ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Online engagement: ವರನಿಗೆ ಸಿಗಲಿಲ್ಲ ರಜೆ; ಉಡುಪಿಯಲ್ಲಿ ಆನ್‌ಲೈನ್‌ನಲ್ಲೇ ನಡೆಯಿತು ನಿಶ್ಚಿತಾರ್ಥ!

ಉಡುಪಿಯ ಸರಸ್ವತಿ ಸಭಾಭವನದಲ್ಲಿ ನಿಶ್ಚಿತಾರ್ಥ ನಡೆದಿದೆ. ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದ ಯುವಕ ಹಾಗೂ ಉಡುಪಿಯ ಯುವತಿ ಎಂಗೇಜ್‌ಮೆಂಟ್‌ ಬ್ರಾಹ್ಮಣ ಸಂಪ್ರದಾಯದಂತೆ ಆನ್‌ಲೈನ್‌ ಮೂಲಕ ನೆರವೇರಿದೆ. ವರ ಕೆನಡಾದಲ್ಲೇ ಇದ್ದು, ವಿಡಿಯೋ ಕಾಲ್‌ ಮೂಲಕ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದಾರೆ.

ವರನಿಗೆ ಸಿಗಲಿಲ್ಲ ರಜೆ; ಉಡುಪಿಯಲ್ಲಿ ಆನ್‌ಲೈನ್‌ನಲ್ಲೇ ನಿಶ್ಚಿತಾರ್ಥ!

ಉಡುಪಿಯಲ್ಲಿ ನಡೆದ ನಿಶ್ಚಿತಾರ್ಥಕ್ಕೆ ಆನ್‌ಲೈನ್‌ನಲ್ಲಿ ವರ ಭಾಗಿ. -

Prabhakara R
Prabhakara R Dec 16, 2025 5:20 PM

ಉಡುಪಿ, ಡಿ.16 : ಇಂಡಿಗೋ ವಿಮಾನ ರದ್ದಾಗಿದ್ದರಿಂದ ಇತ್ತೀಚೆಗೆ ಹುಬ್ಬಳ್ಳಿಯ ಯುವತಿ ಹಾಗೂ ಒಡಿಶಾ ಯುವಕನ ಆರತಕ್ಷತೆಯು ಆನ್‌ಲೈನ್‌ನಲ್ಲೇ ನಡೆದಿತ್ತು. ಇದೀಗ ಅಂತಹುದೇ ಮತ್ತೊಂದು ಸಮಾರಂಭಕ್ಕೆ ರಾಜ್ಯ ಸಾಕ್ಷಿಯಾಗಿದೆ. ಕಂಪನಿಯಲ್ಲಿ ವರನಿಗೆ ರಜೆ ಸಿಗದ ಹಿನ್ನೆಲೆಯಲ್ಲಿ ವಧು-ವರ ವಿಡಿಯೋ ಕಾಲ್ ಮೂಲಕ ಆನ್‌ಲೈನ್‌ನಲ್ಲೇ ನಿಶ್ಚಿತಾರ್ಥ (Online engagement) ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದ ನಿವಾಸಿ ಸುಹಾಸ್. ಎಸ್ ಹಾಗೂ ಉಡುಪಿಯ ನಿವಾಸಿ ಮೇಘ ಅವರು ಬ್ರಾಹ್ಮಣ ಸಂಪ್ರದಾಯದಂತೆ ಆನ್‌ಲೈನ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯ ಸುಹಾಸ್ ಅವರು ಕೆನಡಾದಲ್ಲಿ ಉದ್ಯೋಗದಲ್ಲಿದ್ದು, ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಅವರಿಗೆ ಭಾರತಕ್ಕೆ ಬರಲು ರಜೆ ಸಿಕ್ಕಿರಲಿಲ್ಲ. ಮುಂದಿನ ತಿಂಗಳು ಜನವರಿ 7 ಮತ್ತು 8ರಂದು ಮದುವೆ ನಿಗದಿಯಾದ ಹಿನ್ನೆಲೆಯಲ್ಲಿ ಕುಟುಂಬದವರ ಸಹಮತದೊಂದಿಗೆ ಆನ್‌ಲೈನ್ ನಿಶ್ಚಿತಾರ್ಥ ಆಯೋಜಿಸಲಾಗಿದೆ.

