ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Yadgir News: ಸುರಪುರದಲ್ಲಿ ಘೋರ ಘಟನೆ; ಕೃಷಿ ಹೊಂಡದಲ್ಲಿ ಮುಳುಗಿ ನಾಲ್ವರು ಮಕ್ಕಳ ಸಾವು

Four children drown in farm pond: ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಶಾಲೆಗೆ ರಜೆ ಇದ್ದ ಕಾರಣ ಕೃಷಿಹೊಂಡದಲ್ಲಿ ಮಕ್ಕಳು ಈಜಲು ಹೋಗಿದ್ದ ವೇಳೆ ದುರಂತ ಸಂಭವಿಸಿದೆ. ಸ್ಥಳದಲ್ಲಿ ಮಕ್ಕಳ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ಸುರಪುರದಲ್ಲಿ ಕೃಷಿ ಹೊಂಡದಲ್ಲಿ ಮುಳುಗಿ ನಾಲ್ವರು ಮಕ್ಕಳ ಸಾವು

ಸಾಂದರ್ಭಿಕ ಚಿತ್ರ -

Prabhakara R
Prabhakara R Mar 29, 2026 2:12 PM

ಯಾದಗಿರಿ: ಕೃಷಿ ಹೊಂಡದಲ್ಲಿ ಈಜಲು ಹೋಗಿ ನಾಲ್ವರು ಮಕ್ಕಳು ದಾರುಣವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ (Yadgir News) ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ನಡೆದಿದೆ. ಶಾಲೆಗೆ ರಜೆ ಇದ್ದ ಕಾರಣ ಕೃಷಿಹೊಂಡದಲ್ಲಿ ಮಕ್ಕಳು ಈಜಲು ಹೋಗಿದ್ದ ವೇಳೆ ದುರಂತ ಸಂಭವಿಸಿದೆ.

ಕಿರಣ (6), ಬಸಮ್ಮ (11), ಶರತ್ (6), ಹನುಮೇಶ್ (7) ಮೃತರು. ಸ್ಥಳದಲ್ಲಿ ಮೃತ ಮಕ್ಕಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ‌. ಮಕ್ಕಳನ್ನು ಕಳೆದುಕೊಂಡು ಆಘಾತಗೊಂಡ ಪಾಲಕರು ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ..

ಕಾರು ಡಿಕ್ಕಿಯಾಗಿ ಇಬ್ಬರು ಬೈಕ್‌ ಸವಾರರ ಸಾವು

ಬೆಂಗಳೂರು: ಬೆಂಗಳೂರಿನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರು ಡಿಕ್ಕಿಯಾಗಿ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಸವಾರರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ವಸಂತನಗರದ ವಕ್ಫ್ ಬೋರ್ಡ್ ಎದರು ತಡರಾತ್ರಿ ಅಪಘಾತ ಸಂಭವಿಸಿದೆ.

ಮೃತ ಬೈಕ್ ಸವಾರರನ್ನು ಜುಬೇರ್ ಅಹಮದ್ (42) ಅಬ್ದುಲ್ ಮುನೀರ್ ಪಾಷಾ (16) ಎಂದು ತಿಳಿದುಬಂದಿದೆ. ಒನ್ ವೇ ನಲ್ಲಿ ಬಂದು ಬೈಕ್‌ ಕಾರು ಚಾಲಕ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಇಬ್ಬರು ಬೈಕ್‌ ಸವಾರರು ಕೊನೆಯುಸಿರೆಳೆದಿದ್ದಾರೆ.

Road Accident: ತಿರುಪತಿಗೆ ಹೊರಟಿದ್ದ ಬೆಂಗಳೂರಿನ ಮೂವರು ಅಪಘಾತದಲ್ಲಿ ಸಾವು

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಾಲಕ ಅಯ್ಯಪ್ಪ ಮದ್ಯ ಸೇವಿಸಿ ಕಾರು ಚಲಾಯಿಸಿರುವುದು ಪತ್ತೆಯಾಗಿದೆ. ಹೀಗಾಗಿ ವೊಗ್ಸ್ ವ್ಯಾಗನ್ ಕಾರನ್ನು ಪೊಲೀಸರು ಜಪ್ತಿ ಮಾಡಿ, ಚಾಲಕನನ್ನು ಅರೆಸ್ಟ್ ಮಾಡಿದ್ದಾರೆ.