Viral Video: ಟಿಕೆಟ್ ಇಲ್ಲದೆ ಎಸಿ ಕೋಚ್‌ನಲ್ಲಿ ಪ್ರಯಾಣ; ಪ್ರಶ್ನಿಸಿದ ಟಿಟಿಇಗೆ ಧಮ್ಕಿ ಹಾಕಿದ ಶಿಕ್ಷಕಿ
Ticketless Teacher Attacks TTE: ಶಿಕ್ಷಕಿಯೊಬ್ಬರು ತಂದೆಯೊಂದಿಗೆ ಟಿಕೆಟ್ ಇಲ್ಲದೆ ಎಸಿ ರೈಲಿನಲ್ಲಿ ಪ್ರಯಾಣಿಸಿದ್ದಲ್ಲದೆ, ರೈಲು ಟಿಕೆಟ್ ಪರೀಕ್ಷಕರಿಗೆ(ಟಿಟಿಇ) ಧಮ್ಕಿ ಹಾಕಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಈ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅವರ ಬೇಜವಾಬ್ದಾರಿ ವರ್ತನೆಗೆ ಭಾರಿ ಟೀಕೆ ವ್ಯಕ್ತವಾಯಿತು.

-

ಪಾಟ್ನಾ: ಬಿಹಾರದ ಶಾಲಾ ಶಿಕ್ಷಕಿಯೊಬ್ಬರು ಟಿಕೆಟ್ ಇಲ್ಲದೆ ಎಸಿ ರೈಲಿನಲ್ಲಿ (AC Coach) ಪ್ರಯಾಣಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಜಗಳವಾಡಿದ್ದಾರೆ. ರೈಲು ಟಿಕೆಟ್ ಪರೀಕ್ಷಕರು (TTE) ರೆಕಾರ್ಡ್ ಮಾಡಿದ ವಿಡಿಯೊದಲ್ಲಿ ಅವರು ವ್ಯಾಪಕವಾಗಿ ಜಗಳವಾಡುತ್ತಿರುವುದು, ಟಿಕೆಟ್ ನೀಡಲು ನಿರಾಕರಿಸುತ್ತಿರುವುದನ್ನು ಕೇಳಬಹುದು. ಟಿಕೆಟ್ ಬಗ್ಗೆ ಪ್ರಶ್ನಿಸಿದ್ದಕ್ಕೆ ರೈಲಿನಿಂದ ಹೊರಬಂದಿದ್ದಾರೆ. ಈ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದ್ದು, ಅವರ ಬೇಜವಾಬ್ದಾರಿ ವರ್ತನೆಗೆ ಟೀಕೆ ವ್ಯಕ್ತವಾಯಿತು.
ಶಿಕ್ಷಕಿಯು ತನ್ನ ತಂದೆಯೊಂದಿಗೆ ಟಿಟಿಇ ಜತೆ ಜಗಳವಾಡುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಪೊಲೀಸ್ ಅಧಿಕಾರಿಗಳು ಮತ್ತು ಸ್ಥಳದಲ್ಲಿದ್ದವರು ಪರಿಸ್ಥಿತಿಯನ್ನು ನಿರ್ವಹಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ವಿಡಿಯೊದಲ್ಲಿ ಶಿಕ್ಷಕಿ ಮತ್ತು ಆಕೆಯ ತಂದೆ ಟಿಟಿಇ ಮೇಲೆ ಪದೇ ಪದೆ ಕೂಗಾಡುತ್ತಿದ್ದಾರೆ. ಅವರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಸ್ಥಳದಲ್ಲಿದ್ದ ಜನರು ಈ ಘಟನೆಯನ್ನು ವೀಕ್ಷಿಸುತ್ತ ನಿಂತಿದ್ದಾರೆ.
ಇಲ್ಲಿದೆ ವಿಡಿಯೊ:
वही बिहार की शिक्षिका है जो बगैर टिकट एसी में बैठी थी और TT से बदतमीजी कर रही थी
— 🇮🇳Jitendra pratap singh🇮🇳 (@jpsin1) October 7, 2025
अब अपने पिताजी को लेकर उसे टीटी को धमकाने चली आई
इस महिला को शिक्षक की नौकरी से बर्खास्त करना चाहिए
यह बच्चों को क्या संस्कार देगी ? क्या पढ़ायेगी ? pic.twitter.com/9IxTX1PA3K
ಟಿಟಿಇ ನಮ್ಮ ವಿಡಿಯೊವನ್ನು ಮಾಡುತ್ತಿದ್ದಾರೆ. ಕಳೆದ ಒಂದು ಗಂಟೆಯಿಂದ ಅದನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಶಿಕ್ಷಕಿ ಹೇಳುವುದನ್ನು ವಿಡಿಯೊದಲ್ಲಿ ಕೇಳಬಹುದು. ಅವನು ನನ್ನ ಟಿಕೆಟ್ ಹರಿದು ಎಸೆದನು ಎಂದು ಶಿಕ್ಷಕರು ಹೇಳುತ್ತಿರುವುದು ಕೂಡ ಕೇಳುತ್ತಿದೆ. ಈ ಬಗ್ಗೆ ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೇಳಿ, ಅಲ್ಲಿ ಕುಳಿತಿರುವ ಪ್ರತಿಯೊಬ್ಬರನ್ನು ಪರೀಕ್ಷಿಸಿ ಎಂದು ಟಿಟಿಇ ಹೇಳಿದ್ದಾರೆ. ಅವನು ಕೆಟ್ಟದಾಗಿ ವರ್ತಿಸುತ್ತಿದ್ದನು ಎಂದು ಕೂಗುತ್ತಾ ಶಿಕ್ಷಕಿ ದೂರಿದ್ದಾರೆ. ಟಿಟಿಇ ರೈಲಿಗೆ ಹಿಂತಿರುಗಿ ಬರುತ್ತಿದ್ದಂತೆ ಅವರನ್ನು ಹಿಂಬಾಲಿಸಿ ಮಾತಿನ ಚಕಮಕಿ ಮುಂದುವರೆಸಿದರು.
