ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ರನ್ನೇ ಯಾಮಾರಿಸಿದ ಬುರ್ಖಾಧಾರಿ ಮಹಿಳೆ; ಹಿಂದು ಮಹಿಳೆ ಪರ ನೆರವು ಕೋರಿದ್ದು ಮತಾಂತರಗೊಂಡ ಮಗಳೇ!

Udupi News: ಉಡುಪಿಯಲ್ಲಿ ಇಬ್ಬರು ಬುರ್ಖಾಧಾರಿ ಮಹಿಳೆಯರು ಹಿಂದೂ ಮಹಿಳೆಗಾಗಿ ನೆರವು ಕೋರಲು ಬಂದಾಗ ಪ್ರತಿಕ್ರಿಯಿಸಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರು, ಇದರಿಂದ ಉಡುಪಿಯ ಬಿಜೆಪಿಯವರು ಕಲಿಯಬೇಕು ಎಂದಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಬಿಜೆಪಿ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ರನ್ನೇ ಯಾಮಾರಿಸಿದ ಬುರ್ಖಾಧಾರಿ ಮಹಿಳೆ!

ಉಡುಪಿಯಲ್ಲಿ ಹಿಂದು ಮಹಿಳೆ ಪರ ಇತ್ತೀಚೆಗೆ ನೆರವು ಕೋರಿದ್ದ ಮುಸ್ಲಿಂ ಮಹಿಳೆಯರು. -

Prabhakara R
Prabhakara R May 18, 2026 5:25 PM

ಉಡುಪಿ: ಮನೆ ಕಟ್ಟಲು ಹಿಂದು ವೃದ್ಧ ಮಹಿಳೆಯೊಬ್ಬರಿಗೆ ನೆರವು ನೀಡುವಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರಿಗೆ ಮುಸ್ಲಿಂ ಮಹಿಳೆಯರು ಮನವಿ ಮಾಡಿದ್ದ ಪ್ರಸಂಗ ಉಡುಪಿಯಲ್ಲಿ (Udupi News) ಇತ್ತೀಚೆಗೆ ನಡೆದಿತ್ತು. ಆದರೆ, ಉಸ್ತುವಾರಿ ಸಚಿವರನ್ನು ಭೇಟಿಯಾಗಲು ಬಂದ ಮಹಿಳೆ ಗಿರಿಜಾ ಶೆಟ್ಟಿಗಾರ್ ಅವರನ್ನು, ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿರುವ ಪುತ್ರಿಯೇ ಕರೆತಂದಿದ್ದು ಎಂಬುದಾಗಿ ತಿಳಿದುಬಂದಿದೆ.

