IND vs AUS ನಡುವೆ ಸೆಮಿಫೈನಲ್ ಗೆಲ್ಲುವ ನೆಚ್ಚಿನ ತಂಡವನ್ನು ಆರಿಸಿದ ಸುನೀಲ್ ಗವಾಸ್ಕರ್!
Sunil Gavaskar on IND vs AUS Semifinal: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೊದಲನೇ ಸೆಮಿಫೈನಲ್ ಪಂದ್ಯ ಮಾರ್ಚ್ 3 ರಂದು ಮಂಗಳವಾರ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವನ್ನು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಆಯ್ಕೆ ಮಾಡಿದ್ದಾರೆ.

ಭಾರತ vs ಆಸ್ಟ್ರೇಲಿಯಾ ನಡುವಣ ಸೆಮಿಪೈನಲ್ ಪಂದ್ಯ

ದುಬೈ: ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ನಿರ್ಣಾಯಕ ಹಂತವನ್ನು ತಲುಪಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮಾರ್ಚ್ 3 ರಂದು ಮಂಗಳವಾರ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಮೊದಲನೇ ಸೆಮಿಫೈನಲ್‌ನಲ್ಲಿ ಕಾದಾಟ ನಡೆಸಲಿದೆ. ಈ ಪಂದ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಂತೆ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಕೂಡ, ಇಂಡಿತಾ-ಆಸೀಸ್ ನಡುವೆ ಸಮಿಫೈನಲ್ ಪಂದ್ಯವನ್ನು ಗೆಲ್ಲುವ ತಮ್ಮ ನೆಚ್ಚಿನ ತಂಡವನ್ನು ಆಯ್ಕೆ ಮಾಡಿದ್ದಾರೆ.
ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ತಂಡ 44 ರನ್‌ಗಳಿಂದ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ, ಶ್ರೇಯಸ್ ಅಯ್ಯರ್ ಅರ್ಧಶತಕದ ಬಲದಿಂದ ತನ್ನ ಪಾಲಿನ 50 ಓವರ್‌ಗಳಿಗೆ 249 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ ನ್ಯೂಜಿಲೆಂಡ್ ತಂಡ, ಕೇನ್‌ವಿಲಿಯಮ್ಸನ್ (81 ರನ್) ಏಕಾಂಗಿ ಹೋರಾಟದ ಹೊರತಾಗಿಯೂ ವರುಣ್ ಚಕ್ರವರ್ತಿ ಸ್ಪಿನ್ ಮೋಡಿಗೆ ನಲುಗಿ 205 ರನ್‌ಗಳಿಗೆ ಆಲ್‌ಔಟ್ ಆಗಿತ್ತು.
ಈ ಪಂದ್ಯದ ಬಳಿಕ ಇಂಡಿಯಾ ಟುಡೇ ಜೊತೆ ಮಾತನಾಡಿದ್ದ ಸುನೀಲ್ ಗವಾಸ್ಕರ್, ಮಾರ್ಚ್ 4 ರಂದು ನಡೆಯುವ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತ ತಂಡ ಗೆಲುವು ಪಡೆಯಲಿದೆ. ಭಾರತಕ್ಕೆ ಹೋಲಿಕೆ ಮಾಡಿದ ಆಸ್ಟ್ರೇಲಿಯಾ ತಂಡದಲ್ಲಿ ಅತ್ಯುತ್ತಮ ಸ್ಪಿನ್ನರ್‌ಗಳು ಇಲ್ಲ ಹಾಗೂ ಮಿಚೆಲ್ ಸ್ಟಾರ್ಕ್, ಜಾಶ್ ಹೇಝಲ್‌ವುಡ್ ಹಾಗೂ ಪ್ಯಾಟ್ ಕಮಿನ್ಸ್ ಸೇರಿ ಪ್ರಮುಖ ವೇಗಿಗಳ ಸೇವೆಯನ್ನು ಆಸೀಸ್ ಕಳೆದುಕೊಂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
IND vs NZ: ವರುಣ್ ಸ್ಪಿನ್ ಮೋಡಿಗೆ ಸೋತ ಕಿವೀಸ್, ಸೆಮೀಸ್‌ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ಎದುರಾಳಿ!
