Indi News:ವಚನಗಳಿಂದ ಬುದ್ದಿ ಶಕ್ತಿ ಹೆಚ್ಚುತ್ತದೆ: ಉಪನ್ಯಾಸಕ ಸದಾನಂದ ಈರನಕೇರಿ
ಮಕ್ಕಳು ದೇವರ ಸಮಾನರು ವಿಭಿನ್ನ ಕುಟುಂಬಗಳಿಂದ, ವಿಭಿನ್ನ ಸಮುದಾಯಗಳಿಂದ ಕಾಲೇಜಿಗೆ ಬಂದಿ ರುವ ಮಕ್ಕಳಲ್ಲಿ ವಿಭಿನ್ನ ಸಾಹಿತ್ಯ ಅಡಗಿರುತ್ತದೆ. ಸಾಹಿತ್ಯ ಎಂಬುದು ಪುಸ್ತಕದಿಂದ ಮಾತ್ರ ವಲ್ಲದೆ ಬಾಯಿಂದ ಬಾಯಿಗೆ ಹರಿದು ಬಂದು ಪುಸ್ತಕ ರೂಪದಲ್ಲಿ ರಚನೆಯಾಗುತ್ತದೆ. ವಚನ ಕಂಠ ಪಾಠ ಮಾಡುವದರಿಂದ ಮಕ್ಕಳಲ್ಲಿ ಜ್ಞಾನ ವೃದ್ದಿಯಾಗುತ್ತದೆ ನೆನಪಿನ ಶಕ್ತಿ ಮತ್ತಷ್ಟು ಹೆಚ್ಚಿಸುತ್ತದೆ.

ಪಟ್ಟಣದ ಶ್ರೀಶಾಂತೇಶ್ವರವಿಧ್ಯಾವರ್ಧಕ ಸಂಘದ ಅಡಿಯಲ್ಲಿ ಶ್ರೀಮತಿ ಶಾಲಿನಿ ಮಾಣಿಕಚಂದ್ ದೋಶಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಮಕ್ಕಳ ಸಾಹಿತ್ಯ ಸಂಗಮ ವಚನ ಕಂಠ ಪಾಠ ಸ್ಪರ್ಧೇ ವಿಧ್ಯಾರ್ಥಿಗಳು ಭಾಗವಹಿಸಿದರು.

ಇಂಡಿ: ಪಟ್ಟಣದ ಶ್ರೀಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಶ್ರೀಮತಿ ಶಾಲಿನಿ ಮಾಣಿಕ ಚಂದ್ ದೋಶಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಮಕ್ಕಳ ಸಾಹಿತ್ಯ ಸಂಗಮ ವಚನ ಕಂಠ ಪಾಠ ಸ್ಪರ್ಧೆ ಜರುಗಿದವು.
ಮಕ್ಕಳ ಸಾಹಿತ್ಯ ಸಂಗಮ ತಾಲೂಕಾ ಅಧ್ಯಕ್ಷ ಸದಾನಂದ ಈರನಕೇರಿ ಮಾತನಾಡಿ, ಮಕ್ಕಳು ದೇವರ ಸಮಾನರು ವಿಭಿನ್ನ ಕುಟುಂಬಗಳಿಂದ, ವಿಭಿನ್ನ ಸಮುದಾಯಗಳಿಂದ ಕಾಲೇಜಿಗೆ ಬಂದಿ ರುವ ಮಕ್ಕಳಲ್ಲಿ ವಿಭಿನ್ನ ಸಾಹಿತ್ಯ ಅಡಗಿರುತ್ತದೆ. ಸಾಹಿತ್ಯ ಎಂಬುದು ಪುಸ್ತಕದಿಂದ ಮಾತ್ರವಲ್ಲದೆ ಬಾಯಿಂದ ಬಾಯಿಗೆ ಹರಿದು ಬಂದು ಪುಸ್ತಕ ರೂಪದಲ್ಲಿ ರಚನೆಯಾಗುತ್ತದೆ. ವಚನ ಕಂಠಪಾಠ ಮಾಡುವುದರಿಂದ ಮಕ್ಕಳಲ್ಲಿ ಜ್ಞಾನ ವೃದ್ದಿಯಾಗುತ್ತದೆ ನೆನಪಿನ ಶಕ್ತಿ ಮತ್ತಷ್ಟು ಹೆಚ್ಚಿಸುತ್ತದೆ.
ಇದನ್ನೂ ಓದಿ: Indi (Vijayapura) News: ಜಿ.ಟಿ.ಟಿ.ಸಿ ಕಾಲೇಜಿನ ಬಹುದಿನಗಳ ಕನಸು ಈಡೇರಿಸಿದ ಶಾಸಕ ಯಶವಂತರಾಯಗೌಡ ಪಾಟೀಲ
ಮಕ್ಕಳಲ್ಲಿ ಕೂಡಾ ಸೂಕ್ತ ಅಂತಹ ಶಕ್ತಿ ಅಡಗಿರುತ್ತದೆ ಅವರಿಗೆ ಸಮಯೋಚಿತ ವೇದಿಕೆ ನಿರ್ಮಿಸಿ ದಾಗ ಮಾತ್ರ ಸಾಹಿತ್ಯ ಹೊರ ಹೊಮ್ಮುತ್ತದೆ. ಉದ್ದೇಶ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಯಲಿ ಎಂಬ ನಮ್ಮೇಲ್ಲರ ಸಂಘಟಕರ ಬಯಕೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಎಸ್.ಬಿ.ಹಡಪದ ಸಾಹಿತ್ಯದ ವಿವಿಧ ಮಜಲುಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು. ಉಪನ್ಯಾಸಕ ವಿಜಯಕುಮಾರ ರಾಠೋಡ ಕಾರ್ಯಕ್ರಮದಲ್ಲಿ 12ನೇ ಶತಮಾನದ ವಚನಕಾರ ಅಣ್ಣಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅನಿಷ್ಠ ಹೋಗಲಾಡಿಸಿ ರುವುದು ಹೇಳಿದರು.
ಪ್ರಾಚಾರ್ಯರಾದ ಎ.ಬಿ ಪಾಟೀಲ, ಆರ್.ಎಸ್ ಬಿರಾದಾರ, ಉಪನ್ಯಾಸಕಿ ಫರಹ ಮೇಡಂ, ಉಪನ್ಯಾಸಕ ಅಳೂರ, ಸಿಂಧೆ, ರಾಮಚಂದ್ರ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಉಪನ್ಯಾಸಕರು ಇದ್ದರು.