ಈ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಬಳಕೆದಾರರು, ಟಿಕೆಟ್ ಇಲ್ಲದೆ ಎಸಿಯಲ್ಲಿ ಕುಳಿತು ಪ್ರಯಾಣಿಸಿದ್ದಲ್ಲದೆ, ಟಿಟಿಇ ಜತೆ ಅನುಚಿತವಾಗಿ ವರ್ತಿಸುತ್ತಿದ್ದ ಬಿಹಾರದ ಅದೇ ಶಿಕ್ಷಕಿ ಅವರು. ಈಗ, ಅವರು ತಮ್ಮ ತಂದೆಯನ್ನು ಕರೆದುಕೊಂಡು ಟಿಟಿಗೆ ಬೆದರಿಕೆ ಹಾಕಲು ಬಂದಿದ್ದಾರೆ. ಈ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಬೇಕು. ಅವರು ಮಕ್ಕಳಿಗೆ ಯಾವ ಮೌಲ್ಯಗಳನ್ನು ಕಲಿಸುತ್ತಾರೆ? ಅವರು ಏನು ಕಲಿಸುತ್ತಾರೆ? ಎಂದು ಬರೆದಿದ್ದಾರೆ.
ಟಿಟಿಇ ತನ್ನ ಟಿಕೆಟ್ ಹರಿದು ಎಸೆದಿದ್ದಾರೆ ಎಂದು ಅವರು ಹೇಳಿಕೊಂಡಿದ್ದರೂ, ಶಿಕ್ಷಕಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಆರಂಭದಲ್ಲಿ ತಮ್ಮ ಫೋನ್‌ನಲ್ಲಿ ಕಾರ್ಯನಿರತರಾಗಿರುವಂತೆ ನಟಿಸುವ ಮೂಲಕ ಟಿಟಿಇಯನ್ನು ನಿರ್ಲಕ್ಷಿಸಿದ್ದರು ಎನ್ನಲಾಗಿದೆ. ಟಿಟಿಇ ಶಾಂತವಾಗಿ, ನಿಮ್ಮ ಬಳಿ ಟಿಕೆಟ್ ಇದ್ದರೆ ದಯವಿಟ್ಟು ತೋರಿಸಿ ಮೇಡಂ ಎಂದು ಕೇಳಿಕೊಂಡಿದ್ದಾರೆ. ಕೆಲವು ಸೆಕೆಂಡುಗಳ ನಂತರ, ಶಿಕ್ಷಕಿ ಎದ್ದು ನಿಂತು ಅವರು ರೆಕಾರ್ಡ್ ಮಾಡುತ್ತಿದ್ದ ಫೋನ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ಟಿಟಿಇ ಅದನ್ನು ಮುಟ್ಟದಂತೆ ಎಚ್ಚರಿಸಿದರು.
ನೀವು ಒಬ್ಬ ಮಹಿಳೆಗೆ ಕಿರುಕುಳ ನೀಡಲು ಪ್ರಯತ್ನಿಸುತ್ತಿದ್ದೀರಿ. ನಾನು ಹೋಗದಿದ್ದರೆ ನೀವು ಏನು ಮಾಡುತ್ತೀರಿ? ಎಂದು ಶಿಕ್ಷಕಿ ಪ್ರಶ್ನಿಸಿದ್ದಾಳೆ. ಆದರೂ ಟಿಟಿಇ ಶಾಂತವಾಗಿದ್ದರು. ಕೊನೆಗೆ ಮಹಿಳೆ ಮತ್ತು ಆಕೆಯ ತಂದೆ ರೈಲಿನಿಂದ ಹೊರನಡೆದಿದ್ದಾರೆ. ಆದರೂ ತನ್ನದೇನು ತಪ್ಪಿಲ್ಲ ಎಂಬಂತೆ ವರ್ತಿಸಿದ್ದಾರೆ.