Chikkaballapur News: ತಪ್ಪಿತಸ್ಥರಿಗೆ ಕಾನೂನಿನಂತೆ ಶಿಕ್ಷೆಯಾಗಬೇಕು
ಜಿಲ್ಲೆಯ ಚೇಳೂರು ತಾಲ್ಲೂಕಿನ ಎಂ. ನಲ್ಲಗುಟ್ಲಹಳ್ಳಿ ಶ್ರೀ ಮಹರ್ಶಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ನಿಲಯದಲ್ಲಿ ಮಕ್ಕಳ ಮೇಲೆ ಅಲ್ಲಿನ ಶಿಕ್ಷಕವರ್ಗ, ರಾತ್ರಿ ಕಾವಲುಗಾರ, ಹಾಗೂ ನಿಲಯಪಾಲಕರು ನಡೆಸುತ್ತಿರುವ ದೌರ್ಜನ್ಯದ ಬಗ್ಗೆ, ಮಕ್ಕಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ದಾಖಲೆ ಸಮೇತ ಜಿಲ್ಲಾ ಪರಿಶಿಷ್ಟ ಪಂಗಡಗಳ ಇಲಾಖೆ, ಮಕ್ಕಳ ರಕ್ಷಣಾ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ದೂರನ್ನು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದೇವೆ.

ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷಿಯಲ್ಲಿ ಎಂ. ನಲ್ಲಗುಟ್ಲಹಳ್ಳಿ ಶ್ರೀ ಮಹರ್ಶಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ನಿಲಯದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಸಂಘಟನೆಗಳ ಮುಖಂಡರು ಮಾತನಾಡಿದರು.

ಚಿಕ್ಕಬಳ್ಳಾಪುರ : ಚೇಳೂರು ತಾಲ್ಲೂಕಿನ ಎಂ. ನಲ್ಲಗುಟ್ಲಹಳ್ಳಿ ಶ್ರೀ ಮಹರ್ಶಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ನಿಲಯದಲ್ಲಿ ಮಕ್ಕಳ ಮೇಲೆ ಅಲ್ಲಿನ ಶಿಕ್ಷಕವರ್ಗ, ರಾತ್ರಿ ಕಾವಲುಗಾರ, ಹಾಗೂ ನಿಲಯಪಾಲಕರು ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಕಾನೂನಿನಂತೆ ಶಿಕ್ಷೆಯಾಗಬೇಕು ಎಂದು ಜೈ ಕರುನಾಡು ಕೂಲಿ ಕಾರ್ಮಿಕ ಮತ್ತು ರೈತ ರಕ್ಷಣಾ ಸೇನೆ ಹಾಗೂ ಈ ಧರೆ ಸಮತಾ ಸೇನೆಯ ಮುಖಂಡರು ಒತ್ತಾಯಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಚೇಳೂರು ತಾಲ್ಲೂಕಿನ ಎಂ. ನಲ್ಲಗುಟ್ಲಹಳ್ಳಿ ಶ್ರೀ ಮಹರ್ಶಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ನಿಲಯದಲ್ಲಿ ಮಕ್ಕಳ ಮೇಲೆ ಅಲ್ಲಿನ ಶಿಕ್ಷಕವರ್ಗ, ರಾತ್ರಿ ಕಾವಲುಗಾರ, ಹಾಗೂ ನಿಲಯಪಾಲಕರು ನಡೆಸುತ್ತಿರುವ ದೌರ್ಜನ್ಯದ ಬಗ್ಗೆ, ಮಕ್ಕಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ದಾಖಲೆ ಸಮೇತ ಜಿಲ್ಲಾ ಪರಿಶಿಷ್ಟ ಪಂಗಡಗಳ ಇಲಾಖೆ, ಮಕ್ಕಳ ರಕ್ಷಣಾ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ದೂರನ್ನು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದೇವೆ. ಆದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸದೆ ನಿರ್ಲಕ್ಷತನ ತೋರಿದ್ದಾರೆ. ಪರಿಣಾಮ ಮಕ್ಕಳ ಮೇಲೆ ದೌಜನ್ಯ ಇನ್ನಷ್ಟು ಹೆಚ್ಚಾಗಿದೆ. ಜಿಲ್ಲಾಧಿಕಾರಿಗಳು ಕೂಡಲೇ ಈ ಸಂಬಂಧ ಸ್ಥಳತನಿಖೆ ಮಾಡಿ ಮಕ್ಕಳಿಂದ ಖುದ್ದು ಮಾಹಿತಿ ಪಡೆದು ಕ್ರಮಕ್ಕೆ ಮುಂದಾಗಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ವಿದ್ಯಾರ್ಥಿಗಳು, ಪೋಷಕರು, ಸಂಘಟನೆಗಳ ಕಾರ್ಯಕರ್ತರು ಮುಖಂಡರು ಸೇರಿ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಈಧರೆ ಪ್ರಕಾಶ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: Chikkaballapur News: ಪರಿಶ್ರಮ ಮತ್ತು ತಾಳ್ಮೆಯಿಂದ ಮಾತ್ರ ಯಶಸ್ಸು: ಪೆರೆಸಂದ್ರ ಎಂ.ವೆಂಕಟೇಶ್
ವಸತಿ ಶಾಲೆಯ ವಾರ್ಡನ್ ನಾಗರಾಜ್ ಎಂಬುವರು ಸರಿಯಾಗಿ ವಸತಿ ಶಾಲೆಗೆ ಹೋಗುವುದೆ ಇಲ್ಲ. ಅಲ್ಲಿನ ಸಿಬ್ಬಂದಿ ಮಕ್ಕಳನ್ನು ಶೌಚಾಲಯ ಸ್ವಚ್ಚತೆಗಿಳಿಸಿರುತ್ತಾರೆ. ಮೆನು ಪ್ರಕಾರ ವಸತಿ ಶಾಲೆ ಯಲ್ಲಿರುವ ಸುಮಾರು ೭೦ ಮಕ್ಕಳಿಗೆ ತಿಂಡಿ ತಿನಿಸುಗಳು ನೀಡುವುದಿಲ್ಲ. ಹಾರ್ಲಿಕ್ಸ್ ಭೂಸ್ಟ್ ನೀಡದೆ ಕಳಪೆ ಮಟ್ಟದ ಆಹಾರ ನೀಡಿದ್ದು, ಹೋಂ ವರ್ಕ್ ಬರೆದುಕೊಳ್ಳಲು ಅಗತ್ಯ ನೋಟ್ ಪುಸ್ತಕ ಗಳನ್ನು ಸಹ ನೀಡಿರುವುದಿಲ್ಲವೆಂದು ಅನೇಕ ಮಕ್ಕಳು ನಮ್ಮೊಂದಿಗೆ ಸಂಘಟನೆಯ ಪದಾಧಿಕಾರಿ ಗಳೊಂದಿಗೆ ತಮಗಾಗುತ್ತಿರುವ ಸಂಕಟವನ್ನು ಹೇಳಿಕೊಂಡಿದ್ದಾರೆ.
