ಜ್ಯೋತಿಷಿ ಕಮಲಾಕರ್ ಭಟ್, ಸುಚಿತ್ರಾ ನ್ಯಾಯಾಂಗ ಬಂಧನ ವಿಸ್ತರಣೆ; ಫೆ.21ರವರೆಗೆ ಜೈಲೇ ಗತಿ
Kamalakar Bhat Case: ಸಿದ್ದಾಪುರದ ವಸಂತ್ ನಾಯ್ಕ್ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿ ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ಸೇರಿ ಇತರ ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಜೆಎಂಎಫ್‌ಸಿ ಕೋರ್ಟ್ ವಿಚಾರಣೆ ನಡೆಸಿ, ನ್ಯಾಯಾಂಗ ಬಂಧನ ವಿಸ್ತರಿಸಿದೆ.
ಜ್ಯೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರಾ. -
ಕಾರವಾರ: ಸಿದ್ದಾಪುರದ ವಸಂತ್ ನಾಯ್ಕ್ ಹತ್ಯೆ ಪ್ರಕರಣದ (Siddapura murder case) ಆರೋಪಿಗಳಾದ ಜ್ಯೋತಿಷಿ ಕಮಲಾಕರ್ ಭಟ್ (Kamalakar Bhat) ಮತ್ತು ಸುಚಿತ್ರಾಗೆ ಫೆಬ್ರವರಿ 21ರವರೆಗೆ ಜೈಲೇ ಗತಿಯಾಗಿದೆ. ಈ ಪ್ರಕರಣ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಜೆಎಂಎಫ್‌ಸಿ ಕೋರ್ಟ್ ಬುಧವಾರ ವಿಚಾರಣೆ ನಡೆಸಿ, ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶಿಸಿದೆ.
ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಇಂದು ಪೊಲೀಸರು ವಿಡಿಯೊ ಕಾನ್ಫರೆನ್ಸ್ ಮೂಲಕ ಐವರು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿದ್ದರು. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಐವರು ಆರೋಪಿಗಳು ಹಾಜರಾಗಿದ್ದರು. ಎ1 ಸುಚಿತ್ರಾ ನಾಯ್ಕ್, ಎ2 ಲೋಕನಾಥ್, ಎ3 ಕಮಲಾಕರ ಭಟ್, ಎ4 ಆಕಾಶ್, ಎ5 ವಿನಯ್ ನ್ಯಾಯಾಂಗ ಬಂಧನವನ್ನು ಫೆಬ್ರವರಿ 21ರವರೆಗೆ ವಿಸ್ತರಣೆ ಮಾಡಲಾಗಿದೆ.
ಇನ್ನು 8 ಆರೋಪಿಗಳ ಪೈಕಿ ಎ5 ಆರೋಪಿ ಮಹ್ಮದ್ ಮೆಹಫೂಪ್, ಎ6 ಆರೋಪಿ ಮಹ್ಮದ್ ಫೈಸಲ್, ಎ7 ಆರೋಪಿ ಇರ್ಫಾನ್ ಪೊಲೀಸ್ ಕಸ್ಟಡಿಯಲ್ಲಿರುವ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ಫೆ.13ಕ್ಕೆ ನ್ಯಾಯಾಧೀಶರು ವಿಚಾರಣೆ ನಡೆಸಲಿದ್ದಾರೆ.
ಸುಚಿತ್ರಾಗಾಗಿ 50-100 ಕೋಟಿ ಆಸ್ತಿ; ಕಮಲಾಕರ್ ಭಟ್ ಮತ್ತೊಂದು ಆಡಿಯೊ ವೈರಲ್
ಕಮಲಾಕರ್ ಭಟ್ ಬಂಧನದ ಬಳಿಕ ಆಡಿಯೊಂದು ವೈರಲ್ ಆಗಿತ್ತು. ಅದರಲ್ಲಿ ಜ್ಯೋತಿಷಿ ಮತ್ತು ಸುಚಿತ್ರಾ ಅಶ್ಲೀಲವಾಗಿ ಮಾತನಾಡಿದ್ದರು. ಇವಳೇ ನನ್ನ ಸರ್ವಸ್ವ, ಇವಳನ್ನ ಪಡೆಯಬೇಕು ಎಂದು ಅವಳು ಏನು ಮಾಡಿದ್ರೂ ಕೂಡ ನಾಯಿ ತರ ಅವಳ ಹಿಂದೆ ಓಡಾಡಿದವನು ನಾನು. 4 ತಿಂಗಳ ಪರಿಶ್ರಮದ ಫಲವಾಗಿ ಭಗವಂತ ನನಗೆ ಕೊಟ್ಟ ಅಂದುಕೊಂಡಿದ್ದೀನಿ ಎಂದು ಕಮಲಾಕರ್ ಭಟ್ ಮಾತನಾಡಿದ್ದ. ಆದರೆ, ಇದೀಗ ಮತ್ತೊಂದು ಆಡಿಯೊ ವೈರಲ್ ಆಗಿದೆ.
ಸುಚಿತ್ರಾ ತಾಳಕ್ಕೆ ತಕ್ಕಂತೆ ಕುಣಿದ ಜ್ಯೋತಿಷಿ ಕಮಲಾಕರ್ ಭಟ್; ಯಕ್ಷಗಾನ ನೃತ್ಯದ ವಿಡಿಯೊ ವೈರಲ್
ಎರಡನೇ ಆಡಿಯೋದಲ್ಲಿ ಸುಚಿತ್ರಾಗಾಗಿ ಕೋಟಿ ಕೋಟಿ ಆಸ್ತಿ ಮಾಡಿರುವ ಬಗ್ಗೆ ಕಮಲಾಕರ್ ಭಟ್ ಹೇಳಿದ್ದಾನೆ. ನಾನು ನಾಳೆಯೇ ಸತ್ತರೂ ಪರವಾಗಿಲ್ಲ, ಇಂದು ಸತ್ತರೂ ಕೂಡ ಪರವಾಗಿಲ್ಲ. ಸುಚಿತ್ರಾ ಲೈಫ್ ಸೆಟಲ್ ಆಗಲಿ ಎಂದು 50-100 ಕೋಟಿ ರೂಪಾಯಿ ಆಸ್ತಿ ಮಾಡಿದ್ದೀನಿ. ಮಗಳಿಗೆ 3 ಕೋಟಿ ರೂಪಾಯಿ ಮಾಡಿದ್ದೀನಿ. ನಿಷ್ಕಲ್ಮಷ ಮನಸ್ಸಿನಿಂದ ಇದನ್ನೆಲ್ಲ ಮಾಡಿದೀನಿ ಎಂದು ಕಮಲಾಕರ್ ಭಟ್ ಮಾತನಾಡಿದ್ದಾನೆ.