Housefull 5: ಬಾಲಿವುಡ್ನ ಬಹುನಿರೀಕ್ಷಿತ ಸಿನಿಮಾ ಹೌಸ್ಫುಲ್ 5 ಸಿನಿಮಾ ರಿವ್ಯೂ ಔಟ್! ಪ್ರೇಕ್ಷಕರ ರಿಯಾಕ್ಷನ್ ಹೇಗಿದೆ?
Housefull 5 movie review: ಬಾಲಿವುಡ್ನ ಬಹು ನಿರೀಕ್ಷಿತ ಹೌಸ್ಫುಲ್ 5 ಸಿನಿಮಾ ಇಂದು ತೆರೆ ಕಂಡಿದೆ. ಸಿನಿಮಾ ರಿಲೀಸ್ ಆಗ್ತಿದ್ದಂತೆ ಪ್ರೇಕ್ಷಕರಿಂದ ವಿಮರ್ಶೆಯೂ ಹೊರಬಿದ್ದಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಿರುವ ಅಭಿಮಾನಿಗಳಿಂದ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಹಾಗಾದರೆ ಸಿನಿಮಾ ಪ್ರಿಯರು ಈ ಸಿನಿಮಾ ಬಗ್ಗೆ ಹೇಳಿದ್ದೇನು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.


ಮುಂಬೈ: ಬಾಲಿವುಡ್ನ ಬಹು ನಿರೀಕ್ಷಿತ ಹೌಸ್ಫುಲ್ 5 ಸಿನಿಮಾ(Housefull 5) ಇಂದು ತೆರೆ ಕಂಡಿದೆ. ಇನ್ನು ಅಕ್ಷಯ್ಕುಮಾರ್ ನಟನೆಯ ಈ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಈ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್, ಸಂಜಯ್ ದತ್, ಫರ್ದೀನ್ ಖಾನ್, ನಾನಾ ಪಾಟೇಕರ್, ಶ್ರೇಯಸ್ , ಜ್ಯಾಕಿ ಶ್ರಾಫ್, ಡಿನೋ ಮೋರಿಯಾ, ಜಾಕ್ವೆಲಿನ್ ಫರ್ನಾಂಡಿಸ್, ನರ್ಗಿಸ್ ಫಖ್ರಿ, ಚಿತ್ರಾಂಗದಾ ಸಿಂಗ್, ಸೋನಂ ಬಜ್ವಾ, ಸೌಂದರ್ಯ ಶರ್ಮಾ, ಚಂಕಿ ಪಾಂಡೆ, ನಿಕಿಟಿನ್ ಧೀರ್ ಮತ್ತು ಜಾನಿ ಲೀವರ್ ಸೇರಿದಂತೆ ಹಲವು ನಟರು ಅಭಿನಯಿಸಿದ್ದಾರೆ. ಅಭಿಮಾನಿಗಳಿಂದ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ಶುಕ್ರವಾರ ಅಭಿಮಾನಿಯೊಬ್ಬರು ಸಿನಿಮಾ ನೋಡಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, "ಈ ಸಿನಿಮಾ ಸಂಪೂರ್ಣ ಹಾಸ್ಯಮಯ ಮನರಂಜನೆಯಿಂದ ಕೂಡಿದೆ. ನೀವು ನಗುತ್ತಾ, ಕೂಗುತ್ತಾ, ಕುಳಿತು ಸಿನಿಮಾ ನೋಡಿ ಎಂದು ಹೇಳಿದ್ದಾರೆ. ಅಕ್ಷಯ್ ಕುಮಾರ್ ಅವರ ಕಾಮಿಡಿ ಟೈಮಿಂಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದು, "ಸಿನಿಮಾದಲ್ಲಿ ಅಕ್ಷಯ್ಕುಮಾರ್ ಅತ್ಯುತ್ತಮವಾಗಿ ನಟಿಸಿದ್ದಾರೆ," ಎಂದು ಉಲ್ಲೇಖಿಸಿದ್ದಾರೆ. ಅಕ್ಷಯ್ ಜೊತೆಗೆ ಚಿತ್ರದಲ್ಲಿ ರಿತೇಶ್ ಮತ್ತು ಅಭಿಷೇಕ್ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಅಭಿನಯ ಕೂಡ ಅದ್ಬುತ ಎಂದು ಸಿನಿಪ್ರಿಯರು ಪ್ರತಿಕ್ರಿಯೆ ನೀಡಿದ್ದಾರೆ.