ಮಕ್ಕಳು ಸಿಬ್ಬಂದಿಯ ಬಗ್ಗೆ ಆರೋಪಿಸಿರುವ ವಿಚಾರಗಳನ್ನು ನಮ್ಮತಂಡ ಜಿಲ್ಲಾ ಪರಿಶಿಷ್ಟ ವರ್ಗಗಳ ಇಲಾಖೆ ಜಿಲ್ಲಾ ನಿರ್ದೇಶಕ ಪ್ರವೀಣ್ ಪಾಟೀಲ್ ಅವರಿಗೆ ತಿಳಿಸಿ ಈ ಸಂಬಂಧ ಕ್ರಮವಹಿಸಲು ದೂರು ನೀಡಿ ಹದಿನೈದು ದಿನಗಳಾದರೂ ಯಾವುದೇ ಕ್ರಮ ವಹಿಸದೇ ನಿರ್ಲಕ್ಷತನ ತೋರುತ್ತಿದ್ದಾರೆ.ಇದೂ ಕೂಡ ಮಕ್ಕಳ ಮೇಲಿನ ಅವರ ದಬ್ಬಾಳಿಕೆ ಹೆಚ್ಚಾಗಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಸತಿ ನಿಲಯದಲ್ಲಿ ಮಕ್ಕಳ ಮೇಲೆ ದೌರ್ಜನ ಮಾಡಿ ಹಲ್ಲೆ ಮಾಡಿರುವ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆಗೆ ದೂರು ನೀಡಿದರೂ ಇದುವರೆಗೂ ಯಾವುದೇ ಕ್ರಮ ವಹಿಸಿರುವುದಿಲ್ಲ. ಮಕ್ಕಳ ರಕ್ಷಣಾ ಇಲಾಖೆಯಿಂದಲೇ ಮಕ್ಕಳಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಈ ಕಛೇರಿ ಇರುವುದಾದರೂ ಯಾವ ಪುರುಶಾರ್ಥಕ್ಕಾಗಿ ಎಂದು ಬೇಸರ ವ್ಯಕ್ತಪಡಿಸಿದರು.
ಬೈಯಪ್ಪನಹಳ್ಳಿ ವಿಜಯ್ ಕುಮಾರ್ ಮಾತನಾಡಿ ಎಂ ನಲ್ಲಗುಟ್ಲಹಳ್ಳಿ ವಸತಿ ಶಾಲೆಯಲ್ಲಿ ಅಶ್ವಥಮ್ಮ ಮತ್ತು ಆದಿನಾರಾಯಣರೆಡ್ಡಿ ಎಂಬುವರು ಅತಿಥಿ ಶಿಕ್ಷಕರಾಗಿದ್ದಾರೆ.ಇವರು ಹಗಲು ಶಿಕ್ಷಕರಾಗಿ, ರಾತ್ರಿ ಕಾವಲುಗಾರರಾಗಿ ದ್ವಿಪಾತ್ರ ನಿರ್ವಹಿಸುತತಿದ್ದು ಎರಡೂ ಕೆಲಸಗಳಿಗೆ ಸಂಬAಧಿಸಿದAತೆ ಹಾಜರಾತಿ ವಹಿಯಲ್ಲಿ ಸಹಿ ಮಾಡಿ ವೇತನ ಪಡೆಯುತ್ತಾ, ಮಕ್ಕಳ ಮೇಲೆ ಹಲ್ಲೆ ನಡೆಸುತ್ತಾ ಅವರ ಹಕ್ಕುಗಳನ್ನು ದಮನ ಮಾಡುತ್ತಿದ್ದಾರೆ. ಶಿಕ್ಷಕಿ ಅಶ್ವಥಮ್ಮ ಮಕ್ಕಳ ಮೇಲೆ ದೈಹಿಕ ಹಲ್ಲೆ ಮಾಡಿರುವ ವಿಡಿಯೋಗಳನ್ನು ಮೇಲಾಧಿಕಾರಿಗಳಿಗೆ ನೀಡಿ ದೂರು ನೀಡಲಾಗಿದೆ. ಇದರಿಂದ ಕೆರಳಿದ ಈ ದಂಪತಿಗಳು ದೂರು ಹೇಳಿಕೊಂಡ ಮಕ್ಕಳಿಗೆ ಅನ್ನ ನೀರು ನೀಡದೆ ಕೊಠಡಿಯಲ್ಲಿ ಕೂಡಿಹಾಕಿ ಪ್ರಾಣಬೆದರಿಕೆ ಹಾಕಿದ್ದಾರೆ.ಇವರನ್ನು ಕೂಡಲೇ ಕೆಲಸದಿಂದ ತೆಗೆದು ಹಾಕಿ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕು ಎಂದು ಮಾಧ್ಯಮದ ಮೂಲಕ ಮನವಿ ಮಾಡಿದರು.