_engagement online in udupi (2)

ಉಡುಪಿಯ ಸರಸ್ವತಿ ಸಭಾಭವನದಲ್ಲಿ ನಿಶ್ಚಿತಾರ್ಥ ನಡೆದಿದೆ. ವಧು ಮೇಘ ಮತ್ತು ಕುಟುಂಬದ ಸದಸ್ಯರು, ಸಂಬಂಧಿಕರು ಸಮಾರಂಭದಲ್ಲಿ ಭಾಗವಹಿಸಿದ್ದರು. ಮತ್ತೊಂದೆಡೆ, ವರ ಸುಹಾಸ್ ಅವರು ಕೆನಡಾದಲ್ಲೇ ಇದ್ದು, ವಿಡಿಯೋ ಕಾಲ್‌ ಮೂಲಕ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದರು.

_engagement online in udupi (1)

ಉಡುಪಿಯಲ್ಲಿ ಬೆಳಗ್ಗೆ ನಿಶ್ಚಿತಾರ್ಥ ನಡೆಯುತ್ತಿದ್ದರೆ, ಅದೇ ಸಮಯದಲ್ಲಿ ಕೆನಡಾದಲ್ಲಿ ಮಧ್ಯರಾತ್ರಿಯಾಗಿತ್ತು. ಆದರೂ ಸುಹಾಸ್ ಅವರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಧು-ವರರು ತಾವಿರುವ ಸ್ಥಳಗಳಲ್ಲೇ ನಿಂತು, ಕ್ಯಾಮೆರಾ ಎದುರು ಉಂಗುರಗಳನ್ನು ತೋರಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ದೃಶ್ಯವನ್ನು ಕಂಡು ಕುಟುಂಬದ ಸದಸ್ಯರು ಭಾವುಕರಾಗಿದ್ದಾರೆ.

_engagement online in udupi (3)

ಬಿರುಗಾಳಿಗೆ ಸಿಲುಕಿ ಕುಸಿದು ಬಿದ್ದ ಸ್ಟ್ಯಾಚು ಆಫ್ ಲಿಬರ್ಟಿ: ವಿಡಿಯೋ ವೈರಲ್

ಇನ್ನು ಹಿರಿಯರು ಕ್ಯಾಮೆರಾದ ಮೂಲಕವೇ ವಧು-ವರರಿಗೆ ಆರತಿ ಬೆಳಗಿ, ಮಂತ್ರಾಕ್ಷತೆ ಹಾಕಿ ಶುಭಾಶಯ ಕೋರಿದರು. ಪುರೋಹಿತರು ಕೂಡ ಸಂಪ್ರದಾಯದಂತೆ ನಿಶ್ಚಿತಾರ್ಥ ನೆರವೇರಿಸಿದರು. ಸದ್ಯ ಈ ನಿಶ್ಚಿತಾರ್ಥವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ಈ ಬಗ್ಗೆ ವರನ ತಾಯಿ ಗೌರಿ ಶ್ರೀಧರ್‌ ಮಾತನಾಡಿ, ನನ್ನ ಮಗ ಸುಹಾಸ್‌ ಕೆನಡಾದಲ್ಲಿದ್ದಾನೆ. ಅವನು ಅಲ್ಲಿಂದ ಬರಲು ಸಾಧ್ಯವಾಗದ ಕಾರಣ ವರ್ಚುವಲ್‌ ಎಂಗೇಜ್‌ಮೆಂಟ್‌ ಮಾಡಲು ನಿರ್ಧರಿಸಿದ್ದೆವು. ತಡರಾತ್ರಿ ಆದರೂ ವಿಡಿಯೋ ಕಾಲ್‌ ಮೂಲಕ ನಿಶ್ಚಿತಾರ್ಥಕ್ಕೆ ಮಗ ಹಾಜರಾಗಿದ್ದ. ಮಗ ಪ್ರತ್ಯಕ್ಷವಾಗಿ ಇಲ್ಲಿ ಇರಲಿಲ್ಲ ಎನ್ನುವುದು ಬಿಟ್ಟರೆ, ಕಾರ್ಯಕ್ರಮವೆಲ್ಲಾ ಚೆನ್ನಾಗಿ ನಡೆಯಿತು ಎಂದು ತಿಳಿಸಿದ್ದಾರೆ.