ಇತರೆ ನಟನಟಿಯರ ಕುರಿತು ಜಾಕ್ಲಿನ್ಫರ್ನಾಂಡಿಸ್ ಮತ್ತು ನರ್ಗಿಸ್ಫಖ್ರಿ ಅವರನ್ನು ನೋಡುವುದು ಒಂದು ಮಜ. ಸೋನಂಬಾಜ್ವಾ ಪಾತ್ರದ ಝಲಕ್ ಕೊನೆಗೆ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತದೆ ಸಂಜಯ್ ದತ್ ಪಾತ್ರದ ಸಸ್ಪೆನ್ಸ್ ಅಂತ್ಯದಲ್ಲಿ ಬಹಿರಂಗವಾಗುತ್ತದೆ. ಈ ಸಿನಿಮಾದ ಕಥೆಯು ಹಾಸ್ಯ ಮತ್ತು ಸಸ್ಪೆನ್ಸ್ ಶೈಲಿಯಲ್ಲಿದೆ. ಎರಡು ವಿಭಿನ್ನ ಅಂತ್ಯಗಳೊಂದಿಗೆ ಕೂಡಿದೆ ಮತ್ತು ಪ್ರತಿಯೊಂದರಲ್ಲೂ ಟ್ವಿಸ್ಟ್ ಇದೆ. ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಈ ಸಿನಿಮಾ, ಸಸ್ಪೆನ್ಸ್, ಮಿಸ್ಟ್ರಿಯಿಂದ ಪ್ರೇಕ್ಷನನ್ನು ಕೊನೆಯವರೆಗೆ ಹಿಡಿದಿಟ್ಟುಕೊಳ್ಳುತ್ತದೆ.
ಈ ಸುದ್ದಿಯನ್ನೂ ಓದಿ: Thug Life Movie: ಕಮಲ್ ಹಾಸನ್ ನಟನೆಯ ʻಥಗ್ ಲೈಫ್ʼ ಫ್ಲಾಪ್? ಮಣಿರತ್ನಂ ಮ್ಯಾಜಿಕ್ ಮಾಯ ಆಗಿದ್ಯಾ?
ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆದ ಹೌಸ್ಫುಲ್ ಸಿನಿಮಾಗಳು:
ಹೌಸ್ಫುಲ್ ಸಿನಿಮಾ ಸೀರಿಸ್ ಇದುವರೆಗೆ ಜಾಗತಿಕವಾಗಿ 788 ಕೋಟಿಯನ್ನು ಗಳಿಸಿ ಬಾಕ್ಸಾಫೀಸ್ನಲ್ಲಿ ದೊಡ್ಡ ಯಶಸ್ಸು ಕಂಡಿದೆ. ಇದರಲ್ಲಿ ಹೌಸ್ಫುಲ್ 4 ಚಿತ್ರ ಮಾತ್ರವೇ ರೂ. 296 ಕೋಟಿ ಕಲೆ ಹಾಕಿದ್ದು ಗಮನಾರ್ಹ. ಇಂತಹ ಬಲಿಷ್ಠ ಹಿನ್ನೆಲೆಯೊಂದಿಗೆ ಬರುತ್ತಿರುವ ಹೌಸ್ಫುಲ್ 5 ಕೂಡ ದೊಡ್ಡ ಮಟ್ಟದ ಯಶಸ್ಸು ಕಾಣುವ ನಿರೀಕ್ಷೆಯಿದೆ.