Toll price hike: ಇಂದಿನಿಂದ ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ಎಲಿವೇಟೆಡ್ ರಸ್ತೆ ಟೋಲ್ ದರ ಹೆಚ್ಚಳ
Toll Price Hike: ಬೆಂಗಳೂರಿನ ಎಲಿವೇಟೆಡ್ ಕಾರಿಡಾರ್ ಟೋಲ್ಗೆ ಒಳಪಟ್ಟ ಎಲೆಕ್ಟ್ರಾನಿಕ್ ಸಿಟಿ ಮತ್ತು ಅತ್ತಿಬೆಲೆ ಟೋಲ್ ಗಳಲ್ಲಿ ನಾಲ್ಕು ಚಕ್ರದ ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳು ಒಂದು ಪ್ರಯಾಣಕ್ಕೆ ರೂ.65, ಎರಡು ಕಡೆಗಿನ ಪ್ರಯಾಣಕ್ಕೆ ರೂಪಾಯಿ 95 ಹಾಗೂ ಮಾಸಿಕ ಪಾಸ್‌ಗೆ ₹1,885 ಶುಲ್ಕ ವಿಧಿಸಲಾಗುತ್ತದೆ.

ಇಲೆಕ್ಟ್ರಾನಿಕ್ ಸಿಟಿ ಟೋಲ್ ಪ್ಲಾಜಾ

ಆನೇಕಲ್: ಇಂದಿನಿಂದ (ಜುಲೈ 1) ನಗರದಲ್ಲಿ ಟೋಲ್ ಫ್ಲಾಜಾ ಶುಲ್ಕ ಹೆಚ್ಚಳವಾಗಿದೆ. ಬೆಂಗಳೂರಿನ ಹೊಸೂರು ರಸ್ತೆಯ ಅತ್ತಿಬೆಲೆ ಮತ್ತು ಎಲೆಕ್ಟ್ರಾನಿಕ್ ಸಿಟಿ (Attibele-Electronic city) ಎಲಿವೇಟೆಡ್ ಕಾರಿಡಾರ್‌ನ ಟೋಲ್ ದರಗಳಲ್ಲಿ (Toll price hike) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಗಣನೀಯ ಏರಿಕೆಯನ್ನು ಘೋಷಿಸಿದೆ. ಕಾರು, ಜೀಪ್, ಲಘು ವಾಹನ, ಭಾರಿ ವಾಹನಗಳು, ಬಸ್‌ಗಳು ಮತ್ತು ಟ್ರಕ್‌ಗಳಿಗೆ ಕನಿಷ್ಠ 5 ರೂಪಾಯಿಗಳ ಏರಿಕೆ ಆಗಿದೆ. ದಿನದ ಟೋಲ್ ದರ, ತಿಂಗಳ ಪಾಸ್ ಮತ್ತು ವಾರ್ಷಿಕ ಪಾಸ್ ದರಗಳಲ್ಲೂ ಏರಿಕೆಯಾಗಿದ್ದು, ಇದು ದೈನಂದಿನ ಪ್ರಯಾಣಿಕರಿಗೆ ಆರ್ಥಿಕ ಹೊರೆಯನ್ನುಂಟುಮಾಡಲಿದೆ.
ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್ ಟೋಲ್ ದರ ವಿವರ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನ ಟೋಲ್ ದರಗಳಲ್ಲಿ ಈ ಕೆಳಗಿನ ಬದಲಾವಣೆಗಳನ್ನು ಗಮನಿಸಬಹುದು:
ಕಾರು, ಜೀಪ್ ಮತ್ತು ನಾಲ್ಕು ಚಕ್ರದ ಲಘು ವಾಹನಗಳು:
ಒಂದು ಬದಿಯ ಪ್ರಯಾಣಕ್ಕೆ ₹65 (ಹಿಂದಿನ ದರ ₹60)
ಎರಡು ಬದಿಯ ಪ್ರಯಾಣಕ್ಕೆ ₹90 (ಹಿಂದಿನ ದರ ₹85)
ದ್ವಿಚಕ್ರ ವಾಹನಗಳು:
ಒಂದು ಮಾರ್ಗದ ಪ್ರಯಾಣಕ್ಕೆ ₹25 (ಯಾವುದೇ ಬದಲಾವಣೆ ಇಲ್ಲ)
ಲಾರಿ (ಟ್ರಕ್) ಮತ್ತು ಬಸ್‌ಗಳು:
ಒಂದು ಬದಿಯ ಪ್ರಯಾಣಕ್ಕೆ ₹175 (ಹಿಂದಿನ ದರ ₹170)
ಮಲ್ಟಿ-ಆಕ್ಸಲ್ ವಾಹನಗಳು:
ಒಂದು ಬದಿಯ ಪ್ರಯಾಣಕ್ಕೆ ₹350 (ಹಿಂದಿನ ದರ ₹345)
ಅತ್ತಿಬೆಲೆ ಟೋಲ್ ದರ ವಿವರ
ಅತ್ತಿಬೆಲೆ ಟೋಲ್ ಬೂತ್‌ನಲ್ಲೂ ದರ ಏರಿಕೆಯಾಗಿದ್ದು, ಹೊಸ ದರಗಳು ಈ ಕೆಳಗಿನಂತಿವೆ:
ಕಾರುಗಳು:
ಒಂದು ಬದಿಯ ಪ್ರಯಾಣಕ್ಕೆ ₹40 (ಹಿಂದಿನ ದರ ₹35)
ಲಘು ವಾಹನಗಳು ಮತ್ತು ಮಿನಿ ಬಸ್:
₹65 (ಹಿಂದಿನ ದರ ₹60)
ಟ್ರಕ್ ಮತ್ತು ಬಸ್:
₹125 (ಹಿಂದಿನ ದರ ₹120)
ದೊಡ್ಡ ಮಲ್ಟಿ-ಆಕ್ಸಲ್ ವಾಹನಗಳು:
ಒಂದು ಟ್ರಿಪ್‌ಗೆ ₹265 (ಹಿಂದಿನ ದರ ₹260)
ಈ ಟೋಲ್ ದರ ಏರಿಕೆಯು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮತ್ತು ಅತ್ತಿಬೆಲೆಯ ಮೂಲಕ ದೈನಂದಿನ ಪ್ರಯಾಣ ಮಾಡುವ ವಾಹನ ಸವಾರರಿಗೆ ಆರ್ಥಿಕ ಒತ್ತಡವನ್ನುಂಟುಮಾಡಲಿದ್ದು, ವಿಶೇಷವಾಗಿ ಎಲೆಕ್ಟ್ರಾನಿಕ್ ಸಿಟಿಯ ಐಟಿ ಕಾರಿಡಾರ್‌ನಲ್ಲಿ ಕೆಲಸ ಮಾಡುವ ಸಾಫ್ಟ್‌ವೇರ್ ಉದ್ಯೋಗಿಗಳು, ಲಾರಿ ಚಾಲಕರು ಮತ್ತು ಬಸ್ ಆಪರೇಟರ್‌ಗಳಿಗೆ ಈ ದರ ಏರಿಕೆ ಗಮನಾರ್ಹ ಪರಿಣಾಮ ಬೀರಲಿದೆ. ಸದ್ಯ ಸಾರ್ವಜನಿಕರು ಈ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ದಿನದ ಟೋಲ್ ದರದ ಜೊತೆಗೆ, ತಿಂಗಳ ಪಾಸ್ ಮತ್ತು ವಾರ್ಷಿಕ ಪಾಸ್‌ಗಳ ದರವೂ ಹೆಚ್ಚಳವಾಗಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಯಾವುದೇ ಸ್ಪಷ್ಟ ಮಾಹಿತಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲವಾದರೂ, ಈ ಏರಿಕೆಯು ದೈನಂದಿನ ಪ್ರಯಾಣಿಕರಿಗೆ ಹೆಚ್ಚುವರಿ ವೆಚ್ಚವನ್ನು ತಂದಿದೆ.
ಇದನ್ನೂ ಓದಿ: Toll hike: ವಾಹನ ಸವಾರರಿಗೆ ಶಾಕ್, ರಾಜ್ಯದಲ್ಲಿ ಟೋಲ್ ದರ ಏರಿಕೆ