"ಇಡೀ ತಮಿಳುನಾಡಿಗೇ ಆತ ಮಗ ಇದ್ದಂತೆ"; ಟಿವಿಕೆ ಗೆಲುವಿನ ಬಳಿಕ ವಿಜಯ್ ತಂದೆ ಹೇಳಿದ್ದೇನು?
ತಮಿಳುನಾಡಿನ ರಾಜಕೀಯದಲ್ಲಿ ಭಾರೀ ಬೆಳವಣಿಗೆ ಸಂಭವಿಸಿದ್ದು, ಟಿವಿಕೆ ಭರ್ಜರಿ ಗೆಲುವನ್ನು ಸಾಧಿಸಿದೆ. ಆರಂಭಿಕವಾಗಿ ಕೆಲ ಕ್ಷೇತ್ರಗಳಲ್ಲಿ ಹಿನ್ನಡೆಯಲ್ಲಿದ್ದ ವಿಜಯ್ ದಳಪತಿ ಪಕ್ಷ ಇದೀಗ 106 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಸರ್ಕಾರ ರಚಿಸಲು ಸಿದ್ಧತೆ ನಡೆಸುತ್ತಿದೆ. ತಮಿಳುನಾಡಿನ 234 ಸ್ಥಾನಗಳ ಪೈಕಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) 106 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಸಂಗ್ರಹ ಚಿತ್ರ -
ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಭಾರೀ ಬೆಳವಣಿಗೆ ಸಂಭವಿಸಿದ್ದು, ಟಿವಿಕೆ (TVK Vijay) ಭರ್ಜರಿ ಗೆಲುವನ್ನು ಸಾಧಿಸಿದೆ. ಆರಂಭಿಕವಾಗಿ ಕೆಲ ಕ್ಷೇತ್ರಗಳಲ್ಲಿ ಹಿನ್ನಡೆಯಲ್ಲಿದ್ದ ವಿಜಯ್ ದಳಪತಿ (Tami Nadu) ಪಕ್ಷ ಇದೀಗ 106 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಸರ್ಕಾರ ರಚಿಸಲು ಸಿದ್ಧತೆ ನಡೆಸುತ್ತಿದೆ. ತಮಿಳುನಾಡಿನ 234 ಸ್ಥಾನಗಳ ಪೈಕಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) 106 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟ 71 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಎರಡನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಮತ್ತು ಡಿಎಂಡಿಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಆಡಳಿತಾರೂಢ ಡಿಎಂಕೆ 56 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಮೂರನೇ ಸ್ಥಾನದಲ್ಲಿದೆ.
ಫಲಿತಾಂಶ ಹೊರ ಬಿದ್ದ ಬಳಿಕ ವಿಜಯ್ ನಿವಾಸದಲ್ಲಿ ಸಂಭ್ರಮಾಚರಣೆ ನಡೆದಿದೆ. ಕುಟುಂಬವು ವಿಜಯ್ ತಂದೆಯನ್ನು ಅಪ್ಪಿಕೊಂಡು ಕುಣಿದಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಮತ ಎಣಿಕೆಗೂ ಮುನ್ನ ವಿಜಯ್ ಹಾಗೂ ಅವರ ತಂದೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬಂದಿದ್ದರು. ಬಳಿಕ ಮಾತನಾಡಿದ ವಿಜಯ್ ತಂದೆ ಚಂದ್ರಶೇಖರ್, "ಮೊದಲನೆಯದಾಗಿ, ಒಬ್ಬ ತಂದೆಯಾಗಿ, ನನಗೆ ತುಂಬಾ ಹೆಮ್ಮೆ ಮತ್ತು ಸಂತೋಷವಾಗಿದೆ. ಒಟ್ಟಾರೆಯಾಗಿ, ನಾನು ಮತ್ತು ನನ್ನ ಹೆಂಡತಿ, ಏಕೆಂದರೆ ನನ್ನ ಮಗನಿಗೆ ನನ್ನ ಶುಭಾಶಯಗಳು ಏಕೆಂದರೆ ಕಳೆದ ಎರಡು ವರ್ಷಗಳಿಂದ ನಾನು ಅವನ ಆತ್ಮವಿಶ್ವಾಸದ ಮಟ್ಟವನ್ನು ನೋಡುತ್ತಿದ್ದೇನೆ."
ಕುಟುಂಬಸ್ಥರ ಸಂಭ್ರಮಾಚರಣೆ ವಿಡಿಯೋ
#WATCH | Tamil Nadu Elections 2026 | Family of TVK chief and actor Vijay blow whistles and celebrate at their residence, as the party continues its lead in the state. It is currently leading on 110 of the total 234 seats in the state. pic.twitter.com/EnVN6HouAQ
— ANI (@ANI) May 4, 2026
"ನಾನು ತಮಿಳುನಾಡಿನ ಮುಖ್ಯಮಂತ್ರಿಯಾಗುತ್ತೇನೆ" ಎಂದು ಆತ ಹೇಳುತ್ತಿದ್ದ. ಆ ಕನಸನ್ನು ಇದೀಗ ಆತ ನನಸು ಮಾಡಿದ್ದಾನೆ. ತಮಿಳುನಾಡಿನ ಜನರಿಗೆ, ತಮಿಳು ಜನರಿಗೆ ಒಳ್ಳೆಯದನ್ನು ಮಾಡುವ ಗುರಿಯನ್ನು ವಿಜಯ್ ಹೊಂದಿದ್ದಾನೆ. ರಾಜ್ಯದ ಜನರೊಂದಿಗೆ ವಿಜಯ್ ಹಂಚಿಕೊಳ್ಳುವ ಸಂಬಂಧದ ಬಗ್ಗೆ ಮಾತನಾಡಿದ ಚಂದ್ರಶೇಖರ್, "ತಮಿಳು ಜನರು ಅವರನ್ನು ನಾಯಕನಾಗಿ ಮಾತ್ರವಲ್ಲದೆ ಪ್ರೀತಿಸುತ್ತಿದ್ದರು. ಪ್ರತಿಯೊಬ್ಬ ಮಹಿಳೆಯೂ ಅವರನ್ನು ತಮ್ಮ ಸ್ವಂತ ಮಗನಂತೆ ಪರಿಗಣಿಸುತ್ತಾರೆ. ಯುವಕರು ಅವರನ್ನು ತಮ್ಮ ಸ್ವಂತ ಸಹೋದರ ಎಂದು ಪರಿಗಣಿಸುತ್ತಾರೆ. ಎಲ್ಲರೂ ಅವರನ್ನು ಅಣ್ಣಾ ಎಂದು ಕರೆಯುತ್ತಾರೆ ಎಂದು ಹೇಳಿದ್ದಾರೆ.
ತಮಿಳುನಾಡಿನ 234 ಸ್ಥಾನಗಳಲ್ಲಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪ್ರಸ್ತುತ 109 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟ 65 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಎರಡನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಮತ್ತು ಡಿಎಂಡಿಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಆಡಳಿತಾರೂಢ ಡಿಎಂಕೆ 59 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಮೂರನೇ ಸ್ಥಾನದಲ್ಲಿದೆ.