ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಷ್ಟ್ರಪತಿ ಬಂದಾಗ ಶಿಷ್ಟಾಚಾರ ಉಲ್ಲಂಘನೆ; ಗೊಂದಲಕ್ಕೆ ತೆರೆ ಎಳೆದ ಸಿದ್ದಗಂಗಾ ಶ್ರೀ!

ತುಮಕೂರಿನಲ್ಲಿ ನಡೆದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮವರ್ಧಂತಿ ಮಹೋತ್ಸವದ ವೇದಿಕೆಯಲ್ಲಿ ಸಿದ್ದಲಿಂಗ ಶ್ರೀಗಳಿಗೆ ಕೊನೆಯಲ್ಲಿ ಆಸನ ವ್ಯವಸ್ಥೆ ಮಾಡಿದ್ದ ಬಗ್ಗೆ ಭಕ್ತರಲ್ಲಿ ಅಸಮಾಧಾನ ಮೂಡಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಉಂಟಾಗಿದ್ದ ಶಿಷ್ಟಾಚಾರ ಗೊಂದಲದ ಬಗ್ಗೆ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.

Prabhakara R
Prabhakara R Apr 3, 2026 3:30 PM

ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ಉಂಟಾಗಿದ್ದ ಶಿಷ್ಟಾಚಾರ ಉಲ್ಲಂಘನೆ ಗೊಂದಲಕ್ಕೆ ಸಿದ್ದಗಂಗಾ ಶ್ರೀಗಳು (Siddalinga Swamiji) ತೆರೆ ಎಳೆದಿದ್ದಾರೆ. ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ. ದೆಹಲಿ ಮಟ್ಟದಲ್ಲಿ ಸಚಿವಿ ಜೋಶಿ, ವಿ. ಸೋಮಣ್ಣನವರು ಪಾಪ ಬಹಳ ಪ್ರಯತ್ನ ಪಟ್ಟರು. ರಾಷ್ಟ್ರಪತಿಗಳ ಅಧಿಕಾರಿಗಳ ಮಟ್ಟದಲ್ಲಿ ಸ್ಪಂದನೆ ಇಲ್ಲ ಅನ್ನೊದನ್ನು ಬಿಟ್ಟರೆ, ಇಲ್ಲಿ ಯಾರನ್ನೂ ದೂಷಣೆ ಮಾಡುವ ಅಗತ್ಯ ಇಲ್ಲ ಎಂದು ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.