Saree Fashion 2026: ಜಾರ್ಜೆಟ್ ಗೋಲ್ಡನ್ ಬುಟ್ಟಾ ಸೀರೆಗಳ ಕಮಾಲ್!
ಜಾರ್ಜೆಟ್ನ ಗೋಲ್ಡನ್ ಬುಟ್ಟಾ ಸೀರೆಗಳು ಈ ಸೀಸನ್ನಲ್ಲಿ ಸಖತ್ ಟ್ರೆಂಡಿಯಾಗಿವೆ. ಅದರಲ್ಲೂ ವೈಬ್ರೆಂಟ್ ಶೇಡ್ನವು ಅತಿ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ. ಬಬ್ಬಲ್ಗಮ್ ಪಿಂಕ್, ಲೆಮೆನ್ ಯೆಲ್ಲೋ, ನಿಯಾನ್ ಗ್ರೀನ್, ಬ್ಲಡ್ ರೆಡ್ ಸೇರಿದಂತೆ ಬಗೆಬಗೆಯ ವೈಬ್ರೆಂಟ್ ಶೇಡ್ನವು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ. ಏನಿದರ ಸ್ಪೆಷಾಲಿಟಿ? ಇಲ್ಲಿದೆ ಡಿಟೇಲ್ಸ್.
ಚಿತ್ರಗಳು: ರಸಿಕಾ ದುಗಲ್, ನಟಿ -
ಜಾರ್ಜೆಟ್ ಗೋಲ್ಡನ್ ಬುಟ್ಟಾ ಮೊಟಿಫ್ ಇರುವಂತಹ ವೈಬ್ರೆಂಟ್ ಸೀರೆಗಳು ಮಾನಿನಿಯರನ್ನು ಸೆಳೆದಿವೆ.
ಮೊಟಿಫ್ನಿಂದ ಅಲಂಕೃತಗೊಂಡ ಸೀರೆಗಳಿವು
ಹೌದು. ಜಾರ್ಜೆಟ್ನ ಫ್ಯಾಬ್ರಿಕ್ನ ಈ ಗೋಲ್ಡನ್ ಬುಟ್ಟಾ ಇರುವಂತಹ ಮೊಟಿಫ್ನಿಂದ ಅಲಂಕೃತಗೊಂಡ ಲೈಟ್ವೈಟ್ ಸೀರೆಗಳು ಈ ಸೀಸನ್ನಲ್ಲಿ ಹೆಚ್ಚು ಟ್ರೆಂಡಿಯಾಗಿವೆ. ಅದರಲ್ಲೂ ಬಬ್ಬಲ್ಗಮ್ ಪಿಂಕ್, ಲೆಮೆನ್ ಯೆಲ್ಲೋ, ನಿಯಾನ್ ಗ್ರೀನ್, ಬ್ಲಡ್ ರೆಡ್ ಸೇರಿದಂತೆ ಬಗೆಬಗೆಯ ವೈಬ್ರೆಂಟ್ ಶೇಡ್ನವು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ.
ರಸಿಕಾ ದುಗಲ್ ವೈಬ್ರೆಂಟ್ ಪಿಂಕ್ ಸೀರೆ
ನಟಿ ರಸಿಕಾ ದುಗಲ್ ಇತ್ತೀಚೆಗೆ ತಮ್ಮ ಸಿನಿಮಾ ಇವೆಂಟ್ನಲ್ಲಿ ಉಟ್ಟುಕೊಂಡ ಫೋಟೋಗಳು ವೈರಲ್ ಆದ ನಂತರವಂತೂ ಈ ಶೈಲಿಯ ಸೀರೆಗಳಿಗೆ ಆನ್ಲೈನ್ ಶಾಪ್ಗಳಲ್ಲೂ ಹುಡುಕುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಅದೇ ಶೇಡ್ನ ಸೀರೆಗೆ ಹೆಚ್ಚು ಬೇಡಿಕೆ ಉಂಟಾಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಸೀರೆಯ ವಿಶೇಷತೆಯೇನು?
ಅಂದಹಾಗೆ, ಗೋಲ್ಡನ್ ಬುಟ್ಟಾ ಇರುವಂತಹ ಸೀರೆಗಳು ಅತಿ ಹೆಚ್ಚಾಗಿ ಸಿಲ್ಕ್ ಹಾಗೂ ಸೆಮಿ ಸಿಲ್ಕ್ ಇಲ್ಲವೇ ಕಾಟನ್ ಸೀರೆಗಳಲ್ಲಿ ನೋಡಬಹುದು. ಆದರೆ, ಇವು ಜಾರ್ಜೆಟ್ನಲ್ಲಿಯೂ ಕೂಡ ಇವು ಲಭ್ಯ. ನಾರ್ತ್ ಇಂಡಿಯಾದಲ್ಲಿ ಈ ಶೈಲಿಯ ಸೀರೆಗಳು ಹೆಚ್ಚು ಪ್ರಚಲಿತದಲ್ಲಿವೆ. ಲೈಟ್ವೈಟ್ ಆಗಿರುವುದರಿಂದ ಮಾನಿನಿಯರಿಗೆ ಪ್ರಿಯವಾಗಿದೆ.
ಜಾರ್ಜೆಟ್ ಗೋಲ್ಡನ್ ಬುಟ್ಟಾ ಸೀರೆ ಪ್ರಿಯರಿಗೆ ಟಿಪ್ಸ್
- ಲೈಟ್ವೈಟ್ ಆಗಿರುವುದರಿಂದ ಉಡುವುದು ಸುಲಭ.
- ನೋಡಲು ಗ್ರ್ಯಾಂಡ್ ಲುಕ್ ನೀಡುತ್ತದೆ.
- ಗ್ಲಾಮರಸ್ ಬ್ಲೌಸ್ ಧರಿಸುವುದರಿಂದ ಆಕರ್ಷಕವಾಗಿ ಕಾಣಿಸಬಹುದು.
- ಸಿಂಪಲ್ ಮೇಕೋವರ್ ಕೂಡ ಚೆನ್ನಾಗಿ ಕಾಣಿಸುತ್ತದೆ.
- ಇಡೀ ದಿನ ಈ ಸೀರೆಯನ್ನು ಉಟ್ಟು ಸುಲಭವಾಗಿ ಕ್ಯಾರಿ ಮಾಡಬಹುದು.