ಸಚಿವರ ಮುಂದೆ ತಾನು ಹಿಂದೂ ಮಹಿಳೆಯ ನೆರೆಮನೆಯವರು ಎಂದು ಸುಳ್ಳು ಹೇಳಿ ಉಸ್ತುವಾರಿ ಸಚಿವರನ್ನೇ ಬುರ್ಖಾಧಾರಿ ಮಹಿಳೆ ಯಾಮಾರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಜಿಲ್ಲಾ ಬಿಜೆಪಿ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು ಅವರು, ಸ್ವಂತ ತಾಯಿಯನ್ನೇ ನೆರೆಮನೆಯ ಮಹಿಳೆ ಎಂದು ಸಮಾಜಕ್ಕೆ ಸುಳ್ಳು ಹೇಳಿದ ಬುರ್ಖಾಧಾರಿ ಮಹಿಳೆಯರಿಂದ ಬಿಜೆಪಿಗರು ಸೌಹಾರ್ದತೆ ಕಲಿಯುವ ಅಗತ್ಯವಿಲ್ಲ ಕಿಡಿಕಾರಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಹಿಂದೂ ಮಹಿಳೆಯೊಬ್ಬರನ್ನು ಕರೆದುಕೊಂಡು ಬಂದ ಇಬ್ಬರು ಬುರ್ಖಾಧಾರಿ ಮಹಿಳೆಯರು, ತಾವು ಹಿಂದೂ ಮಹಿಳೆಯ ನೆರೆಮನೆಯವರು, ಬಡ ಮಹಿಳೆಗೆ ಮನೆ ನಿವೇಶನ ನೀಡುವಂತೆ ಮನವಿ ಮಾಡಿದ್ದ. ಆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಘಟನೆಯ ಸತ್ಯಾಸತ್ಯತೆ ತಿಳಿಯದೆ ಉಡುಪಿ ಬಿಜೆಪಿಗರಿಗೆ ಸೌಹಾರ್ದತೆಯ ಬಗ್ಗೆ ಬಿಟ್ಟಿ ಉಪದೇಶ ನೀಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಈ ಘಟನೆಯಲ್ಲಿ ಉಸ್ತುವಾರಿ ಸಚಿವರನ್ನು ಭೇಟಿಯಾಗಲು ಬಂದ ಗಿರಿಜಾ ಶೆಟ್ಟಿಗಾರ್ ಅವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿರುವ ಪುತ್ರಿಯೇ ಕರೆತಂದಿದ್ದರು. ಸಚಿವರ ಮುಂದೆ ಮಾತ್ರ ತಾನು ಹಿಂದೂ ಮಹಿಳೆಯ ನೆರೆಮನೆಯವರು ಎಂದು ಸುಳ್ಳು ಹೇಳಿ ಉಸ್ತುವಾರಿ ಸಚಿವರನ್ನೇ ಯಾಮಾರಿಸಿದ್ದಾರೆ. ಆದರೆ ಅವಸರ ಬುದ್ಧಿಯ ಲಕ್ಷ್ಮಿ ಹೆಬ್ಬಾಳ್ಳರ್ ಅವರು ಹಿಂದೆ ಮುಂದೆ ಯೋಚಿಸದೇ ಮಾಧ್ಯಮದ ಮುಂದೆ ಉಡುಪಿ ಬಿಜೆಪಿಗರಿಗೆ ಸೌಹಾರ್ದತೆಯ ಭಾಷಣ ಮಾಡಿ ಅಪಹಾಸ್ಯಕ್ಕೆ ಗುರಿಯಾಗಿದ್ದು, ಉಡುಪಿಯ ಜನತೆ ಸೌಹಾರ್ದತೆಯ ಬಗ್ಗೆ ಬೆಳಗಾವಿಯಿಂದ ಬಂದ ಉಸ್ತುವಾರಿ ಸಚಿವರಿಂದ ಕಲಿಯುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಈವರೆಗೆ ಹಿಜಾಬ್, ಬುರ್ಖಾಧರಿಸಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ವ್ಯವಸ್ಥೆಗೆ ಧಕ್ಕೆ ತರಲು ಮುಂದಾಗಿದ್ದ ಮಹಿಳೆಯರು ಇದೀಗ ಜಿಲ್ಲಾ ಉಸ್ತುವಾರಿ ಸಚಿವರನ್ನೇ ಯಾಮಾರಿಸಿದ್ದಾರೆ. ಸ್ವಂತ ತಾಯಿಯನ್ನೇ ಪ್ರಚಾರಕ್ಕಾಗಿ ನೆರೆಮನೆಯ ಮಹಿಳೆ ಎಂದು ಹೇಳುವ ವ್ಯಕ್ತಿಗಳ ಮನಸ್ಥಿತಿಯನ್ನು ಸಮಾಜ ಗಂಭೀರವಾಗಿ ಪರಿಗಣಿಸಬೇಕಿದೆ. ಉಡುಪಿ ಜಿಲ್ಲೆಯ 5 ಬಿಜೆಪಿ ಶಾಸಕರು ಹಾಗೂ ಸಂಸದರು ತಮ್ಮ ಬಳಿಗೆ ಸಮಸ್ಯೆಗಳಿಗಾಗಿ ಬರುವ ನಾಗರಿಕರೊಂದಿಗೆ ಜಾತಿ ಧರ್ಮದ ಭೇದ ಭಾವ ತೋರಿಲ್ಲ. ಕೇವಲ ರಾಷ್ಟ್ರೀಯತೆಯ ವಿರೋಧಿಗಳು, ಮತೀಯ ಶಕ್ತಿಗಳ ಬಗ್ಗೆ ಎಂದಿಗೂ ರಾಜಿಯಾಗದೇ ಕೆಲಸ ಮಾಡುವ ಬಿಜೆಪಿ ಜನಪ್ರತಿನಿಧಿಗಳ ಬಗ್ಗೆ ಉಡುಪಿಯ ಜನತೆಗೆ ಹೆಮ್ಮೆ ಇದೆ ಎಂದು ನೀತಾ ಪ್ರಭು ಹೇಳಿದ್ದಾರೆ.

ಉಡುಪಿ ಜಿಲ್ಲೆಗೆ ಸದಾ ಅತಿಥಿಯಂತೆ ಆಗಮಿಸಿ, 3 ವರ್ಷಗಳಿಂದ ಜಿಲ್ಲೆಯ ಅಭಿವೃದ್ಧಿಗೆ ಎಳ್ಳು ನೀರು ಬಿಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವರು ಇಂತಹ ಅವಿವೇಕದ ಮಾತುಗಳನ್ನು ಹೇಳಿರುವುದು ಅಕ್ಷಮ್ಯ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದ ನಾಯಕರು, ಜನಪ್ರತಿನಿಧಿಗಳ ವಿರುದ್ಧ ಬೇಜವಾಬ್ದಾರಿ ಹೇಳಿಕೆ ಮುಂದುವರಿಸಿದರೆ ಮಹಿಳಾ ಮೋರ್ಚಾದ ವತಿಯಿಂದ ಲಕ್ಷ್ಮೀ ಹೆಬ್ಬಾಳ್ಳರ್‌ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಹೇಳಿದ್ದಾರೆ