Hospet News: ಜಿಲ್ಲಾ ಉಪ ಕಾರಾಗೃಹದಲ್ಲಿ ಬಂಧಿಗಳಿಗೆ ತಂಬಾಕು ಮತ್ತು ಧೂಮಪಾನದ ದುಷ್ಪರಿಣಾಮ ಕುರಿತು ಅರಿವು ಮತ್ತು ಜಾಗೃತಿ ಕಾರ್ಯಕ್ರಮ
ಶೈಕ್ಷಣಿಕ, ಧಾರ್ಮಿಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧ ಹಾಗೂ ಕಾನೂನಾತ್ಮಕ ದಂಡ-ಶಿಕ್ಷೆಗಳಿದ್ದರೂ ಸಮಾಜದಲ್ಲಿ ಜಾಗೃತಿಯ ಕೊರತೆಯಿಂದ ಜನರು ದುಷ್ಟ ಚಟಗಳಿಗೆ ದಾಸರಾಗು ತ್ತಿದ್ದಾರೆ. ಇದನ್ನು ತಡೆಯಲು ಮತ್ತು ತಂಬಾಕು ಹಾಗೂ ಮಾದಕ ವಸ್ತುಗಳ ಸೇವನೆಯಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಮತ್ತು ಬಂಧಿಗಳಲ್ಲಿ ಅರಿವು ಮೂಡಿಸಲಾಯಿತು.
-
ಹೊಸಪೇಟೆ: ನಗರದ ಜಿಲ್ಲಾ ಉಪ ಕಾರಗೃಹದಲ್ಲಿ ಬಂಧಿಖಾನೆ ಬಂಧಿಗಳಿಗೆ ತಂಬಾಕು ಮತ್ತು ಧೂಮಪಾನದ ದುಷ್ಪರಿಣಾಮ ಕುರಿತು ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿತ್ತು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ (ತಂಬಾಕು ನಿಯಂತ್ರಣಕೋಶ) ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಕಾರ್ಯನಿರ್ವಹಣಾಧಿಕಾರಿಗಳು, ಮಾನ್ಯ ಗರಿಮಾ ಪನ್ವಾರ್ (ಭಾ.ಆ.ಸೇ.) ಅವರ ನಿರ್ದೇಶನ ಹಾಗೂ ಒತ್ತಾಸೆಯಂತೆ ಆಯೋಜಿಸಲಾಗಿತ್ತು.
ಇದನ್ನೂ ಓದಿ: Hospet News: ಪೋಷಣ ಪಕ್ವಾಡ ಎಂಬುದು ಪ್ರತಿ ವರ್ಷ ಆಚರಿಸಲಾಗುವ 30 ದಿನಗಳ (ಪಕ್ಷದ) ರಾಷ್ಟ್ರೀಯ ಜಾಗೃತಿ ಅಭಿಯಾನವಾಗಿದೆ
ಜಿಲ್ಲಾ ಅರೋಗ್ಯ ನಿರೀಕ್ಷಣಾಧಿಕಾರಿ ಎಂ.ಧರ್ಮನಗೌಡ ಮಾತನಾಡಿ, ದುಷ್ಟಚಟಗಳ ದುಷ್ಟ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ಶೈಕ್ಷಣಿಕ, ಧಾರ್ಮಿಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧ ಹಾಗೂ ಕಾನೂನಾತ್ಮಕ ದಂಡ-ಶಿಕ್ಷೆಗಳಿದ್ದರೂ ಸಮಾಜದಲ್ಲಿ ಜಾಗೃತಿಯ ಕೊರತೆಯಿಂದ ಜನರು ದುಷ್ಟ ಚಟಗಳಿಗೆ ದಾಸರಾಗು ತ್ತಿದ್ದಾರೆ. ಇದನ್ನು ತಡೆಯಲು ಮತ್ತು ತಂಬಾಕು ಹಾಗೂ ಮಾದಕ ವಸ್ತುಗಳ ಸೇವನೆಯಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಮತ್ತು ಬಂಧಿಗಳಲ್ಲಿ ಅರಿವು ಮೂಡಿಸಲಾಯಿತು.
ಜಿಲ್ಲಾ ವಯಸ್ಕರ ಶಿಕ್ಷಣ ಕಾರ್ಯಕ್ರಮ ಸಹಾಯಕ ಮಧುಸೂಧನ, ಕಾರಾಗೃಹ ಅಧಿಕಾರಿ ಎಸ್.ಜಿ. ಬಾರಕೇರ, ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿ ಜಮೀಲ್ ಅಹ್ಮದ್, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾಪತಿ .ಬಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜ ಹವಾಲ್ದಾರ್ ಮುಂತಾದವರು ಭಾಗವಹಿಸಿದ್ದರು.