"ದುಬೈ ಕಂಡೀಷನ್ಸ್ ಅನ್ನು ನೀವು ನೋಡುವುದಾದರೆ, ಇದು ಸ್ಪಿನ್ ಸ್ನೇಹಿಯಾಗಿದೆ ಹಾಗೂ ಆಸ್ಟ್ರೇಲಿಯಾ ತಂಡ ಉತ್ತಮ ದರ್ಜೆಯ ಸ್ಪಿನ್ ದಾಳಿ ಇಲ್ಲ ಹಾಗೂ ಪ್ಯಾಟ್ ಕಮಿನ್ಸ್, ಜಾಶ್ ಹೇಝಲ್‌ವುಡ್ ಹಾಗೂ ಮಿಚೆಲ್ ಸ್ಟಾರ್ಕ್ ಅವರಂಥ ಕೀ ವೇಗಿಗಳನ್ನು ಕೂಡ ಆಸ್ಟ್ರೇಲಿಯಾ ಕಳೆದುಕೊಂಡಿದೆ. ಆಸೀಸ್ ತಂಡದ ಬ್ಯಾಟಿಂಗ್ ವಿಭಾಗ ಚೆನ್ನಾಗಿದೆ. ಅವರ ಬ್ಯಾಟಿಂಗ್ ತುಂಬಾ ಆಕ್ರಮಣಕಾರಿಯಾಗಿದೆ. ಇಲ್ಲಿ ಪ್ರಮುಖ ಅಂಶವೇನೆಂದರೆ, ಆಸ್ಟ್ರೇಲಿಯಾ ತಂಡದ ಬದಲು ಭಾರತ ತಂಡ ದುಬೈನಲ್ಲಿ ಚೇಸ್ ಮಾಡಲಿದೆ," ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.
ದುಬೈನದು ಅಸಾಧ್ಯವಾದ ಪಿಚ್ ಅಲ್ಲ
ಭಾನುವಾರದ ದುಬೈನ ಪಿಚ್ ಬಗ್ಗೆ ಪ್ರತಿಕ್ರಿಯೆ ನೀಡಿದ ಸುನೀಲ್ ಗವಾಸ್ಕರ್, ಇದು ಅಸಾಧ್ಯವಾದ ಪಿಚ್ ಆಗಿರಲಿಲ್ಲ. ಎ ಗುಂಪಿನ ಕೊನೆಯ ಪಂದ್ಯದಲ್ಲಿ ಭಾರತ ನೀಡಿದ್ದ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಟೀಮ್ ಇಂಡಿಯಾ ಸ್ಪಿನ್ನರ್‌ಗಳು ಕಠಿಣ ಸವಾಲನ್ನು ನೀಡಿದ್ದರು. ಇದರಿಂದಾಗಿ ದುಬೈ ಪಿಚ್ ಅಸಾಧ್ಯದ ರೀತಿ ಕಾಣುತ್ತಿತ್ತು ಎಂದು ತಿಳಿಸಿದ್ದಾರೆ.
IND vs NZ: ರವೀಂದ್ರ ಜಡೇಜಾರ ಸ್ಟನಿಂಗ್ ಕ್ಯಾಚ್ ಪಡೆದ ಕೇನ್ ವಿಲಿಯಮ್ಸನ್! ವಿಡಿಯೊ
"ಅಲ್ಲವೇ ಅಲ್ಲ. ನೀವು ನಮ್ಮ ಸ್ಪಿನ್ನರ್‌ಗಳನ್ನು ಆರಂಭಿಕ ಹಂತದಲ್ಲಿ ನೋಡಬಹುದು, ಅವರು ಪಿಚ್‌ನ ಸಹಾಯವನ್ನು ಪಡೆದಿರಲಿಲ್ಲ. ರೋಲ್ ಮಾಡಿದ ಬಳಿಕ ಪಿಚ್ ಸ್ವಲ್ಪ ಚೆನ್ನಾಗಿತ್ತು, ಇಬ್ಬನಿ ಹೊಂದಿಕೊಂಡಿತ್ತು ಹಾಗೂ ಸ್ಪಿನ್ನರ್‌ಗಳಿಗೆ ಚೆಂಡು ಹೆಚ್ಚಿನ ಹಿಡಿತಕ್ಕೆ ಸಿಗುತ್ತಿತ್ತು. ಆದರೆ, ಇದು ಅಸಾಧ್ಯವಾದ ಪಿಚ್ ಅಂತೂ ಅಲ್ಲವೇ ಅಲ್ಲ. ಪಿಚ್‌ನಲ್ಲಿ ಸ್ವಲ್ಪ ತಿರುವು ಇತ್ತು. ಭಾರತದ ಬೌಲರ್‌ಗಳು ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಅಸಾಧ್ಯವಾಗುವಂತೆ ಮಾಡಿದ್ದರು," ಎಂದು ಸುನೀಲ್ ಗವಾಸ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.