Viral Video: ಕೆಂಪು ಟೈ ಧರಿಸಿ ಟ್ರಂಪ್ ಗಮನ ಸೆಳೆಯಲು ಯತ್ನಿಸಿದ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ; ಕಾರಣವೇನು?
ಕೆನಡಾದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕ ಶೇ. 35ರಷ್ಟು ಸುಂಕವನ್ನು ವಿಧಿಸಿದ ತಿಂಗಳ ಬಳಿಕ ಮಂಗಳವಾರ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಭೇಟಿಯಾಗಿದ್ದಾರೆ. ಈ ವೇಳೆ ಮಾರ್ಕ್ ಕಾರ್ನಿ ಕೆಂಪು ಬಣ್ಣದ ಟೈ ಧರಿಸಿ ಟ್ರಂಪ್ ಅವರ ಗಮನ ಸೆಳೆಯಲು ಪ್ರಯತ್ನಿಸಿದರು.

-

ವಾಷಿಂಗ್ಟನ್: ಕೆಂಪು ಟೈ ಧರಿಸಿಕೊಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರನ್ನು ಮಂಗಳವಾರ ಭೇಟಿಯಾದ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ (Canadian Prime Minister Mark Carney), ಇದನ್ನು ನಾನು ನಿಮಗಾಗಿ ಧರಿಸಿದ್ದು ಎಂದು ಹೇಳಿ ಅವರ ಗಮನ ಸೆಳೆಯಲು ಪ್ರಯತ್ನಿಸಿದರು. ಕೆನಡಾದಿಂದ (Canada) ಆಮದಾಗುವ ಸರಕುಗಳ ಮೇಲೆ ಅಮೆರಿಕ ಶೇ. 35ರಷ್ಟು ಸುಂಕವನ್ನು ವಿಧಿಸಿದ ತಿಂಗಳ ಬಳಿಕ ಶ್ವೇತಭವನದಲ್ಲಿ (White House) ಭೇಟಿಯಾದ ಟ್ರಂಪ್ ಮತ್ತು ಕಾರ್ನಿ ಪರಸ್ಪರ ಕೈಕುಲುಕಿಕೊಂಡು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಮಂಗಳವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶ್ವೇತಭವನದಲ್ಲಿ ಭೇಟಿಯಾದರು. ಈ ವೇಳೆ ಟ್ರಂಪ್ ಅವರನ್ನು ಹೊಗಳಿದ ಕಾರ್ನಿ, ಈ ಸಂದರ್ಭದಲ್ಲಿ ಯಾವುದೇ ವಿಚಾರದಲ್ಲೂ ತಾವು ಕಡೆಗಣನೆ ಆಗದಂತೆ ಎಚ್ಚರಿಕೆ ವಹಿಸಿದರು. ಇದರಲ್ಲಿ ಅವರು ಧರಿಸಿದ ಟೈ ಕೂಡ ಸೇರಿತ್ತು.
ಟ್ರಂಪ್ ಜತೆ ಮಾತನಾಡುವಾಗ ಕಾರ್ನಿ, ನಾನು ನಿಮಗಾಗಿ ಕೆಂಪು ಬಣ್ಣವನ್ನು ಧರಿಸಿದ್ದೆ ಎಂದು ಹೇಳಿದರು. ಆಗ ಟ್ರಂಪ್ ಅವರ ಕೈಕುಲುಕಿದರು. ಅಧ್ಯಕ್ಷರ ಭವನದ ಹೊರಗೆ ಅವರಿಬ್ಬರೂ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಟ್ರಂಪ್ ಜತೆ ಲಘುವಾಗಿ ಹಾಸ್ಯ ಮಾಡಿದ ಕಾರ್ನಿ ವಿಶಿಷ್ಟವಾದ ರಿಪಬ್ಲಿಕನ್ ಬ್ರ್ಯಾಂಡಿಂಗ್‌ಗೆ ಹೊಂದಿಕೆಯಾಗುವಂತೆ ತನ್ನ ಕೆಂಪು ಬಣ್ಣದ ಟೈ ಅನ್ನು ಟ್ರಂಪ್‌ಗೆ ತೋರಿಸಿದರು. ಟ್ರಂಪ್ ಕೆನಡಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ. 35ರಷ್ಟು ಸುಂಕವನ್ನು ವಿಧಿಸಿದ ತಿಂಗಳ ಬಳಿಕ ಎರಡು ದೇಶಗಳ ಇಬ್ಬರು ನಾಯಕರು ಪರಸ್ಪರ ಭೇಟಿಯಾಗಿ ಸ್ನೇಹಪರ ನಿಲುವನ್ನು ಪ್ರದರ್ಶಿಸಿದರು. ಇದು ಎರಡು ರಾಷ್ಟ್ರಗಳ ನಡುವಿನ ವ್ಯಾಪಾರ ಒಪ್ಪಂದದತ್ತ ಪ್ರಮುಖ ಹೆಜ್ಜೆ ಎಂದು ಶ್ಲಾಘಿಸಿದರು.
‘I wore RED for you’ — Canada’s PM Carney buttering up Trump before talks
— RT (@RT_com) October 7, 2025
Reporter asks about Hamas attack anniversary
‘Thank you very much everybody’ pic.twitter.com/vG4JDvk7B2
ಅಮೆರಿಕ ಸುಂಕಗಳ ಮೇಲೆ ಕೆಲವು ರಿಯಾಯಿತಿಗಳನ್ನು ನೀಡಿದ್ದು, ಕಾರ್ನಿ ಏಪ್ರಿಲ್‌ನಲ್ಲಿ ಅಧಿಕಾರ ವಹಿಸಿಕೊಂಡ ಅನಂತರ ಎರಡನೇ ಬಾರಿಗೆ ಶ್ವೇತಭವನಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಪದೇ ಪದೆ ಟ್ರಂಪ್ ಅವರನ್ನು ಹೊಗಳಿದರು.
ಅಮೆರಿಕವು ಕೆನಡಾದ ಪ್ರಮುಖ ಆರ್ಥಿಕ ಪಾಲುದಾರ ರಾಷ್ಟ್ರ ಎನಿಸಿಕೊಂಡಿದೆ. ಕೆನಡಾದ ರಫ್ತಿನ ಶೇ. 75ರಷ್ಟು ಭಾಗ ಅಮೆರಿಕದ ದಕ್ಷಿಣ ಗಡಿಯಾದ್ಯಂತ ಮಾರಾಟವಾಗುತ್ತಿದೆ ಎಂಬುದು ಗಮನಾರ್ಹ ಸಂಗತಿ.
ಇದನ್ನೂ ಓದಿ: Military Operation: ಪಾಕಿಸ್ತಾನದಲ್ಲಿ ಬೃಹತ್ ಸೇನಾ ಕಾರ್ಯಾಚರಣೆ; 11 ಸೈನಿಕರು, 19 ಭಯೋತ್ಪಾದಕರು ಬಲಿ
ಕೆಲವು ದಿನಗಳ ಹಿಂದೆ ಕೆನಡಾ ಮತ್ತು ಅಮೆರಿಕದ ವಿಲೀನದ ಬಗ್ಗೆ ಟ್ರಂಪ್ ವ್ಯಂಗ್ಯವಾಡಿದ್ದರು. ಅವರು ಕೆನಡಾವನ್ನು 51 ನೇ ಯುಎಸ್ ರಾಜ್ಯವಾಗಬೇಕು ಎಂಬುದಾಗಿ ಹೇಳಿಕೊಂಡಿದ್ದರು.