ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kolhar News: ಶ್ರೀ ಶರಣಬಸಪ್ಪ ಅಪ್ಪಾ ನಿಧನಕ್ಕೆ ಸಂತಾಪ

ತಮ್ಮ ಜೀವತಾವಧಿಯ ಪೂರ್ಣಕಾಲ ಸಮಾಜದ ಏಳ್ಗೇಗಾಗಿ ಮೀಸಲಿಟ್ಟಿದ್ದ ಶರಬಸಪ್ಪ ಅಪ್ಪಾ ಅವರು ಧಾರ್ಮಿಕ ಕಾರ್ಯದ ಜೊತೆಗೆ ಶೖಕ್ಷಣಿಕ ಕ್ರಾಂತಿಯ ಮೂಲಕ ಲಕ್ಷಾಂತರ ಜನರ ಬಾಳಿನಲ್ಲಿ ಶಿಕ್ಷಣದ ದೀಪವನ್ನು ಪ್ರಜ್ವಲಿಸಿದ್ದರು. ಶರಣಸಪ್ಪ ಅಪ್ಪಾ ಅವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ವನ್ನುಂಟು ಮಾಡಿದೆ ಎಂದು ಸಂತಾಪ ಸೂಚಿಸಿದ್ದಾರೆ.

ಶ್ರೀ ಶರಣಬಸಪ್ಪ ಅಪ್ಪಾ ನಿಧನಕ್ಕೆ ಸಂತಾಪ

Ashok Nayak Ashok Nayak Aug 17, 2025 11:01 AM

ಕೊಲ್ಹಾರ: ಮಹಾದಾಸೋಹಿ, ನಾಡಿನ ಆರಾಧ್ಯ ದೈವ, ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಕ್ರಾಂತಿಯ ಹರಿಕಾರ ಕಲಬುರ್ಗಿಯ ಶ್ರೀ ಶರಣಬಸಪ್ಪ ಅಪ್ಪ ನಿಧನಕ್ಕೆ ಪಟ್ಟಣದ ಖಾನಕಾಯೇ ಗಪ್ಪಾರೀಯಾದ ಪೀಠಾಧಿಪತಿಗಳಾದ ಡಾ.ಬಕ್ತೀಯಾರಖಾನ್ ಪಠಾಣ ಸಹಿತ ಪಟ್ಪಣದ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ.

ತಮ್ಮ ಜೀವತಾವಧಿಯ ಪೂರ್ಣಕಾಲ ಸಮಾಜದ ಏಳ್ಗೇಗಾಗಿ ಮೀಸಲಿಟ್ಟಿದ್ದ ಶರಬಸಪ್ಪ ಅಪ್ಪಾ ಅವರು ಧಾರ್ಮಿಕ ಕಾರ್ಯದ ಜೊತೆಗೆ ಶೖಕ್ಷಣಿಕ ಕ್ರಾಂತಿಯ ಮೂಲಕ ಲಕ್ಷಾಂತರ ಜನರ ಬಾಳಿನಲ್ಲಿ ಶಿಕ್ಷಣದ ದೀಪವನ್ನು ಪ್ರಜ್ವಲಿಸಿದ್ದರು. ಶರಣಸಪ್ಪ ಅಪ್ಪಾ ಅವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಅವರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Kolhar News: ಪಟ್ಟಣ ಪಂಚಾಯಿತಿ ಸದಸ್ಯನ ಮಾದರಿ ಕಾರ್ಯ

ಶರಣಬಪ್ಪ ಅಪ್ಪಾ ಅವರ ಅಗಲಿಕೆಗೆ ಪಟ್ಟಣದ ಪ್ರಮುಖರಾದ ಮಾಜಿ ಜಿ. ಪಂ ಸದಸ್ಯ ಕಲ್ಲು ದೇಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್. ಬಿ ಪಕಾಲಿ, ಉಸ್ಮಾನಪಟೇಲ್ ಖಾನ್, ಪಿ.ಕೆ ಗಿರಗಾವಿ, ದಾದಾ ಗೂಗಿಹಾಳ, ಮೊಹಮ್ಮದ ಸಲೀಂ ಅತ್ತಾರ, ಶ್ರೀಶೈಲ್ ಮುಳವಾಡ, ಬನಪ್ಪ ಬಾಲಗೊಂಡ, ಮಹಾಂತೇಶ ಗಿಡ್ಡಪ್ಪಗೋಳ, ಹನೀಪ ಮಕಾನದಾರ, ಎಂ.ಆರ್ ಕಲಾದಗಿ, ಮೊಹಸೀನ್ ಕಾಖಂಡಕಿ, ತೌಸಿಪ್ ಗಿರಗಾಂವಿ, ದಸ್ತಗೀರ ಕಲಾದಗಿ, ಅನ್ವರ ಕಂಕರಪೀರ, ಇಕ್ಬಾಲ್ ನದಾಫ್, ದಶರಥ ಈಟಿ ಸಂತಾಪ ಸೂಚಿಸಿದ್ದಾರೆ.