ಸದರಿ ವಸತಿ ನಿಲಯದ ಅತಿಥಿ ಶಿಕ್ಷಕಿಯ ಪತಿ ಅಶೋಕ ಮಾತನಾಡಿ ಚೇಳೂರು ತಾಲ್ಲೂಕಿನ ಎಂ. ನಲ್ಲಗುಟ್ಲಹಳ್ಳಿ ಶ್ರೀ ಮಹರ್ಶಿ ಮಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ಮಾಜಿ ವಾರ್ಡನ್ ಎಸ್. ಗಣೇಶ್ ಎಂಬುವರು ಒಂದು ತಿಂಗಳ ಹಿಂದೆ ರಾತ್ರಿ ವೇಳೆ ೧೦ ಗಂಟೆ ಸಮಯದಲ್ಲಿ ನನ್ನ ಪತ್ನಿ ಶಾಮಲ ಎಂಬುವರಿಗೆ ಕೈಹಿಡಿದು ಎಳೆದಾಡಿ ಬಲಾತ್ಕಾರಕ್ಕೆ ಯತ್ನಿಸಿದ್ದಾರಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಅನುಚಿತವಾಗಿ ವರ್ತಿಸಿರುತ್ತಾರೆ. ಅವರಿಗೆ ಜೊತೆಯಾಗಿ ಅಶ್ವಥಮ್ಮ ಮತ್ತು ಆದಿನಾರಾಯಣರೆಡ್ಡಿ ಎಂಬುವರಿದ್ದು, ಜಾತಿ ನಿಂದನೆ ಮಾಡಿ ಅವಮಾನಿಸಿದ್ದಾರೆ. ಈ ಬಗ್ಗೆ ಚೇಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಇದುವರೆಗೂ ಯಾವುದೇ ಕ್ರಮ ವಹಿಸಿರುವುದಿಲ್ಲ.
ಇವರುಗಳ ಮೇಲೆ ದೂರು ನೀಡಿದ ಹಿನ್ನೆಲೆ ಕಾವಲುಗಾರ ಕೇಶವ ಎಂಬಾತ ನನ್ನ ಮಗಳ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ನನ್ನ ಮಗಳಿಗೆ ಊಟ ನೀಡದೆ ಕಿರುಕುಳ ನೀಡಿದ್ದಾರೆ. ಸದರಿ ಕೇಶವ ಎಂಬುವರ ವಿರುದ್ದವೂ ದೂರು ನೀಡಿದ್ದರೂ ಇದುವರೆಗೂ ಯಾವುದೇ ಕ್ರಮ ವಹಿಸಿ ನ್ಯಾಯ ನೀಡಿರುವುದಿಲ್ಲ.ಇದು ಹೀಗೇ ಮುಂದುವರೆದಲ್ಲಿ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ನೋವಿನಿಂದ ನುಡಿದರು.
ಈ ಸಂದರ್ಭದಲ್ಲಿ ಈ ಧರೆ ಸಮತಾ ಸೇನೆ ಸಂಸ್ಥಾಪಕರಾದ ಈ ಧರೆ ಪ್ರಕಾಶ್, ಜೈ ಕರುನಾಡು ಕೂಲಿ ಕಾರ್ಮಿಕ ಮತ್ತು ರೈತ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಬೈಯಪ್ಪನಹಳ್ಳಿ ವಿಜಯ್ ಕುಮಾರ್, ಈ ಧರೆ ಸಮತಾ ಸೇನೆ ತಾಲ್ಲೂಕು ಅಧ್ಯಕ್ಷ ವೆಂಕಟರಾಮಪ್ಪ, ಉಪಾಧ್ಯಕ್ಷ ವೆಂಕಟರಮಣಪ್ಪ, ಶಿಕ್ಷಕಿ ಶಾಮಲ ಪತಿ ಅಶೋಕ್ ಉಪಸ್ಥಿತರಿದ್ದರು.