ಜಾಗತಿಕ ವಿಜ್ಞಾನಿಗಳ ಪಟ್ಟಿ: ತುಮಕೂರು ವಿವಿಯ ಇಬ್ಬರು ಪ್ರಾಧ್ಯಾಪಕರು, ಇಬ್ಬರು ಸಂಶೋಧನಾರ್ಥಿಗಳಿಗೆ ಸ್ಥಾನ
Tumkur University: ಅಮೆರಿಕದ ಪ್ರತಿಷ್ಠಿತ ಸ್ಪ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ ಮತ್ತು ಎಲ್ಸೆವಿಯರ್ ಸಂಸ್ಥೆ ಜಂಟಿಯಾಗಿ ಪ್ರಕಟಿಸಿರುವ 2026ನೇ ಸಾಲಿನ ವಿಶ್ವದ ಟಾಪ್ 2% ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಎಚ್. ನಾಗಭೂಷಣ, ಸ್ನಾತಕೋತ್ತರ ಸಾವಯವ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಡಿ. ಸುರೇಶ್ ಹಾಗೂ ಭೌತಶಾಸ್ತ್ರ ವಿಭಾಗದ ಸಂಶೋಧನಾರ್ಥಿ ಡಾ. ರಾಧಾಕೃಷ್ಣ ಬಿ.ಆರ್., ಜೈವಿಕತಂತ್ರಜ್ಞಾನ ವಿಭಾಗದ ಸಂಶೋಧನಾರ್ಥಿ ಡಾ.ಕೆ. ಲಿಂಗರಾಜು ಆಯ್ಕೆಯಾಗಿದ್ದಾರೆ.
-
ತುಮಕೂರು, ಅ.09: ಜಾಗತಿಕ ಶೈಕ್ಷಣಿಕ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ತುಮಕೂರು ವಿಶ್ವವಿದ್ಯಾಲಯ (Tumkur University) ಮತ್ತೊಂದು ಮಹತ್ವದ ಸಾಧನೆ ಮಾಡಿದ್ದು, ಅಮೆರಿಕದ ಪ್ರತಿಷ್ಠಿತ ಸ್ಪ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ ಮತ್ತು ಎಲ್ಸೆವಿಯರ್ ಸಂಸ್ಥೆ ಜಂಟಿಯಾಗಿ ಪ್ರಕಟಿಸಿರುವ 2026ನೇ ಸಾಲಿನ ವಿಶ್ವದ ಟಾಪ್ 2% ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಎಚ್. ನಾಗಭೂಷಣ, ಸ್ನಾತಕೋತ್ತರ ಸಾವಯವ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಡಿ. ಸುರೇಶ್ ಹಾಗೂ ಭೌತಶಾಸ್ತ್ರ ವಿಭಾಗದ ಸಂಶೋಧನಾರ್ಥಿ ಡಾ. ರಾಧಾಕೃಷ್ಣ ಬಿ.ಆರ್., ಜೈವಿಕತಂತ್ರಜ್ಞಾನ ವಿಭಾಗದ ಸಂಶೋಧನಾರ್ಥಿ ಡಾ.ಕೆ. ಲಿಂಗರಾಜು ಆಯ್ಕೆಯಾಗಿದ್ದಾರೆ.
ವಿಜ್ಞಾನಿಗಳ ಸಂಶೋಧನಾ ಪ್ರಕಟಣೆಗಳು, ಎಚ್-ಇಂಡೆಕ್ಸ್, ಸೈಟೇಶನ್‌ಗಳು ಸೇರಿದಂತೆ ವಿವಿಧ ಬಿಬ್ಲಿಯೊಮೆಟ್ರಿಕ್ ಸೂಚ್ಯಂಕಗಳನ್ನು ಪರಿಗಣಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಸಂಶೋಧನಾ ಪ್ರಕಟಣೆಗಳ ಪ್ರಮಾಣ ಮಾತ್ರವಲ್ಲದೆ, ವೈಜ್ಞಾನಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಹಾಗೂ ಇತರ ಸಂಶೋಧಕರು ಅವರ ಅಧ್ಯಯನಗಳನ್ನು ಉಲ್ಲೇಖಿಸಿರುವ ಪ್ರಮಾಣವೂ ಮೌಲ್ಯಮಾಪನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸ್ಕೋಪಸ್ ದತ್ತಾಂಶವನ್ನು ಆಧರಿಸಿ ವಿಜ್ಞಾನಿಗಳನ್ನು 22 ಪ್ರಮುಖ ವೈಜ್ಞಾನಿಕ ಕ್ಷೇತ್ರಗಳು ಹಾಗೂ 174 ಉಪಕ್ಷೇತ್ರಗಳಲ್ಲಿ ವರ್ಗೀಕರಿಸಿ ಅವರ ಸಂಶೋಧನಾ ಪ್ರಭಾವವನ್ನು ವಿಶ್ಲೇಷಿಸಲಾಗುತ್ತದೆ. ಹೀಗಾಗಿ, ಈ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ವಿಜ್ಞಾನಿಗಳ ನಿರಂತರ ಸಂಶೋಧನಾ ಚಟುವಟಿಕೆಗಳಿಗೆ ದೊರೆತಿರುವ ಜಾಗತಿಕ ಮನ್ನಣೆಯಾಗಿ ಪರಿಗಣಿಸಲಾಗಿದೆ.
ಎನ್‌ಡಿಆರ್‌ಎಫ್ ಯೋಧರ ಮಾನಸಿಕ ಆರೋಗ್ಯಕ್ಕಾಗಿ 'ಪ್ರಾಜೆಕ್ಟ್ ನಿರ್ಮಲ್' ಜಾರಿ; ಏನಿದು ಯೋಜನೆ?
ಈ ಸಾಧನೆಗೆ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ, ಕುಲಪತಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.