MLA Pradeep Eshwar: ಕಾಂಗ್ರೆಸ್ ಮುಖಂಡ ಕುಪೇಂದ್ರ ಹುಟ್ಟುಹಬ್ಬಕ್ಕೆ ಶುಭ ಕೋರಿದ ಶಾಸಕ ಪ್ರದೀಪ್ ಈಶ್ವರ್
ನಮ್ಮ ತಾತನ ಕಾಲದಿಂದಲೂ ನಾವು ಕಾಂಗ್ರೆಸ್ ನಲ್ಲಿ ದುಡಿದು ಬಂದವರು. ನಮ್ಮ ಶ್ರಮಕ್ಕೆ ಪ್ರತಿ ಫಲ ಸಿಗುವ ಸಮಯ ಬಂದಿದ್ದು ಈ ಅವಧಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಮುಂದೆ ಕರೆದುಕೊಂಡು ಹೋಗಲಾಗುವುದು.ನನಗೆ ಅಧಿಕಾರ ದೊರೆತಾಗ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಕಾರ್ಯೋನ್ಮುಖ ನಾಗಿ ದುಡಿಯುತ್ತೇನೆ


ಚಿಕ್ಕಬಳ್ಳಾಪುರ: ಬರಿ ಕೈಯಲ್ಲಿ ಬಂದಿದ್ದೇವೆ,ಬರೀ ಕೈಯಲ್ಲೇ ಪ್ರಪಂಚ ಬಿಟ್ಟು ಹೋಗುವುದು ಸತ್ಯ. ಬದುಕಿನುದ್ದಕ್ಕೂ ದೇವರು ನೀಡಿರುವ ಆಸ್ತಿ ಅಂತಸ್ತಿನಲ್ಲಿ ಇತರರಿಗೆ ಕೈಲಾದಷ್ಟು ಸಹಾಯ ಮಾಡುವ ಮೂಲಕ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ಸಮಾಜ ಸೇವಕ ಕಾಂಗ್ರೆಸ್ ಮುಖಂಡ ಮಂಡಿಕಲ್ಲು ಕುಪೇಂದ್ರ ತಿಳಿಸಿದರು.
ಭಾನುವಾರ ಹುಟ್ಟುಹಬ್ಬದ ಅಂಗವಾಗಿ,ನಗರದ ಕೈವಾರ ತಾತಯ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರದಲ್ಲಿ ಶಾಸಕ ಪ್ರದೀಪ್ ಈಶ್ವರ್ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ನಡುವೆ ಕಾಂಗ್ರೆಸ್ ಮುಖಂಡ ಅವರಿಗೆ ಶಾಸಕರು ಕೇಕ್ ತಿನ್ನಿಸಿ ಶುಭಾಶಯ ಕೋರಿದರು, ಶೀಘ್ರದಲ್ಲೇ ನಿಮಗೆ ಬೋರ್ಡ್ ಡೈರೆಕ್ಟರ್ ಮಾಡಲಾಗುತ್ತದೆ ಎಂದು ಅಭಯ ನೀಡಿದರು.
ಈ ವೇಳೆ ಕುಪೇಂದ್ರ ಮಾತನಾಡಿ ನನ್ನ ಹುಟ್ಟು ಹಬ್ಬದಂದು ಶಾಸಕರು ನಿಮಗೆ ರಾಜ್ಯ ಮಂಡಳಿಯ ಸ್ಥಾನದ ಬಗ್ಗೆ ಭರವಸೆ ನೀಡಿ ಶುಭ ಸುದ್ದಿ ನೀಡಿದ್ದು ಹುಟ್ಟುಹಬ್ಬದ ಖುಷಿ ದುಪ್ಪಟ್ಟಾಗಿದೆ. ನಮ್ಮ ತಾತನ ಕಾಲದಿಂದಲೂ ನಾವು ಕಾಂಗ್ರೆಸ್ ನಲ್ಲಿ ದುಡಿದು ಬಂದವರು. ನಮ್ಮ ಶ್ರಮಕ್ಕೆ ಪ್ರತಿ ಫಲ ಸಿಗುವ ಸಮಯ ಬಂದಿದ್ದು ಈ ಅವಧಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಮುಂದೆ ಕರೆದುಕೊಂಡು ಹೋಗಲಾಗುವುದು.ನನಗೆ ಅಧಿಕಾರ ದೊರೆತಾಗ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಕಾರ್ಯೋನ್ಮುಖ ನಾಗಿ ದುಡಿಯುತ್ತೇನೆ ಎಂದರು.
ಹುಟ್ಟು ಹಬ್ಬದ ಆಚರಣೆಗ ಕೇವಲ ಖುಷಿಗೆ ಸೀಮಿತವಾಗಬಾರದು. ಅರ್ಥಪೂರ್ಣವಾಗಿ ಆಚರಿಸ ಬೇಕು. ಸತತ ಇಪ್ಪತ್ತು ವರ್ಷಗಳಿಂದ ಸಮಾಜ ಸೇವೆಗೆ ಒತ್ತು ನೀಡುತ್ತಾ ಬಂದಿದ್ದೇನೆ. ಶೈಕ್ಷಣಿಕ ಪುರೋಭಿವೃದ್ದಿಗೆ, ರೋಗಿಗಳಿಗೆ ಚಿಕಿತ್ಸೆಗಾಗಿ ಕೈಲಾದಷ್ಟು ಆರ್ಥಿಕ ನೆರವು ನೀಡುತ್ತಾ ಬಂದಿದ್ದೇನೆ ಎಂದರು.
ಇನ್ನು ಕುಪೇಂದ್ರ ಹುಟ್ಟುಹಬ್ಬಕ್ಕೆ ಶುಭ ಕೋರಿದ ಅನೇಕ ಕಾಂಗ್ರೆಸ್ ಮುಖಂಡರು,ಅಭಿಮಾನಿಗಳು ಅವರು ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಇನ್ನು ಹೆಚ್ಚು ಹೆಚ್ಚು ಬೆಳೆಯಲಿ ಎಂದು ಶುಭ ಹಾರೈಸಿದರು.