CM Siddaramaiah: ಕೃಷ್ಣೆಗೆ ಆರನೇ ಬಾರಿ ಬಾಗಿನ ಅರ್ಪಿಸಿದ ಸಿದ್ಧರಾಮಯ್ಯ
ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ, ಕಾರ್ಯದರ್ಶಿ ಕೆ.ಬಿ. ಕುಲಕರ್ಣಿ, ಕೆಬಿಜೆಎನ್ಎಲ್ ಎಂಡಿ ಕೆ.ಪಿ. ಮೋಹನರಾಜ್, ಸಿಇ ಡಿ. ಬಸವರಾಜ, ಬೆಳಗಾವಿ ಪ್ರಾದೇಶಿಕ ಆಯುಕ್ತೆ ಜಾನಕಿ, ಜಿಲ್ಲಾಧಿಕಾರಿಗಳಾದ ಕೆ. ಆನಂದ, ಸಂಗಪ್ಪ, ಸಿಇಓ ರಿಷಿ ಆನಂದ ಮತ್ತಿತರರು ಇದ್ದರು. ಬಾಗಿನ ಕಾರ್ಯಕ್ರಮದಲ್ಲಿ ಅವಳಿ ಜಿಲ್ಲೆಯ ಶಾಸಕರು, ಸಂಸದರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕಲಾಗಿತ್ತು.

-

ಆಲಮಟ್ಟಿ: ಆಲಮಟ್ಟಿ ಜಲಾಶಯದ ಬಳಿ ಕೃಷ್ಣೆಗೆ ಶನಿವಾರ ಮಧ್ಯಾಹ್ನ 1.30 ಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ (Chief Minister Siddaramaiah) ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ (DCM D K Shivakumar) ಗಂಗಾಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ರೈತರ ಒಳಿತಿಗೆ ಪ್ರಾರ್ಥಿಸಿದರು.
ಸಿದ್ಧರಾಮಯ್ಯ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ 2013,2014 ಮತ್ತು 2017 ರಲ್ಲಿ ಮೂರು ಬಾರಿ, ಎರಡನೇ ಅವಧಿಯಲ್ಲಿ 2023,2024 ಹಾಗೂ 2025 ಹೀಗೆ ಒಟ್ಟಾರೇ ಆರು ಬಾರಿ ಕೃಷ್ಣೆಯ ಜಲಧಿಗೆ ಬಾಗಿನ ಅರ್ಪಿಸಿದ್ದಾರೆ. ಅತಿ ಹೆಚ್ಚು ಬಾರಿ ಬಾಗಿನ ಅರ್ಪಿಸಿದ ದಾಖಲೆ ಸಿದ್ಧರಾಮಯ್ಯ ಅವರದ್ದು.
ಸಚಿವರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಆರ್.ಬಿ. ತಿಮ್ಮಾಪುರ, ಶಾಸಕರಾದ ಎಚ್.ವೈ. ಮೇಟಿ, ಜೆ.ಟಿ. ಪಾಟೀಲ, ವಿಜಯಾನಂದ ಕಾಶಪ್ಪನವರ, ಯಶವಂತರಾಯಗೌಡ ಪಾಟೀಲ, ಭೀಮಸೇನ ಚಿಮ್ಮನಕಟ್ಟಿ, ಅಶೋಕ ಮನಗೂಳಿ, ಸಂಗಮೇಶ ಬಬಲೇಶ್ವರ ಮತ್ತಿತರರು ಇದ್ದರು.
ಇದನ್ನೂ ಓದಿ: Mohan Vishwa Column: ಭಾರತದ ಸದೃಢ ಆರ್ಥಿಕತೆಯ ಮುನ್ನೋಟ
ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ, ಕಾರ್ಯದರ್ಶಿ ಕೆ.ಬಿ. ಕುಲಕರ್ಣಿ, ಕೆಬಿಜೆಎನ್ಎಲ್ ಎಂಡಿ ಕೆ.ಪಿ. ಮೋಹನರಾಜ್, ಸಿಇ ಡಿ. ಬಸವರಾಜ, ಬೆಳಗಾವಿ ಪ್ರಾದೇಶಿಕ ಆಯುಕ್ತೆ ಜಾನಕಿ, ಜಿಲ್ಲಾಧಿಕಾರಿಗಳಾದ ಕೆ. ಆನಂದ, ಸಂಗಪ್ಪ, ಸಿಇಓ ರಿಷಿ ಆನಂದ ಮತ್ತಿತರರು ಇದ್ದರು. ಬಾಗಿನ ಕಾರ್ಯಕ್ರಮದಲ್ಲಿ ಅವಳಿ ಜಿಲ್ಲೆಯ ಶಾಸಕರು, ಸಂಸದರ ಹೆಸರನ್ನು ಆಮಂತ್ರಣ ಪತ್ರಿಕೆ ಯಲ್ಲಿ ಹಾಕಲಾಗಿತ್ತು. ಆದರೆ ಅವಳಿ ಜಿಲ್ಲೆಯ ಬಿಜೆಪಿಯ ಯಾವುದೇ ಸಂಸದರು, ಶಾಸಕರು ಭಾಗಿ ಯಾಗಲಿಲ್ಲ.
ಬಾಗಿನ ಸ್ಥಳ ಬದಲಾವಣೆ: ಜಲಾಶಯದಲ್ಲಿ ಕೆಳಗಿಳಿದು ನೇರವಾಗಿ ಕೃಷ್ಣೆಗೆ ಬಾಗಿನ ಅರ್ಪಿಸ ಲಾಗುತ್ತಿತ್ತು. ಆದರೆ ಮುಖ್ಯಮಂತ್ರಿಗಳಿಗೆ ಮೊಣಕಾಲು ನೋವು ಇದ್ದದ್ದರಿಂದ ಜಲಾಶಯದ ಮೇಲ್ಭಾಗದಿಂದಲೇ ಬಾಗಿನ ಅರ್ಪಿಸಿದರು.