳಿ ಆಭರಣ ಸೇರಿದಂತೆ ಹಣವನ್ನು ಕಾಣಿಕೆಯಾಗಿ ಸಮರ್ಪಣೆ ಮಾಡುತ್ತಾರೆ. ಆದರೆ ಇಲ್ಲಿನ ಅರ್ಚಕರು ಇದನ್ನು ದಂಧೆ ಮಾಡಿ ಕೊಂಡು, ಭಕ್ತರು ನೀಡುವ ಕಾಣಿಕೆ ಹಣವನ್ನು ದೇವರ ಹುಂಡಿಗೆ ಹಾಕಿಸದೆ ತಮ್ಮ ತಟ್ಟೆಗೆ ಹಾಕಿಸಿಕೊಂಡು ಸರ್ಕಾರಕ್ಕೆ ವಂಚಿಸುತ್ತಿದ್ದಾರೆ.

ಅರ್ಚಕ ಕಾಂತರಾಜ್

ಚಿಕ್ಕನಾಯಕನಹಳ್ಳಿ : ಅರಳೀಕೆರೆ ಗ್ರಾಮದ ಪ್ರಖ್ಯಾತ ಶ್ರೀ ಉಡುಸಲಮ್ಮ ದೇಗುಲವು ಭ್ರಷ್ಟಾಚಾರ, ವಂಚನೆ, ಹಾಗು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದೆ. ಏಳು ಹಳ್ಳಿಗಳ ಗ್ರಾಮದೇವತೆಯಾದ ದೇವಿಗೆ ಸಾವಿರಾರು ಭಕ್ತರಿದ್ದು ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಹರಿದು ಬರುತ್ತಿದೆ. ಆದರೆ ಈ ಆದಾಯ ಸರಕಾರದ ಬೊಕ್ಕಸಕ್ಕೆ ಸೇರದೆ ಅರ್ಚಕರ ಜೇಬು ಸೇರುತ್ತಿದ್ದು, ಸರಕಾರಕ್ಕೆ ವ್ಯವಸ್ಥಿತವಾಗಿ ವಂಚಿಸಲಾಗುತ್ತಿದೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಅರಳೀಕೆರೆ ಗ್ರಾಮದಲ್ಲಿರುವ ಉಡುಸಲಮ್ಮ ದೇಗುಲಕ್ಕೆ ತಾಲ್ಲೂಕು ಸೇರಿದಂತೆ ಹೊರ ಜಿಲ್ಲೆಯಲ್ಲೂ ಸಾವಿರಾರು ಭಕ್ತರಿದ್ದಾರೆ. ಪ್ರತಿ ಮಂಗಳವಾರ, ಶುಕ್ರವಾರ ಮತ್ತು ಅಮಾವಾಸ್ಯೆ ದಿನಗಳಲ್ಲಿ ಹೆಚ್ಚಿನ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಶಕ್ತಿ ಸ್ವರೂಪಿಣಿ ಎಂದು ನಂಬಲಾಗಿರುವ ಅಮ್ಮನವರ ಸನ್ನಿಧಿಗೆ ಬರುವ ಭಕ್ತರು ದೇವಿಗೆ ಸೀರೆ, ಮಡಿಲಕ್ಕಿ, ಚಿನ್ನ, ಬೆಳ್ಳಿ ಆಭರಣ ಸೇರಿದಂತೆ ಹಣವನ್ನು ಕಾಣಿಕೆಯಾಗಿ ಸಮರ್ಪಣೆ ಮಾಡುತ್ತಾರೆ. ಆದರೆ ಇಲ್ಲಿನ ಅರ್ಚಕರು ಇದನ್ನು ದಂಧೆ ಮಾಡಿ ಕೊಂಡು, ಭಕ್ತರು ನೀಡುವ ಕಾಣಿಕೆ ಹಣವನ್ನು ದೇವರ ಹುಂಡಿಗೆ ಹಾಕಿಸದೆ ತಮ್ಮ ತಟ್ಟೆಗೆ ಹಾಕಿಸಿ ಕೊಂಡು ಸರ್ಕಾರಕ್ಕೆ ವಂಚಿಸುತ್ತಿದ್ದಾರೆ.
