ಅವ್ಯವಸ್ಥೆಯ ಆಗರವಾದ ಕುಷ್ಟಗಿಯ ತಾಯಿ-ಮಕ್ಕಳ ಆಸ್ಪತ್ರೆ
ಒಟ್ಟು 100 ಹಾಸಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಹೊಸ ಕಟ್ಟಡದಲ್ಲೇ ಮೂಲ ಸೌಲಭ್ಯ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕನಿಷ್ಠ ಸೌಲಭ್ಯಗಳಾದ ಶುದ್ಧ ಕುಡಿವ ನೀರು, ಬಾಣಂತಿರಿಗೆ ಬೇಕಾದ ಬಿಸಿ ನೀರಿನ ವ್ಯವಸ್ಥೆ ಸರಿಯಾಗಿ ಇಲ್ಲ. ಆಸ್ಪತ್ರೆ ಮೇಲ್ಚಾವಣಿ ಮೇಲೆ ಅಳವಡಿಸಿರುವ ಸೋಲಾರ್‌ವಾಟರ್ ಹೀಟರ್‌ನ ಟೂಬ್ ಗಳು ಹಾಳಾಗಿವೆ.