ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

LPG Crisis: ಹಳ್ಳಿ ಜನತೆಗೆ ಇನ್ನು ಮುಂದೆ 45 ದಿನಕ್ಕೆ ಒಂದು ಸಿಲಿಂಡರ್, ಸೌದೆ ಬಳಸಿ:‌ ಸಚಿವ ಮುನಿಯಪ್ಪ

ಸಿಲಿಂಡರ್​ಗಾಗಿ ಯಾರು ಕೂಡ ಕ್ಯೂ ನಿಲ್ಲಬಾರದು. ನೀವು ಬುಕ್ಕಿಂಗ್ ಮಾಡಿದ್ದರೆ ನಿಮ್ಮ ಮನೆಗೆ ಸಿಲಿಂಡರ್ ಬರುತ್ತೆ. ಕೇಂದ್ರ ಸರ್ಕಾರ ಗ್ಯಾಸ್​ ಪೂರೈಸಲು ಪ್ರಯತ್ನ ಮಾಡುತ್ತಿದೆ. ಈಗ 40% ಸಿಲಿಂಡರ್ ಪೂರೈಕೆ ಆಗುತ್ತಿದೆ. ರಾಜ್ಯಕ್ಕೆ ವಾಣಿಜ್ಯ ಎಲ್​​ಪಿಜಿ ಸಿಲಿಂಡರ್ ಪೂರೈಕೆಯನ್ನು ಶೇ. 68 ಗೆ ಹೆಚ್ಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಹಳ್ಳಿಗಳಿಗೆ 45 ದಿನಕ್ಕೆ ಒಂದು ಸಿಲಿಂಡರ್, ಸೌದೆ ಬಳಸಿ:‌ ಕೆಎಚ್ ಮುನಿಯಪ್ಪ

ಕೆಎಚ್‌ ಮುನಿಯಪ್ಪ -

ಹರೀಶ್‌ ಕೇರ
ಹರೀಶ್‌ ಕೇರ Mar 30, 2026 7:27 AM

ಬೆಂಗಳೂರು, ಮಾ.30 : ಹಳ್ಳಿಗಳಲ್ಲಿ 45 ದಿನಕ್ಕೆ 1 ಗ್ಯಾಸ್ ಸಿಲಿಂಡರ್‌ (Gas cylinder) ಕೊಡುತ್ತಿದ್ದೇವೆ. ಸಿಲಿಂಡರ್​ ಅಭಾವ ಇರುವುದರಿಂದ ಹಳ್ಳಿ ಭಾಗದ ಜನರು ಸೌದೆ ಒಲೆಗಳನ್ನು ಬಳಸಿ. ಬೆಂಗಳೂರು ಬಿಟ್ಟು 40 ಕಿಲೋಮೀಟರ್ ಹೋದರೆ ಸೌದೆ ಸಿಗುತ್ತೆ. ಅರಣ್ಯ ಪ್ರದೇಶದ ಹಸಿ ಮರ ಬಿಟ್ಟು ಒಣ ಕಟ್ಟಿಗೆ ಬಳಸುವಂತೆ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವ ಕೆ.ಹೆಚ್‌ ಮುನಿಯಪ್ಪ (KH Muniyappa) ಹೇಳಿದ್ದಾರೆ.

ಅಡುಗೆ ಅನಿಲ ಅಭಾವದಿಂದ ಹೋಟೆಲ್‌ಗಳು ಬಂದ್‌ ಆಗುತ್ತಿರುವ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೋಟೆಲ್‌ಗಳಿಗೆ ಹೆಚ್ಚುವರಿ ಅಡುಗೆ ಅನಿಲ (LPG Crisis) ನೀಡುವ ಬಗ್ಗೆ ಮಂಗಳವಾರ ಸಭೆ ನಡೆಯಲಿದೆ ಎಂದರು.

