Honeytrap Case: ಇನ್ಸ್ಟಾಗ್ರಾಂನಲ್ಲಿ ಮಿಲಿಯನ್ಗಟ್ಟಲೇ ಫಾಲೋವರ್ಸ್... ಫೇಮ್, ನೇಮ್ ಸಿಕ್ತಿದ್ದಂತೆ ಈಕೆ ಮಾಡಿದ ಕೆಲ್ಸ ಎಂತಹದ್ದು ಗೊತ್ತಾ?
Gujarat Honeytrapping case: ಇನ್ಸ್ಟಾಗ್ರಾಮ್ ಖ್ಯಾತಿಯ ಕೀರ್ತಿ ಪಟೇಲ್ ಎಂಬ ಮಹಿಳೆಯನ್ನು ಗುಜರಾತ್ನಲ್ಲಿ ಬಿಲ್ಡರ್ ಒಬ್ಬರನ್ನು ಹನಿಟ್ರ್ಯಾಪ್ ಮಾಡಿ ಕೋಟ್ಯಂತರ ರೂ. ಸುಲಿಗೆ ಮಾಡಲು ಯತ್ನಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಪೊಲೀಸರ ಪ್ರಕಾರ, 1.3 ಮಿಲಿಯನ್ ಇನ್ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವ ಕೀರ್ತಿ ಪಟೇಲ್ ವಿರುದ್ಧ ಕಳೆದ ವರ್ಷ ಜೂನ್ 2 ರಂದು ಸೂರತ್ನಲ್ಲಿ ಪ್ರಕರಣ ದಾಖಲಾಗಿತ್ತು


ಅಹಮದಾಬಾದ್: ಸೂರತ್ನಲ್ಲಿ (Surat) ಒಬ್ಬ ಬಿಲ್ಡರ್ನನ್ನು ಹನಿಟ್ರ್ಯಾಪ್ (Honeytrapping) ಬಲೆಗೆ ಬೀಳಿಸಿ ಕೋಟಿಗಟ್ಟಲೆ ಹಣ ವಸೂಲಿಗೆ ಯತ್ನಿಸಿದ ಆರೋಪದ ಮೇಲೆ 10 ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ (Social Media Influencer) ಕೀರ್ತಿ ಪಟೇಲ್ನನ್ನು (Kirti Patel) ಅಹಮದಾಬಾದ್ನಲ್ಲಿ ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, 1.3 ಮಿಲಿಯನ್ ಇನ್ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವ ಕೀರ್ತಿ ಪಟೇಲ್ ವಿರುದ್ಧ ಕಳೆದ ವರ್ಷ ಜೂನ್ 2 ರಂದು ಸೂರತ್ನಲ್ಲಿ ಪ್ರಕರಣ ದಾಖಲಾಗಿತ್ತು ಮತ್ತು ನಂತರ ನ್ಯಾಯಾಲಯವೊಂದು ಅವರ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ಸೂರತ್ನ ಬಿಲ್ಡರ್ ಒಬ್ಬರನ್ನು ಹನಿ ಟ್ರ್ಯಾಪ್ ಬಲೆಗೆ ಮೋಸದಿಂದ ಸಿಕ್ಕಿಸಿ, ಕೋಟಿಗಟ್ಟಲೆ ಹಣಕ್ಕಾಗಿ ಬೆದರಿಕೆ ಹಾಕಿದ ಆರೋಪ ಕೀರ್ತಿ ಮೇಲಿದೆ. ಈ ಪ್ರಕರಣದಲ್ಲಿ ಇತರ ನಾಲ್ವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಕೀರ್ತಿ ಪಟೇಲ್ ವಿರುದ್ಧ ಭೂಕಬಳಿಕೆ ಮತ್ತು ವಸೂಲಿ ಆರೋಪಗಳಿರುವ ಇತರ ದೂರುಗಳೂ ದಾಖಲಾಗಿವೆ.
ನ್ಯಾಯಾಲಯದ ವಾರಂಟ್ ಇದ್ದರೂ, ಕೀರ್ತಿ ಪಟೇಲ್ ನಗರಗಳನ್ನು ಬದಲಾಯಿಸುತ್ತಾ, ವಿವಿಧ ಸಿಮ್ ಕಾರ್ಡ್ಗಳನ್ನು ಬಳಸುತ್ತಾ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದರು. ಆದರೆ, ಅಹಮದಾಬಾದ್ನ ಸರ್ಖೇಜ್ ಪ್ರದೇಶದಲ್ಲಿ ಅವರ ಸ್ಥಳವನ್ನು ಪತ್ತೆಹಚ್ಚಿ, ಸೂರತ್ ಪೊಲೀಸರು ಸ್ಥಳೀಯ ಪೊಲೀಸರ ಸಹಾಯದಿಂದ ಬುಧವಾರ ಅವರನ್ನು ಬಂಧಿಸಿದರು.
"ಕೀರ್ತಿ ಪಟೇಲ್ನನ್ನು 10 ತಿಂಗಳಿನಿಂದ ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೆವು. ನಮ್ಮ ತಾಂತ್ರಿಕ ತಂಡ ಮತ್ತು ಸೈಬರ್ ತಜ್ಞರ ಸಹಾಯದಿಂದ ಅವರ ಸ್ಥಳವನ್ನು ಸರ್ಖೇಜ್ನಲ್ಲಿ ಕಂಡುಕೊಂಡೆವು. ಅಹಮದಾಬಾದ್ ಪೊಲೀಸರ ಸಹಕಾರದೊಂದಿಗೆ ಅವರನ್ನು ಬಂಧಿಸಲಾಗಿದೆ. ಅವರ ಮೇಲೆ ಹನಿಟ್ರ್ಯಾಪ್, ಹಣ ವಸೂಲಿಗೆ ಯತ್ನಿಸಿದ ಆರೋಪವಿದೆ. ಈ 10 ತಿಂಗಳಲ್ಲಿ ಅವರ ಸ್ಥಳವು ಗುಜರಾತ್ನ ವಿವಿಧ ಭಾಗಗಳಲ್ಲಿ ನಿರಂತರವಾಗಿ ಬದಲಾಗುತ್ತಿತ್ತು. ಐಪಿ ವಿಳಾಸ, ಫೋನ್ ಸಂಖ್ಯೆಗಳು ಮತ್ತು ಸಿಮ್ ಕಾರ್ಡ್ಗಳು ಕೂಡ ಬದಲಾಗುತ್ತಿದ್ದವು. ಇನ್ಸ್ಟಾಗ್ರಾಮ್ನ ಸಹಾಯದಿಂದಲೂ ಅವರ ಸ್ಥಳವನ್ನು ಪತ್ತೆಹಚ್ಚಿದೆವು," ಎಂದು ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ ಅಲೋಕ್ ಕುಮಾರ್ ತಿಳಿಸಿದರು.
"ಕೀರ್ತಿ ಪಟೇಲ್ ವಿರುದ್ಧ ಭೂಕಬಳಿಕೆ ಮತ್ತು ವಸೂಲಿ ಸಂಬಂಧಿಸಿದ ಇತರ ದೂರುಗಳೂ ಇವೆ. ಈ ಪ್ರಕರಣಗಳಲ್ಲಿ ಅವರ ಹೇಳಿಕೆಯನ್ನು ದಾಖಲಿಸಿ, ಮುಂದಿನ ತನಿಖೆ ನಡೆಸುತ್ತೇವೆ," ಎಂದು ಅವರು ಹೇಳಿದರು.