ಇದನ್ನೂ ಓದಿ: Tumkur (Chikkanayakanahalli) News: ನೂರು ಕೋಟಿ ವೆಚ್ಚದಲ್ಲಿ ಗುಣಮಟ್ಟದ ಸಿಸಿ ರಸ್ತೆ ನಿರ್ಮಾಣ: ಶಾಸಕ ಸಿ.ಬಿ.ಸುರೇಶ್ ಬಾಬು
ಅನಿಷ್ಠ ಪೂಜೆ ಮಾಡಿ ಹಣ ವಸೂಲಿ
ಅತ್ಯಂತ ಆತಂಕಕಾರಿ ವಿಷಯವೆಂದರೆ ಉಡುಸಲಮ್ಮ ದೇಗುಲದ ಆವರಣದಲ್ಲಿ ಮಾಟ ಮಂತ್ರ ಮತ್ತು ವಾಮಾಚಾರದಂತಹ ಅನಿಷ್ಠ ಪೂಜೆಗಳನ್ನು ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅರ್ಚಕರು ಇಂತಹ ಪೂಜೆಗಳಿಗೆ ಭಕ್ತರಿಂದ ಹೆಚ್ಚಿನ ಹಣ ವಸೂಲಿ ಮಾಡಿ, ಅವರಿಗೆ ಆರ್ಥಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಇದನ್ನು ಪ್ರಶ್ನಿಸುವ ಸ್ಥಳಿಯರ ಮೇಲೆ ಸಂಘಟನೆಗಳ ಹೆಸರನ್ನು ಹೇಳಿ ಬೆದರಿಸಿ, ಸುಳ್ಳು ಆರೋಪಗಳನ್ನು ಹೊರೆಸಿ ಸ್ಥಳಿಯ ಪೊಲೀಸ್ ಠಾಣೆಗೆ ದೂರು ದಾಖಲಿಸಿ ವಂಚನೆ ಮಾಡುತ್ತಿದ್ದಾರೆ. ಅರ್ಚಕರು ದೇವಾಲಯದಲ್ಲಿ ತಡೆ ಒಡೆಯುವುದು, ವಾಮಾಚಾರದಂತಹ ಕೃತ್ಯ ನಡೆಸುತ್ತಿರುವುದು ಊರಿನ ಜನರಲ್ಲಿ ತೀವ್ರ ಭೀತಿ ಅಶಾಂತಿ ಮೂಡಿಸಿದೆ. ಅಲ್ಲದೇ ವಾಮಾಚಾರದ ವಸ್ತುಗಳನ್ನು ಕೆರೆಗಳಿಗೆ ಹಾಕಿ ಸುತ್ತಮುತ್ತ ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿದೆ.
ಈ ಎಲ್ಲಾ ಅಕ್ರಮ ಚಟುವಟಿಕೆಗಳ ಕುರಿತು ತಾಲ್ಲೂಕು ಆಡಳಿತಕ್ಕೆ ದೂರು ಸಲ್ಲಿಸಲಾಗಿದ್ದು ತಹಸೀ ಲ್ದಾರ್ ಅವರು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ದೇಗುಲದಲ್ಲಿ ನಡೆಯು ತ್ತಿರುವ ಈ ಅವ್ಯವಹಾರಗಳಿಗೆ ತಕ್ಷಣವೇ ಕಡಿವಾಣ ಹಾಕಿ ದೇವಸ್ಥಾನದ ಆದಾಯವನ್ನು ಸರಕಾ ರದ ಬೊಕ್ಕಸಕ್ಕೆ ಬರುವಂತೆ ಮಾಡಿ ದೇಗುಲದ ಅಭಿವೃದ್ದಿಗೆ ಮುಂದಾಗಬೇಕೆಂದು ದೇಗುಲದ ಭಕ್ತರು ಮತ್ತು ಏಳು ಹಳ್ಳಿಗಳ ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.