ರಾಜ್ಯದಲ್ಲಿ ಸಿಲಿಂಡರ್​ ಕೊರತೆಗೆ ಕೇಂದ್ರ ಸರ್ಕಾರವೇ ಕಾರಣ. ಡಿಸ್ಟ್ರಿಬ್ಯೂಟರ್​ಗಳ ಮೇಲೆ ದೂರು ಬರುತ್ತಿವೆ. ಡೊಮೆಸ್ಟಿಕ್ ಸಿಲಿಂಡರ್ ಈ ಹಿಂದಿನಂತೆ ಮುಂದುವರಿಯುತ್ತೆ. ಆಯಿಲ್ ಕಂಪನಿಗಳಿಗೆ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಸಕಾಲಕ್ಕೆ ಗ್ರಾಹಕರ ಮನೆ ಬಾಗಿಲಿಗೆ ಸಿಲಿಂಡರ್ ತಲುಪಿಸಬೇಕು. ಸಿಲಿಂಡರ್​ಗಾಗಿ ಯಾರು ಕೂಡ ಕ್ಯೂ ನಿಲ್ಲಬಾರದು. ನೀವು ಬುಕ್ಕಿಂಗ್ ಮಾಡಿದ್ದರೆ ನಿಮ್ಮ ಮನೆಗೆ ಸಿಲಿಂಡರ್ ಬರುತ್ತೆ. ಕೇಂದ್ರ ಸರ್ಕಾರ ಗ್ಯಾಸ್​ ಪೂರೈಸಲು ಪ್ರಯತ್ನ ಮಾಡುತ್ತಿದೆ. ಈಗ 40% ಸಿಲಿಂಡರ್ ಪೂರೈಕೆ ಆಗುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯಕ್ಕೆ ವಾಣಿಜ್ಯ ಎಲ್​​ಪಿಜಿ ಸಿಲಿಂಡರ್ ಪೂರೈಕೆಯನ್ನು ಶೇ. 68 ಗೆ ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರವು ಇಂದಿನಿಂದಲೇ ಹೆಚ್ಚುವರಿ ವಾಣಿಜ್ಯ ಎಲ್​​ಪಿಜಿ ಸಿಲಿಂಡರ್‌ಗಳನ್ನು ವಿತರಿಸಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳು, ವಸತಿ ನಿಲಯಗಳು, ಆಸ್ಪತ್ರೆ ಮತ್ತು ಇತರೆ ಅವಶ್ಯಕ ಸಂಸ್ಥೆಗಳಿಗೆ 4200 ಸಿಲಿಂಡರ್ ಹಂಚಿಕೆ ಮಾಡಲಾಗಿದೆ. ಸರ್ಕಾರಿ, ಪಿಎಸ್​​ಯು ಸಂಸ್ಥೆಗಳು, ವಿಮಾನ ನಿಲ್ದಾಣ, ರೈಲು, ಬಸ್ ನಿಲ್ದಾಣಗಳ ಕ್ಯಾಂಟೀನ್‌ಗಳಿಗೆ 1200 ಸಿಲಿಂಡರ್ ಹಂಚಲಾಗಿದೆ ಎಂದರು.

ಗ್ಯಾಸ್ ಶುಲ್ಕ ವಿಧಿಸುವ ಹೋಟೆಲ್‌ಗಳ ವಿರುದ್ಧ ಕಠಿಣ ಕ್ರಮ: ಕೇಂದ್ರ ಸರ್ಕಾರದಿಂದ ಎಚ್ಚರಿಕೆ, ಕಂಪ್ಲೇಂಟ್‌ ಮಾಡುವ ವಿಧಾನ ಇಲ್ಲಿದೆ

ಹೋಟೆಲ್, ಡಾಬಾ, ರೆಸ್ಟೋರೆಂಟ್, ಕ್ಯಾಂಟೀನ್, ಕೇಫೆ, ಬೇಕರಿ, ಸಮುದಾಯ ಅಡುಗೆ ಕೇಂದ್ರಗಳು, ಪಿ.ಜಿ, ಫುಡ್ ವಸ್ತು ನಿಲಯಗಳಿಗೆ 17500 ಸಿಲಿಂಡರ್, ಬೀಜ ಸಂಸ್ಕರಣೆ, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು, ಜೈವೋದ್ಯಮ, ಮೀನುಗಾರಿಕೆ, ಕೋಳಿ ಸಾಕಣೆ, ರೇಷ್ಮೆ ಹುಳು ಸಾಕಣೆ ಕೇಂದ್ರಗಳಿಗೆ 6000, ಇತರ ಅವಶ್ಯಕತೆ ಆಧಾರದ ಮೇಲೆ 563 ಸಿಲಿಂಡರ್‌ ಸೇರಿದಂತೆ ಒಟ್ಟು 29463 ಕಮರ್ಷಿಯಲ್ ಸಿಲಿಂಡರ್ ನಿತ್ಯ ವಿತರಿಸಲಾಗುತ್ತಿದೆ.

ಹೆಚ್ಚಿನ ಬೆಲೆಗೆ ಸಿಲಿಂಡರ್ ಮಾರಾಟ: ಪರವಾನಗಿ ರದ್ದು

ಕೆಲವು ಅನಿಲ ವಿತರಕರು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಸಿಲಿಂಡರ್ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ನಮಗೆ ದೂರುಗಳು ಬಂದಿವೆ. ಎಲ್ಲಾ LPG ವಿತರಕರು ಕಡ್ಡಾಯವಾಗಿ ಸರ್ಕಾರ ನಿಗದಿಪಡಿಸಿದ ದರದಲ್ಲೇ ಸಿಲಿಂಡರ್ ವಿತರಿಸಬೇಕು. ಹೆಚ್ಚುವರಿ ದರ ವಸೂಲಿ ಮಾಡಿದರೆ ಕಾನೂನು ಕ್ರಮಕೈಗೊಳ್ಳುವುದರ ಮೂಲಕ ಪರವಾನಗಿ ರದ್ದು ಮಾಡಲಾಗುವುದು. LPG ಸಿಲಿಂಡರ್ ಅಕ್ರಮ ದಾಸ್ತಾನು ಸಂಬಂಧ 1169 ಕೇಸ್ ದಾಖಲಾಗಿವೆ. ವಾಣಿಜ್ಯ ಉದ್ದೇಶಕ್ಕೆ ಬಳಸ್ತಿದ್ದ 1603 ಸಿಲಿಂಡರ್ ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ.