Accident Case: ಅಪಘಾತದಲ್ಲಿ ಬಾಲಕನ ಸಾವಿಗೆ ಕಾರಣನಾದ ಬಿಬಿಎಂಪಿ ಲಾರಿ ಚಾಲಕ ಆಸ್ಪತ್ರೆಯಲ್ಲಿ ಸಾವು
ಬೆಂಗಳೂರಿನ ಥಣಿಸಂದ್ರದ ಹೆಗಡೆ ನಗರದ ಬಳಿ ಮಾರ್ಚ್ 29ರಂದು ಬಿಬಿಎಂಪಿ ಕಸದ ಲಾರಿ ಅಪಘಾತವಾಗಿತ್ತು. ಬಿಬಿಎಂಪಿ ಲಾರಿ, ಬೈಕ್ಗೆ ಗುದ್ದಿದ್ದ ಪರಿಣಾಮ 10 ವರ್ಷದ ಬಾಲಕ ಐಮಾನ್ ಸಾವನ್ನಪ್ಪಿದ್ದ. ಬಾಲಕನ ತಂದೆ ಸಣ್ಣಗಾಯಗಳಿಂದ ಪಾರಾಗಿದ್ದರು. ಈ ಸಂದರ್ಭದಲ್ಲಿ ಅಲ್ಲಿ ಸೇರಿ ಒಂದೇ ಸಮುದಾಯದ ಹಲವು ಮಂದಿ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.

ಮೃತ ಚಾಲಕ ಕೊಂಡಯ್ಯ

ಬೆಂಗಳೂರು: 10 ವರ್ಷದ ಬಾಲಕನ ಸಾವಿಗೆ (boy killed) ಕಾರಣವಾದ ಅಪಘಾತ (Accident case) ನಡೆಸಿದ ಬಿಬಿಎಂಪಿ ಕಸದ ಲಾರಿ (BBMP Garbage lorry) ಚಾಲಕ (driver) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಪಘಾತದ ಸಂದರ್ಭದಲ್ಲಿ ಆಕ್ರೋಶಿತ ಸಾರ್ವಜನಿಕರಿಂದ ಈ ಚಾಲಕರ ಮೇಲೆ ಮಾರಣಾಂತಿಕ ಹಲ್ಲೆ (Assaulted) ನಡೆದಿತ್ತು. ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಲಾರಿ ಚಾಲಕ, ಚಿಕಿತ್ಸೆ ಫಲಿಸದೆ ಇಂದು (ಏ.17) ಸಾವನ್ನಪ್ಪಿದ್ದಾರೆ. ಬಿಬಿಎಂಪಿ ಲಾರಿ ಚಾಲಕ ಕೊಂಡಯ್ಯ ಅವರೇ ಮೃತ ದುರ್ದೈವಿ.
ಬೆಂಗಳೂರಿನ ಥಣಿಸಂದ್ರದ ಹೆಗಡೆ ನಗರದ ಬಳಿ ಮಾರ್ಚ್ 29ರಂದು ಬಿಬಿಎಂಪಿ ಕಸದ ಲಾರಿ ಅಪಘಾತವಾಗಿತ್ತು. ಬಿಬಿಎಂಪಿ ಲಾರಿ, ಬೈಕ್ಗೆ ಗುದ್ದಿದ್ದ ಪರಿಣಾಮ 10 ವರ್ಷದ ಬಾಲಕ ಐಮಾನ್ ಸಾವನ್ನಪ್ಪಿದ್ದ. ಬಾಲಕನ ತಂದೆ ಸಣ್ಣಗಾಯಗಳಿಂದ ಪಾರಾಗಿದ್ದರು. ಈ ಸಂದರ್ಭದಲ್ಲಿ ಅಲ್ಲಿ ಸೇರಿ ಒಂದೇ ಸಮುದಾಯದ ಹಲವು ಮಂದಿ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಘಟನೆಯಿಂದ ಆಕ್ರೋಶಗೊಂಡಿದ್ದ ಇವರು ಲಾರಿ ಚಾಲಕನಿಗೆ ಮನಬಂದಂತೆ ಹಲ್ಲೆ ಮಾಡಿದ್ರು. ಬಿಬಿಎಂಪಿ ಕಸದ ಲಾರಿಗೆ ಬೆಂಕಿ ಹಚ್ಚಿ ನಾಶಪಡಿಸಿದ್ದರು. ಉದ್ರಿಕ್ತರ ಗುಂಪು ಚಾಲಕನನ್ನು ಮನಸೋ ಇಚ್ಚೆ ಥಳಿಸಿತ್ತು. ಹಲ್ಲೆ ಪರಿಣಾಮ ಚಾಲಕ ಕೊಂಡಯ್ಯ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಗಂಭೀರ ಸ್ಥಿತಿ ತಲುಪಿದ್ದರು. ಖಾಸಗಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊಂಡಯ್ಯ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಕೊಂಡಯ್ಯ ಮೃತಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಸ್ಥಳದಲ್ಲಿದ್ದ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಗುಂಪಿನಲ್ಲಿದ್ದ ಇನ್ನಷ್ಟು ಮಂದಿಯನ್ನು ಹುಡುಕಲಾಗುತ್ತಿದೆ.
ಇದನ್ನೂ ಓದಿ: Road Accident: ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ 10 ವರ್ಷದ ಬಾಲಕ ಸಾವು; ರೊಚ್ಚಿಗೆದ್ದು ಲಾರಿಗೆ ಬೆಂಕಿ ಹಚ್ಚಿದ ಜನ